newsfirstkannada.com

×

ನನ್ಮಗಂದ್‌.. ಬಿಗ್‌ ಬಾಸ್ ಸೀಸನ್ 11ಕ್ಕೆ ಹುಚ್ಚ ವೆಂಕಟ್‌? ಈ ವಿಡಿಯೋ ನೋಡಿ!

Share :

Published September 27, 2024 at 5:38pm

Update September 27, 2024 at 5:46pm

    ಸೀಸನ್ 11 ಬಿಗ್‌ ಬಾಸ್ ಮನೆಗೆ ಯಾರು ಹೋಗ್ತಾರೆ? ಯಾರು ಹೋಗಲ್ಲ?

    ನಿಮ್ಮನ್ನು ಏನ್ ಕರೆಯೋದು ಸರ್ ಅಂಗೆ ನುಗ್ಬಿಡಿ ಎಂದ ವೆಂಕಟ್ ಫ್ಯಾನ್ಸ್‌!

    ಕಿಚ್ಚ ಸುದೀಪ್ ಅವರಿಗೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಹೇಳಿದ್ದೇನು?

ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಮುನ್ನವೇ ಹೊಸ ಅಧ್ಯಾಯ ಅನ್ನೋ ಕಿಚ್ಚು ಹಚ್ಚಿದೆ. ಕನ್ನಡ ಕಿರುತೆರೆಯಲ್ಲಿ ಬಿಗ್‌ ಬಾಸ್ ಹವಾ ಮತ್ತೊಮ್ಮೆ ಶುರುವಾಗೋದಕ್ಕೆ ಕೌಂಟ್‌ಡೌನ್ ಕೂಡ ಸ್ಟಾರ್ಟ್‌ ಆಗಿದೆ. ಸೀಸನ್ 11 ಪ್ರೋಮೋ ರಿಲೀಸ್ ಆದ ಬಳಿಕ ಈ ಬಾರಿ ಬಿಗ್‌ಬಾಸ್ ಮನೆಗೆ ಯಾರು ಹೋಗುತ್ತಾರೆ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ.

ಇದನ್ನೂ ಓದಿ: ಬಿಗ್‌ ಬಾಸ್ ಮನೆಗೆ ಮೊದಲು ಬಲಗಾಲಿಟ್ಟು ಹೋಗೋರು ಇವರೇನಾ? BBK11 ಫಸ್ಟ್ ಲಿಸ್ಟ್‌ನ ಸೀಕ್ರೆಟ್ ಏನು? 

ಬಿಗ್‌ ಬಾಸ್ ಮನೆಗೆ ಯಾರು ಹೋಗ್ತಾರೆ? ಯಾರು ಹೋಗಲ್ಲ ಅನ್ನೋ ಮಾತುಗಳ ಮಧ್ಯೆ ಬಿಗ್‌ಬಾಸ್ ಸೀಸನ್ 3ರ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್‌ ದಿಢೀರನೇ ಪ್ರತ್ಯಕ್ಷರಾಗಿದ್ದಾರೆ. ಬಿಗ್‌ ಬಾಸ್ ಸೀಸನ್ 11ರ ಬಗ್ಗೆ ಮಾತನಾಡಿರುವ ಹುಚ್ಚ ವೆಂಕಟ್ ಅವರು ಕಲರ್ಸ್ ಕನ್ನಡ ಹಾಗೂ ಕಿಚ್ಚ ಸುದೀಪ್ ಅವರಿಗೆ ನೇರವಾಗಿ ವಿಶೇಷವಾದ ಮನವಿ ಮಾಡಿದ್ದಾರೆ.

ಬಿಗ್‌ಬಾಸ್ ಸೀಸನ್ 3ರಲ್ಲಿ ಹುಚ್ಚ ವೆಂಕಟ್ ಅವರು ನನ್ಮಗಂದ್.. ಬ್ಯಾನ್ ಆಗ್ಬೇಕು ಅಂತ ಅಬ್ಬರಿಸುತ್ತಿದ್ದರು. ಆದರೆ ಈಗ ಹುಚ್ಚ ವೆಂಕಟ್‌ ಅವರ ವರಸೆ ಬದಲಾಗಿದೆ. ವಿಡಿಯೋ ಪೋಸ್ಟ್ ಮಾಡಿರುವ ಹುಚ್ಚ ವೆಂಕಟ್, ಕಲರ್ಸ್ ಕನ್ನಡ ಹಾಗೂ ಕಿಚ್ಚ ಸುದೀಪ್ ಅವರಿಗೆ ರಿಕ್ವೆಸ್ಟ್ ಮಾಡಿದ್ದಾರೆ.

