newsfirstkannada.com

ಜೀವನ ಪೂರ್ತಿ ಜೊತೆಯಲ್ಲೇ ಇರ್ತೀನಿ ಎಂದಿದ್ದ ಗಂಡ.. ಆಸ್ತಿಗಾಗಿ ಹೆಂಡತಿಯನ್ನೇ ಕೊಂದು ಹಾಕಿದ ಪ್ರಾಧ್ಯಾಪಕ

Share :

17-11-2023

  ಶ್ರುತಿ ಬಾಳಲ್ಲಿ ತಾಳ ತಪ್ಪುವಂತೆ ಮಾಡಿದ್ದು ಈಕೆ ಹೆಸರಲ್ಲಿದ್ದ ಆಸ್ತಿ!

  ಪೋಸ್ಟ್​​ ಮಾರ್ಟಂನಲ್ಲಿ ಬಯಲಾಯ್ತು ಕೊಲೆಯ ಅಸಲಿ ಸತ್ಯ

  ಹೆಂಡತಿ ಕೊಂದು ನಾಟಕವಾಡಿದ್ದ ಅಸಿಸ್ಟೆಂಟ್​ ಪ್ರೊಫೆಸರ್

ಮಂಡ್ಯ: ಹಣ ಅನ್ನೋದು ಮನುಷ್ಯನ ಕೈಯಲ್ಲಿ ಎಂಥೆಂತಾ ಕೆಲಸ ಮಾಡಿಸುತ್ತೆ ನೋಡಿ. ಪತ್ನಿ ಹೆಸರಲ್ಲಿದ್ದ ಆಸ್ತಿಯನ್ನ ಕಬ್ಜ ಮಾಡ್ಬೇಕು ಅಂದುಕೊಂಡಿದ್ದ ಪತಿ ಹೆಂಡತಿಯನ್ನ ಕೊಂದು ಸಹಜ ಸಾವು ಅಂತ ನಾಟಕ ಮಾಡಿದ್ದ. ಆದ್ರೆ ಪೋಸ್ಟ್​ ಮಾರ್ಟಂನಲ್ಲಿ ಕೊಲೆಯ ಅಸಲಿ ಸತ್ಯ ಬಯಲಾಗಿದ್ದು, ಜೀವನ ಪೂರ್ತಿ ಜೊತೆಗೆ ಇರುತ್ತೇನೆ ಅಂದವನೇ ಜೀವ ತೆಗೆದಿದ್ದ ಅನ್ನೋ ಸ್ಟೋಟಕ ವಿಚಾರ ಬಯಲಾಗಿದೆ.

ಚೆಂದದ ನಗು.. ಬದುಕಿನ ಬಗ್ಗೆ ಕಂಡ ಕನಸುಗಳು ಕಣ್ಣಲ್ಲೇ ಕಾಣ್ತಿವೆ. ಜೀವನದ ಬಗ್ಗೆ ಈ ಜೀವ ಅದೆಷ್ಟು ಭರವಸೆ ಇಟ್ಕೊಂಡಿತ್ತು. ಆದ್ರೆ ಕಟ್ಕೊಂಡ ಗಂಡನ ದುರಾಸೆಗೆ ಈಕೆ ಪ್ರಾಣವೇ ಹೋಗಿದೆ. ಗಂಡನನ್ನ ದೇವರು ಅಂದುಕೊಂಡು ಸಂಸಾರ ಮಾಡ್ತಿದ್ರು. ಅತ್ತ ಅಪ್ಪ ಅಮ್ಮನೂ ಇರಲಿಲ್ಲ. ಆಸೆರೆಗೆ ಇದ್ದದ್ದು ವರಿಸಿದ ಗಂಡ ಮಾತ್ರ. ಪತಿಯೇ ಪರದೈವ ಅಂತ ಶ್ರುತಿ ಸಂತೋಷದ ಜೀವನ ನಡೆಸುತ್ತಿದ್ದಳು. ಆದ್ರೆ ಶ್ರುತಿ ಬಾಳಲ್ಲಿ ತಾಳ ತಪ್ಪುವಂತೆ ಮಾಡಿದ್ದು, ಈಕೆ ಹೆಸರಲ್ಲಿದ್ದ ಆಸ್ತಿ.

ಜೀವನ ಪೂರ್ತಿ ಜೊತೆಗಿರ್ತೀನಿ ಅಂದೋನೆ ಜೀವ ತೆಗೆದ!
ಆಸ್ತಿಗಾಗಿ ಪತ್ನಿಯನ್ನೆ ಕೊಂದು ಹಾಕಿದ ಪತಿರಾಯ

ಹೌದು, ಕೆಲವೊಂದು ಸಾರಿ ಹಣ ಅನ್ನೋದು ಮನುಷ್ಯನನ್ನ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಸುತ್ತೆ. ಅತಿಯಾಸೆ ದುರಾಸೆ ಅನ್ನೋದು ಮನುಷ್ಯನ ತಲೆಗೆ ಹೊಕ್ಕರೆ ಅವನು ದುಷ್ಟನಾಗೋದ್ರಲ್ಲಿ ಅನುಮಾನವೇ ಇಲ್ಲ. ಶ್ರುತಿ ಬಾಳಲ್ಲೂ ಆಗಿದ್ದೂ ಇದೆ. ಅಸಲಿಗೆ ಶ್ರುತಿ ಅಪ್ಪ ಅಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ರೆ, ಇದ್ದೊಬ್ಬ ತಂಗಿ ಕೂಡ 2018ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಮೂವರ ಸಾವಿನ ಬಳಿಕ ಬರೋಬ್ಬರಿ 10 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಶ್ರುತಿ ಹೆಸರಿಗೆ ಬಂದಿದೆ. ಆದ್ರೆ ಈ ಆಸ್ತಿ ಮೇಲೆ ಶ್ರುತಿ ಗಂಡನ ಕಣ್ಣು ಬಿದ್ದಿದೆ.

