/newsfirstlive-kannada/media/post_attachments/wp-content/uploads/2023/11/raichur.jpg)
ರಾಯಚೂರು: ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ. ಗಂಡ ಬಸವರಾಜ್​​ನಿಂದ ಸುನಿತಾ (28) ಹತ್ಯೆಯಾಗಿದ್ದಾಳೆ.
ಬಸವರಾಜ್ ಮತ್ತು ಸುನಿತಾ ನಡುವೆ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಗಲಾಟೆ ನಡೆದಿದೆ. ಈ ವೇಳೆ ಬಸವರಾಜ್​ ಕುಡಿಯುವುದಕ್ಕೆ ಹಣ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಬಸವರಾಜ್​ ನಿನ್ನೆ ಸಂಜೆಯೂ ಕೂಡ ಹಣಕ್ಕಾಗಿ ಗಲಾಟೆ ಮಾಡಿದ್ದಾನೆ. ಆ ವೇಳೆ ಪಕ್ಕದಲ್ಲಿದ್ದ ಸಲಿಕೆಯಿಂದ ಸುನಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಭೀಕರತೆಗೆ ಸುನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಸುನಿತಾ ಮತ್ತು ಬಸವರಾಜ್​ ಪ್ರೀತಿಸಿ ಮದುವೆಯಾಗಿದ್ದರು. 2015 ರಲ್ಲಿ ಲಿಂಗಸ್ಗೂರು ಸಬ್ ರಿಜಿಸ್ಟ್ರಾರ್ ನಲ್ಲಿ ಲವ್​ ಮ್ಯಾರೇಜ್​ ಆಗಿದ್ದರು. ಮದುವೆಯಾಗಿ ಕೆಲ ದಿನಗಳ ಕಾಲ ಮಾತ್ರ ಇಬ್ಬರು ಸುಖ ಸಂಸಾರ ನಡೆಸುತ್ತಿದ್ದರು. ಬಳಿಕ ಪತಿ ಬಸವರಾಜ ಕುಡಿತಕ್ಕೆ ದಾಸನಾಗಿದ್ದನು. ಕುಡಿತದ ದಾಸನಾಗಿದ್ದ ಬಸವರಾಜ್​ ಪತ್ನಿಯ ಜೀವವನ್ನೇ ತೆಗೆದಿದ್ದಾನೆ. ಸದ್ಯ ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us