newsfirstkannada.com

ಸರಳತೆಯ ಸಾಹುಕಾರ ಮಿಸ್ಟರ್​ ಕೂಲ್.. ಪ್ರಾಣ ಸ್ನೇಹಿತನಿಗೆ ಸರ್ಪ್ರೈಸ್ ಗಿಫ್ಟ್​ ಕೊಟ್ಟ MS ಧೋನಿ

Share :

Published June 23, 2024 at 1:11pm

    ಫ್ರೆಂಡ್ಸ್ ಖುಷಿಯಿಂದ ಇರಬೇಕಂತ ಬಯಸೋ ಹೃದಯವಂತ

    ಧೋನಿಗೆ ಎಲ್ಲವನ್ನ ಸಾಧಿಸಿದ್ರೂ, ಕೊಂಚವು ಹಮ್ಮು-ಬಿಮ್ಮಿಲ್ಲ

    ಮಿಸ್ಟರ್​ ಕೂಲ್​ ಮಾಹಿ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ

ನೇಮ್​​ ಆ್ಯಂಡ್ ಫೇಮ್​​​​​ ಈ ಎರಡು ಬಂದ್ಮೇಲೆ ಕೆಲ ಕ್ರಿಕೆಟಿಗರನ್ನ ಹಿಡಿಯೋಕೆ ಆಗಲ್ಲ. ಆಕಾಶದಲ್ಲೇ ಹಾರಾಡ್ತಾರೆ. ಅವರ ಜೀವನ ಶೈಲಿ, ಆ್ಯಟಿಡ್ಯೂಡ್​​​ ಎಲ್ಲ ಬದಲಾಗುತ್ತೆ. ಆದ್ರೆ, ಎಲ್ಲ ಸಿಕ್ಕ ಮೇಲೂ ಮೊದಲಿದ್ದಂತೆ ಇರೋ ಓರ್ವ ಲೆಜೆಂಡ್ರಿ ಕ್ರಿಕೆಟರ್​ ನಮ್ಮ ಜೊತೆಗಿದ್ದಾರೆ. ಆ ಕೋಟಿಗೊಬ್ಬ ಸರಳತೆಯ ಸಾಹುಕಾರನೇ ಎಂಎಸ್​ ಧೋನಿ. ತನ್ನ ಸಿಂಪಲ್​ ನಡೆಯಿಂದ ಮಿಸ್ಟರ್​ ಕೂಲ್​ ಮಾಹಿ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇದನ್ನೂ ಓದಿ: ಗಿಲ್​​​ಕ್ರಿಸ್ಟ್​​ರಂತೆ ​ಮೋಸ್ಟ್ ಡೇಂಜರಸ್ ಪಂತ್​.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?

ಮಹೇಂದ್ರ ಸಿಂಗ್ ಧೋನಿ ವಿಶ್ವಕ್ರಿಕೆಟ್​ನ ದಂತಕಥೆ. ಸರ್ವಕಾಲಕ್ಕೂ ಸಲ್ಲುವ ದಿಗ್ಗಜ ಕ್ರಿಕೆಟರ್​​​. ಮಾಹಿಯ ನಡೆ, ನುಡಿ ಎಲ್ಲವೂ ಅನುಕರಣೀಯ. ಧೋನಿಗೆ ಸಿಕ್ಕ ಅಪಾರ ಯಶಸ್ಸು, ಗೌರವ ಎಲ್ಲಾರಿಗೂ ಸಿಗುವಂತದ್ದಲ್ಲ. ಇಂಥಾ ಧೋನಿಗೆ ಎಲ್ಲವನ್ನ ಸಾಧಿಸಿದ್ರೂ, ಕೊಂಚವು ಹಮ್ಮು-ಬಿಮ್ಮಿಲ್ಲ. ನಿಜ ಹೇಳಬೇಕಂದ್ರೆ ಧೋನಿ ಒಬ್ಬ ಸರಳತೆಯ ಸಾಹುಕಾರ. ತಮ್ಮ ಖುಷಿಯ ಜೊತೆಗೆ ಫ್ಯಾನ್ಸ್​​ ಹಾಗೂ ಫ್ರೆಂಡ್ಸ್ ಕೂಡ ಖುಷಿಯಿಂದ ಇರಬೇಕು ಅಂತ ಬಯಸುವ ಹೃದಯವಂತ.

ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್​.. ಇಬ್ಬರ ಮೃತದೇಹಗಳು ಪತ್ತೆ

ಕೇಕ್​​ ತಿನ್ನಿಸಿ ಸ್ನೇಹಿತನನ್ನ ಖುಷಿಪಡಿಸಿದ ಧೋನಿ

ಧೋನಿ ತನ್ನ ನಡೆಯಿಂದಲೇ ಆಗಾಗ ತಮ್ಮ ಸರಳತೆಯನ್ನ ಪ್ರೂವ್​ ಮಾಡಿದ್ದಾರೆ. ಇದೇ ಕಾರಣಕ್ಕೆ ಧೋನಿ ಬಹುತೇಕರಿಗೆ ಇಷ್ಟ ಆಗೋದು ಕೂಡ. ಇತ್ತೀಚೆಗೆ ಮಾಹಿ ಸ್ನೇಹಿತರೊಬ್ಬರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಬರ್ತ್​ಡೇ ಸೆಲಬ್ರೇಶನ್​​ನಲ್ಲಿ ಭಾಗಿಯಾಗಿ ಧೋನಿ ಗೆಳೆಯನಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ಸ್ನೇಹಿತನ ಬರ್ತ್​ಡೇ ಸೆಲಬ್ರೇಶನ್​ನಲ್ಲಿ ಮಾಹಿ ಸಾಮಾನ್ಯರಂತೆ ಹಿಂದೆ ನಿಂತಿದ್ರು. ಕೊನೆಯಲ್ಲಿ ಕೇಕ್​ ಕಟ್​ ಮಾಡಿ ನೆಚ್ಚಿನ ಫ್ರೆಂಡ್​ಗೆ ತಿನ್ನಿಸಿದ್ದಾರೆ. ಆಗ ಆ ಸ್ನೇಹಿತ ಹಾಗೂ ಅವರ ಫ್ಯಾಮಿಲಿಯವರಿಗೆ ಆದ ಸಂತಸವನ್ನ ಹೇಳತೀರದು.

ಬಾಡಿಗಾರ್ಡ್​ ಬರ್ತ್​ಡೇ ಸೆಲಬ್ರೇಟ್ ಮಾಡಿದ್ದ ಧೋನಿ..!

ಧೋನಿಯ ಸರಳತೆ ಬಗ್ಗೆ ಹೇಳ ಹೊರಟ್ರೆ ಹತ್ತಾರು ಕಥೆಗಳು ತೆಗೆದುಕೊಳ್ಳುತ್ತಿವೆ. ಈ ವರ್ಷ ಮಾಹಿ ಬಾಡಿಗಾರ್ಡ್​ ಆಸಿಫ್ ಅವರ​​​​​​ ಹುಟ್ಟುಹಬ್ಬವಿತ್ತು. ಜನ್ಮದಿನದಂದು ಸ್ವತಃ ಧೋನಿಯೇ ಜೊತೆಗಿದ್ದು, ಸೆಲಬ್ರೇಟ್​​ ಮಾಡಿದ್ರು. ತಾನು ಮಾತ್ರವಲ್ಲ.. ತನ್ನ ಜೊತೆಗಿರೋದು ಕೂಡ ಖುಷಿಯಾಗಿರಬೇಕು ಅನ್ನೋದೆ ಇದ್ರ ಹಿಂದಿದ್ದ ಉದ್ದೇಶ.

ಜತೆಗಿದ್ದು ಚೆನ್ನೈ ಆಟಗಾರರ ಹುಟ್ಟುಹಬ್ಬ ಆಚರಣೆ..!