ಇಲ್ಲಿಂದ ಪಾಪಿ ಗಂಡ ಶ್ರುತಿಗೆ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದಾನೆ. 10 ಕೋಟಿ ಆಸ್ತಿ ಅಂದಾಕ್ಷಣ ಶ್ರುತಿ ಗಂಡನ ಮನಸ್ಸು ದುರಾಸೆಗೆ ಬಿದ್ದಿದೆ. ಹೇಗಾದ್ರೂ ಮಾಡಿ ಈ ಆಸ್ತಿಯನ್ನ ಮಾರಿ ಬೇರೆಡೆ ಪ್ರಾಪರ್ಟಿ ಮಾಡಬೇಕು ಅಂತ ಶ್ರುತಿ ಗಂಡ ಸೋಮಶೇಖರ್ ಪ್ಲಾನ್ ಮಾಡಿದ್ದ. ಆದ್ರೆ ಅಪ್ಪನಿಂದ ಆಸ್ತಿ ಮಾರೋದು ಶ್ರುತಿಗೆ ಬಿಲ್​ಕುಲ್​ ಇಷ್ಟ ಇರಲಿಲ್ಲ. ಇದೇ ವಿಚಾರಕ್ಕೆ ಶ್ರುತಿ ಮತ್ತು ಸೋಮಶೇಖರ್ ಮಧ್ಯೆ ಹಲವು ಬಾರಿ ಜಗಳ ಕೂಡ ನಡೆದಿದೆ. ಕೊನೆಗೆ ಹಣದ ಆಸೆಗೆ ಬಿದ್ದಿದ್ದ ಸೋಮಶೇಖರ್ ಪತ್ನಿ ಉಸಿರು ನಿಲ್ಲಿಸಿಬಿಟ್ಟಿದ್ದಾನೆ.

ಮಲಗಿದ ಪತ್ನಿಯನ್ನ ಉಸಿರುಗಟ್ಟಿಸಿ ಕೊಂದ ಪತಿರಾಯ
ಹೆಂಡತಿ ಕೊಂದು ನಾಟಕವಾಡಿದ್ದ ಅಸಿಸ್ಟಂಟ್​ ಪ್ರೊಫೆಸರ್

ಜೀವನ ಪೂರ್ತಿ ಜೊತೆಗಿದ್ದವನು ಹೆಂಡತಿ ಉಸಿರು ತೆಗೆದಿದ್ದ. ಬಳಿಕ ಸಹಜವಾಗಿ ಸತ್ತಿದ್ದಾಳೆಂದು ಸೋಮಶೇಖರ್ ನಾಟಕವಾಡಿದ್ದಾನೆ. ಆದ್ರೆ ಪೋಸ್ಟ್​ ಮಾರ್ಟಂ ನಂತ್ರ ಸೋಮಶೇಖರ್ ಕರಾಳ ಮುಖ ಬಯಲಾಗಿದೆ. ಶ್ರುತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಅನ್ನೋ ವಿಚಾರ ಕೇಳಿ ಶ್ರುತಿ ಸಂಬಂಧಿಕರು ಅಕ್ಷರಶಃ ದಂಗಾಗಿದ್ದಾರೆ. ಮಂಡ್ಯದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಸೋಮಶೇಖರ್ ಕಳೆದ ಶನಿವಾರ ಶ್ರುತಿಯನ್ನ ಹತ್ಯೆ ಮಾಡಿದ್ದ. ಬಳಿಕ ಪತ್ನಿ ಸಹಜವಾಗಿ ಸಾವನಪ್ಪಿದ್ದಾಳೆ ಅಂತ ಭರ್ಜರಿ ನಾಟಕ ಮಾಡಿ ಮೊಸಳೆ ಕಣ್ಣೀರು ಸುರಿಸಿದ್ದ, ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವ ಸತ್ಯ ಬಯಲಾಗಿದೆ.

ಸೋಮಶೇಖರ್​ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಹೆಂಡತಿ ಹೆಸರಿನಲ್ಲಿದ್ದ ಆಸ್ತಿಗಾಗಿ ಕೊಂದು ಹಾಕಿರೋದಾಗಿ ಸೋಮಶೇಖರ್ ತಪ್ಪೊಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಹಣದ ಆಸೆಗೆ ಬಿದ್ದಿದ್ದ ಪತಿಗೆ ನಂಬಿಕೊಂಡು ಬಂದಿದ್ದ ಪತ್ನಿಯನ್ನೆ ಹತ್ಯೆ ಮಾಡಿದ್ದಾನೆ. ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ ಮಡದಿಯ ಉಸಿರು ನಿಲ್ಲಿಸಿ ಮಾಡಿದ ತಪ್ಪಿಗೆ ಪತಿರಾಯ ಜೈಲುಪಾಲಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವನ ಪೂರ್ತಿ ಜೊತೆಯಲ್ಲೇ ಇರ್ತೀನಿ ಎಂದಿದ್ದ ಗಂಡ.. ಆಸ್ತಿಗಾಗಿ ಹೆಂಡತಿಯನ್ನೇ ಕೊಂದು ಹಾಕಿದ ಪ್ರಾಧ್ಯಾಪಕ

https://newsfirstlive.com/wp-content/uploads/2023/11/death-2023-11-16T204148.191.jpg

Load More