ನನಗೆ ಒಂದು ಅವಕಾಶ ಕೊಡಿ ಮತ್ತೆ ಬಿಗ್‌ ಬಾಸ್ ಮನೆಗೆ ನಾನು ಬರಬೇಕು. ಖಂಡಿತವಾಗಿಯೂ ನಾನು ಯಾರ ಜೊತೆಗೂ ಗಲಾಟೆ ಮಾಡಲ್ಲ. ನಾನು ಎಲ್ಲಾ ಟಾಸ್ಕ್‌ಗಳನ್ನೂ ಮಾಡುತ್ತೇನೆ. ನನಗೆ ಒಂದು ಅವಕಾಶ ಮಾಡಿಕೊಡಿ. ಬಿಗ್‌ಬಾಸ್ ಮನೆಗೆ ಒಂದು ದಿನಕ್ಕೆ ಕರೆದರೂ ಬರುತ್ತೇನೆ. ಒಂದು ವಾರ ಆದರೂ ಓಕೆ. ಇಡೀ ಬಿಗ್‌ ಬಾಸ್ ಸೀಸನ್ 11ಕ್ಕೆ ಬಾ ಅಂದ್ರೂ ನಾನು ಬರೋದಕ್ಕೆ ರೆಡಿ ಇದ್ದೀನಿ. ಅಥವಾ ಸೀಸನ್ 11ರ ಫಿನಾಲೆ ಕರೆದರೂ ನಾನು ಬರ್ತೀನಿ. ಒಟ್ಟಿನಲ್ಲಿ ನನ್ನನ್ನು ಕರೆಯಿರಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BIGG BOSS ಹೊಸ ಪ್ರೊಮೋದಲ್ಲಿ ಅಡಗಿದೆ ಗುಟ್ಟು.. ಆ ಫೋಟೋದಲ್ಲಿರೋ ಸೆಲೆಬ್ರಿಟಿಗಳು ಯಾರು? 

ನನ್ನನ್ನು ಎಲ್ಲರೂ ಬಿಗ್‌ಬಾಸ್ ಹುಚ್ಚ ವೆಂಕಟ್, ಬಿಗ್‌ ಬಾಸ್ ಹುಚ್ಚ ವೆಂಕಟ್ ಅಂತ ಕರೆಯುತ್ತಾರೆ. ಬಿಗ್ ಬಾಸ್ ಸೀಸನ್ ಶುರುವಾಗ ಎಲ್ಲರೂ ನನ್ನನ್ನು ನೀವು ಹೋಗಲ್ವಾ ಎಂದು ಕೇಳುತ್ತಿದ್ದಾರೆ. ನನಗೆ ಒಂದು ಅವಕಾಶ ಕೊಡಿ ನಾನು ಯಾವುದೇ ರೀತಿಯ ಗಲಾಟೆ ಮಾಡಲ್ಲ. ಸುದೀಪ್ ಅವರೇ ನೀವು ಮನಸು ಮಾಡಿದ್ರೆ ಆಗುತ್ತೆ. ನಿಮಗೆ ನನ್ನ ರಿಕ್ವೆಸ್ಟ್ ಎಂದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಕೇಳಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಅವರ ಈ ವಿಡಿಯೋಗೆ ಹಲವಾರು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ ನೀವು ಟಿಆರ್‌ಪಿ ಕಿಂಗ್. ನೀವು ಬಿಗ್‌ಬಾಸ್‌ಗೆ ಹೋಗಬೇಕು. ಮಾತು ಒರಟು ಇವರ ಮನಸು ಬಂಗಾರ. ಅಣ್ಣ ನಾ ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನು ಖಂಡಿತ ಬಿಗ್‌ಬಾಸ್ ಮನೆಯಲ್ಲಿ ನೋಡಲು ಬಯಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಒಂದು ದಿನ ಪಾಪ ಅವಕಾಶ ಕೊಡಬೇಕು ಇವರಿಗೆ. ನೀವು ಬಿಗ್‌ಬಾಸ್‌ಗೆ ಬಂದ್ರೆ ಅದರ ಮಜಾನೇ ಬೇರೆ ಬಿಡಿ ಬಾಸ್. ನಿಮ್ಮನ್ನು ಏನ್ ಕರಿಯೋದು ಸರ್ ಅಂಗೆ ನುಗ್ಬಿಡಿ ಸರ್ ಎಂದು ಸಲಹೆ ಕೊಟ್ಟಿದ್ದಾರೆ.

ಬಿಗ್‌ಬಾಸ್ ಸೀಸನ್ 11ಕ್ಕೆ ಹುಚ್ಚ ವೆಂಕಟ್ ಅವರು ಹೋಗ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಈ ರಿಯಾಲಿಟಿ ಶೋನಲ್ಲಿ ಯಾವಾಗ ಏನು ಬೇಕಾದ್ರೂ ನಡೆಯಬಹುದು. ಪವಾಡ ಏನಾದ್ರು ನಡೆದರೆ ಹುಚ್ಚ ವೆಂಕಟ್ ಅಭಿಮಾನಿಗಳ ಆಸೆ ಈಡೇರಿದರೂ ಅಚ್ಚರಿಯಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ಮಗಂದ್‌.. ಬಿಗ್‌ ಬಾಸ್ ಸೀಸನ್ 11ಕ್ಕೆ ಹುಚ್ಚ ವೆಂಕಟ್‌? ಈ ವಿಡಿಯೋ ನೋಡಿ!

https://newsfirstlive.com/wp-content/uploads/2024/09/huccha-venkat.jpg

Load More