ಬರೀ ಫ್ರೆಂಡ್​​​​, ಬಾಡಿಗಾರ್ಡ್​ ಅಷ್ಟೇ ಅಲ್ಲ, ಚೆನ್ನೈ ಸೂಪರ್​ ಕಿಂಗ್ಸ್​​ ಆಟಗಾರರ ಬರ್ತ್​ಡೇ ವೇಳೆ ಅವರ ಜತೆಗಿದ್ದು ಖುಷಿಯಲ್ಲಿ ಭಾಗಿಯಾಗಿದ್ದಾರೆ. ಸ್ಟಾರ್ ಬೌಲರ್​ ತುಷಾರ್ ದೇಶಪಾಂಡೆ ಹಾಗೂ ಯುವ ಆಟಗಾರ ನಿಶಾಂತ್ ಸಿಂಧು ಬರ್ತ್​ಡೇ ದಿನ ಧೋನಿಯೇ ಮುಂದೆ ನಿಂತು ಸಂಭ್ರಮದಲ್ಲಿ ಭಾಗಿಯಾಗಿದ್ರು.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ನ​ ಆರೋಪಿಗಳ ಹೆಸರಲ್ಲಿ ಹೊಸ ಸಿಮ್ ಖರೀದಿಸಿದ ಪೊಲೀಸರು.. ತನಿಖೆ ಏನೇನು ಆಗ್ತಿದೆ?

ಪಂತ್​ ಸಹೋದರಿ ಮ್ಯಾರೇಜ್​​​ನಲ್ಲಿ ಮಿಂಚಿಗ್​..!

ಕ್ರಿಕೆಟರ್ಸ್​ಗೂ ಸಹ ಧೋನಿ ಸಾಕಷ್ಟು ಟೈಮ್​ ಕೊಡ್ತಾರೆ. ಟೀಮ್ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್​​​​ ಸಹೋದರಿ ಮದುವೆಗೆ ಧೋನಿ ಫ್ಯಾಮಿಲಿ ಸಮೇತ ಹಾಜರಾಗಿದ್ರು. ಪಂತ್ ಜೊತೆ ಹಾಡಿ, ಕುಣಿದು ಸಖತ್ ಎಂಜಾಯ್ ಮಾಡಿದ್ರು. ಇದಿಷ್ಟೇ ಅಲ್ಲ, 2021 ರಲ್ಲಿ ಮುಂಬೈನಲ್ಲಿ ಗೆಳೆಯನ ವೆಡ್ಡಿಂಗ್​​​ ಪಾರ್ಟಿಯಲ್ಲಿ ಧೋನಿ ಕಾಣಿಸಿಕೊಂಡಿದ್ರು. ಪತ್ನಿ ಸಾಕ್ಷಿ ಜೊತೆ ಮಸ್ತ್​ ಸ್ಟೆಪ್ಸ್ ಹಾಕಿ ಸುದ್ದಿಯಾಗಿದ್ರು.

ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

ನಿಜಕ್ಕೂ ಧೋನಿಯದ್ದು ಎಂಥ ಕ್ಯಾರಕ್ಟರ್ ಅಲ್ವಾ? ಯಶಸ್ಸು ಸಿಕ್ಕ ಮೇಲೆ ನಡೆದು ಬಂದ ದಾರಿಯನ್ನೇ ಮರೆಯೋರೆ ಹೆಚ್ಚು. ಆದ್ರೆ, ಮಾಹಿ ತಾವು ಖುಷಿಯಾಗಿರೋದಲ್ಲದೇ ತಮ್ಮ ಸುತ್ತಮುತ್ತಲಿನವರು ಖುಷಿಯಿಂದ ಇರಬೇಕು ಅಂತ ಬಯಸ್ತಾರೆ. ಇಂತಹ ಸರಳತೆಯ ಸಾಹುಕಾರ ಕೋಟಿಗೊಬ್ಬ ಅಂದ್ರು ತಪ್ಪಲ್ಲ ಬಿಡಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸರಳತೆಯ ಸಾಹುಕಾರ ಮಿಸ್ಟರ್​ ಕೂಲ್.. ಪ್ರಾಣ ಸ್ನೇಹಿತನಿಗೆ ಸರ್ಪ್ರೈಸ್ ಗಿಫ್ಟ್​ ಕೊಟ್ಟ MS ಧೋನಿ

https://newsfirstlive.com/wp-content/uploads/2024/06/MS_DHONI.jpg

Load More