ಮತ್ತೊಬ್ಬನ ಪ್ರೀತಿಗಾಗಿ ಆಕೆಗೆ ಪತ್ನಿ ಬೇಡವಾದ
ಆರೋಪಿಗಳು ಕೊಲೆ ಮಾಡಿ ಎಸ್ಕೇಪ್ ಆಗಿದ್ದೇಗೆ?
ಹುಮನಬಾದ್ ಠಾಣೆಯಲ್ಲಿ ಪ್ರಕರಣ ದಾಖಲು
ಬೀದರ್: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಪಡಿಸ್ತಿದ್ದಾನೆಂದು ಪ್ರಿಯಕರನ ಜೊತೆ ಪತ್ನಿ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಆರೋಪ ಬೀದರ್‌ನ ಹುಮನಬಾದ್ನಲ್ಲಿ ಕೇಳಿಬಂದಿದೆ. ರೇವಣಸಿದ್ದ ಹತ್ಯೆಯಾದ ವ್ಯಕ್ತಿ.
ಏನಿದು ಪ್ರಕರಣ..?
ರೇವಣಸಿದ್ದ ನಗರದ ಟೀಚರ್ಸ್ ಕಾಲೋನಿಯಲ್ಲಿ ವಾಸವಿದ್ದರು. ಇವರು ನಗರದ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಹುಮನಬಾದ್ ನಗರದ ಇನ್ನೊಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಪತ್ನಿ ಭಾಗ್ಯಶ್ರಿಗೆ ವಿರೇಶ್ ಎಂಬಾತನ ಜೊತೆ ಲವ್ವಿ-ಡವ್ವಿ ಶುರುವಾಗಿತ್ತಂತೆ. ಇಬ್ಬರ ಪ್ರೀತಿಗೆ ಪತಿ ರೇವಣಸಿದ್ದ ಅಡ್ಡಿಪಡಿಸುತ್ತಿದ್ದಾನೆ ಎಂದು ಆತನನ್ನ ಹತ್ಯೆ ಮಾಡಲು ಇಬ್ಬರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಏನಿದು ಆರೋಪ..?
ಅಂತೆಯೇ ಮನೆಯಲ್ಲಿ ರೇವಣಸಿದ್ದನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ಆತನ ಮೃತದೇಹವನ್ನು ನಗರದ ಹೊರವಲಯದ ಹಣಕುಣಿ ರಸ್ತೆಯ ಮಧ್ಯದಲ್ಲಿ ಎಸೆದು ಹೋಗಿದ್ದಾರೆ. ಮೃತ ವ್ಯಕ್ತಿಯ ಕಾಲಿಗೆ ಹಾಗೂ ಕುತ್ತಿಗೆಗೆ ಹಗ್ಗದಿಂದ ಬಿಗಿದು ಸಾಯಿಸಿದ ಕಲೆಗಳಾಗಿವೆ. ಪ್ರಕರಣ ಸಂಬಂಧ ಹುಮನಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