newsfirstkannada.com

ಕುಡುಗೋಲಿನಿಂದ ಕೊಚ್ಚಿ ಹೆಂಡತಿ ಕೊಂದ ಪಾಪಿ ಗಂಡ.. ಕುಟುಂಬಸ್ಥರು ಆಕ್ರಂದನ

Share :

Published July 6, 2024 at 8:57am

  ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಭೇಟಿ ನೀಡಿ ಪರಿಶೀಲನೆ

  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿಯನ್ನ ಕೊಲೆ ಮಾಡಿದ ಗಂಡ

  ಜಗಳದಲ್ಲಿ ಮಾತಿಗೆ ಮಾತು ಬೆಳೆದು ಪತ್ನಿಯನ್ನೇ ಹತ್ಯೆ ಮಾಡಿದ

ಬೆಳಗಾವಿ: ಮಕ್ಕಳ ವಿಚಾರವಾಗಿ ಶುರುವಾದ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕುಡುಗೋಲಿನಿಂದ ಹೆಂಡತಿ ಮೇಲೆ ಹಲ್ಲೆ ಮಾಡಿ ಪಾಪಿ ಪತಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಕೆಲವ್ರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆಯೂ ಬರಲ್ಲ, ತಲೆಯೂ ಓಡಲ್ಲ -ಕುಮಾರಸ್ವಾಮಿ-ಡಿಕೆಶಿ ಮಧ್ಯೆ ವಾಗ್ಯುದ್ಧ ಹೆಂಗಿದೆ ಗೊತ್ತಾ?

ಅರಟಾಳ ಗ್ರಾಮದ ನಿವಾಸಿ ಸುನಂದಾ ಗೋಪಾಲ ನಾಯಕ (40) ಮೃತ ದುರ್ದೈವಿ. ಈಕೆಯ ಪತಿ ಗೋಪಾಲ ನಾಯಕ (50) ಕೃತ್ಯ ಎಸಗಿದ ಆರೋಪಿ. ಈ ದಂಪತಿ ಮಧ್ಯೆ ತಮ್ಮ ಮಕ್ಕಳ ವಿಚಾರವಾಗಿ ಜಗಳ ಪ್ರಾರಂಭವಾಗಿದೆ. ಗಲಾಟೆ ತಾರಕಕ್ಕೇರಿದ್ದು ಮಾತಿಗೆ ಮಾತು ಬೆಳೆದಿದ್ದರಿಂದ ಗಂಡನ ಕೈಮೇಲಾಗಿದೆ. ಹೀಗಾಗಿ ಮನೆಯಲ್ಲಿದ್ದ ಕುಡುಗೋಲಿನಿಂದ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಹೆಂಡತಿ ಮೃತಪಟ್ಟಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡುಗೋಲಿನಿಂದ ಕೊಚ್ಚಿ ಹೆಂಡತಿ ಕೊಂದ ಪಾಪಿ ಗಂಡ.. ಕುಟುಂಬಸ್ಥರು ಆಕ್ರಂದನ

https://newsfirstlive.com/wp-content/uploads/2024/07/BGM_WIFE_MURDER.jpg

Load More