newsfirstkannada.com

ಚೀನಾದ ಬೀಜಿಂಗ್​ ಹಿಂದಿಕ್ಕಿದ ಭಾರತದ ಈ ನಗರ; ಏಷ್ಯಾದ ಬಿಲೆನಿಯರ್ ಕ್ಯಾಪಿಟಲ್ ಎಂದೇ ಖ್ಯಾತಿ ಪಡೆದಿದ್ದು ಹೇಗೆ?

Share :

Published August 30, 2024 at 7:42am

    ಏಷ್ಯಾದ ಬಿಲೆನಿಯರ್ ಕ್ಯಾಪಿಟಲ್ ಸಿಟಿಯಾಗಿ ಹೊರಹೊಮ್ಮಿದೆ ಈ ನಗರ

    ಚೀನಾದ ರಾಜಧಾನಿಯನ್ನು ಹಿಂದಿಕ್ಕಿದ ಭಾರತದ ಆ ನಗರ ಯಾವುದು ಗೊತ್ತಾ?

    ಜಗತ್ತಿನಲ್ಲಿಯ ಅತಿಹೆಚ್ಚು ಬಿಲೆನಿಯರ್​ ಇರುವ 3ನೇ ನಗರ ನಮ್ಮ ಭಾರತದ್ದು

ಮುಂಬೈ: ಭಾರತದ ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಮುಂಬೈನ ಹೆಮ್ಮೆಗೆ ಈಗ ಮತ್ತೊಂದು ಗರಿ ಮೂಡಿದೆ. ಹೂರನ್ ಇಂಡಿಯಾ ರಿಚ್ ಲಿಸ್ಟರ್ಸ್​ನಲ್ಲಿ, ಇದು ಏಷ್ಯಾದ ಬಿಲೆನಿಯರ್ ಕ್ಯಾಪಿಟಲ್ ಸಿಟಿ ಎಂಬ ಹೆಸರನ್ನು ಪಡೆದಿದೆ. ಅದು ಮಾತ್ರವಲ್ಲ, ಅತಿಹೆಚ್ಚು ಬಿಲೆನಿಯರ್​ಗಳು( ಕೋಟ್ಯಾಧಿಪತಿಗಳು) ಇರುವ ನಗರ ಎಂದೇ ಖ್ಯಾತಿ ಪಡೆಯುವುದರೊಂದಿಗೆ ಚೀನಾದ ರಾಜಧಾನಿ ಬೀಜಿಂಗ್​ಅನ್ನು ಕೂಡ ಹಿಂದಿಕ್ಕಿದೆ.

ಇದನ್ನೂ ಓದಿ: ವೀರಾವೇಷದಲ್ಲಿ ಎದುರಾಳಿಯನ್ನು ಸೋಲಿಸಿದ ರಾಹುಲ್ ಗಾಂಧಿ; ಏನಿದು ಜಿಯು-ಜಿಟ್ಸು ಸಮರ? ವಿಡಿಯೋ ನೋಡಿ!

ಹೂರನ್ ಇಂಡಿಯಾ ರಿಚ್​ ಲಿಸ್ಟ್​ 2024 ಹೇಳುವ ಪ್ರಕಾರ, ಸದ್ಯ ಮುಂಬೈ ಚೀನಾದ ರಾಜಧಾನಿ ಬೀಜಿಂಗ್​ನಲ್ಲಿರುವ ಕೋಟ್ಯಾಧಿಪತಿಗಳಿಗಿಂತ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿದ ನಗರವಾಗಿದೆ. ಇದೇ ಮಾರ್ಚ್​ನಲ್ಲಿ ಹೂರನ್ ಗ್ಲೊಬಲ್ ರಿಚ್​ ಲಿಸ್ಟ್ 2024 ನೀಡಿರುವ ವರದಿಯನ್ವಯ ಮೊದಲ ಬಾರಿ ಮುಂಬೈ ಬೀಜಿಂಗ್​ನ್ನು ಹಿಂದಿಕ್ಕಿ, ಏಷ್ಯಾದ ಬಿಲೆನಿಯರ್ ಎಪಿಕ್​ಸೆಂಟರ್ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಮೊಸಳೆ.. ಮುಳುಗಿದ ದ್ವಾರಕಾ ನಗರ; ಗುಜರಾತ್‌ನ ಒಂದೊಂದು ದೃಶ್ಯವೂ ಘನಘೋರ!

ಹೂರನ್ ನೀಡಿರುವ ವರದಿ ಪ್ರಕಾರ, ಸದ್ಯ 92 ಬಿಲೆನಿಯರ್​ಗಳಿಗೆ ಮುಂಬೈ ನೆಲೆ ನೀಡಿದೆ, ಬೀಜಿಂಗ್​ನಲ್ಲಿ 91 ಬಿಲೆನಿಯರ್​ಗಳಿದ್ದಾರೆ. ಭಾರತದ ವಾಣಿಜ್ಯ ನಗರಿಯಲ್ಲಿ ಹೊಸದಾಗಿ 26 ಬಿಲೆನಿಯರ್​ಗಳು ಈ ವರ್ಷ ಕಂಡುಬಂದಿದ್ದಾರೆ. ಬಿಜೀಂಗ್ 18 ಬಿಲೆನಿಯರ್​ಗಳನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಇದು ಏಷ್ಯಾಕ್ಕೆ ಸಂಬಂಧಿಸಿದ ಸುದ್ದಿಯಾದ್ರೆ, ಜಾಗತಿಕವಾಗಿ ಮುಂಬೈ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅತಿ ಹೆಚ್ಚು ಬಿಲೆನಿಯರ್​ಗಳನ್ನು ಹೊಂದಿದ ನಗರ ಅಮೆರಿಕಾದ ನ್ಯೂಯಾರ್ಕ್ ಆದ್ರೆ, ಎರಡನೇ ಸ್ಥಾನದಲ್ಲಿ ಬ್ರಿಟನ್​ನ ಲಂಡನ್ ಇಂದೆ. ಮೂರನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ಮುಂಬೈ ಇದೆ. ನವದೆಹಲಿ ಮೊದಲ ಬಾರಿಗೆ ಟಾಪ್​ ಟೆನ್​ ಲಿಸ್ಟ್​ನಲ್ಲಿ ಬಂದಿದ್ದು ಕೂಡ ಈಗ ಮತ್ತೊಂದು ಹೆಮ್ಮೆಯ ವಿಷಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾದ ಬೀಜಿಂಗ್​ ಹಿಂದಿಕ್ಕಿದ ಭಾರತದ ಈ ನಗರ; ಏಷ್ಯಾದ ಬಿಲೆನಿಯರ್ ಕ್ಯಾಪಿಟಲ್ ಎಂದೇ ಖ್ಯಾತಿ ಪಡೆದಿದ್ದು ಹೇಗೆ?

https://newsfirstlive.com/wp-content/uploads/2024/08/MUMBAI-BILLENIAR-CAPITAL.jpg

Load More