newsfirstkannada.com

‘ಫ್ರೀ ಬಸ್​ ಹತ್ತಿ ಹೋದವಳು ವಾಪಸ್ಸು ಬಂದಿಲ್ಲ’ ಬಸ್​ ಟೈರ್​ನಡಿಗೆ ತಲೆಯಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಪತಿ

Share :

Published June 29, 2023 at 11:39am

Update June 29, 2023 at 2:08pm

    ಉಚಿತ ಪ್ರಯಾಣ ಹೊರಟ ಪತ್ನಿ ನಡೆಯಿಂದ ಕಂಗೆಟ್ಟ ಪತಿ

    ಹೆಂಡ್ತಿ ಮನೆಗೆ ಬಂದಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ

    ಬಸ್​ ಟೈರ್​ನಡಿಗೆ ತಲೆಯಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಕುಡುಕ

ಹೊಸಕೋಟೆ: ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆ ಮೂಲಕ ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುತ್ತಿದೆ. ಆದರೀಗ ಇದರ ಎಫೆಕ್ಟ್​ ಗಂಡಸರಿಗೆ ಮುಟ್ಟಿದೆ. ಅದಕ್ಕೆ ಉದಾಹರಣೆ ಎಂಬಂತೆ ಕುಡುಕ ಗಂಡನೊಬ್ಬ ಟ್ರಿಪ್ ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಬಿಎಂಟಿಸಿ ಬಸ್ ಟೈರ್​​ನಡಿಗೆ ತಲೆ ಇಟ್ಟು ಮಲಗಿದ ಪ್ರಸಂಗ ಬೆಳಕಿಗೆ ಬಂದಿದೆ.

ನಿನ್ನೆ ಸಂಜೆ ಹೊಸಕೋಟೆ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಹೆಂಡತಿ ಉಚಿತ ಪ್ರಯಾಣದ ಫಲಾನುಭವಿಯಾಗಿದ್ದು, ಮನೆಗೆ ಹಿಂತಿರುಗಿ ಬಂದಿಲ್ಲ ಎಂದು ಕುಡುಕ ಗಂಡ ಬಸ್​ ಟೈರ್​ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕುಡುಕ ಗಂಡನ ಅವಾಂತರದಿಂದ ನಿಲ್ದಾಣದಲ್ಲಿ ಅರ್ಧ ಗಂಟೆ ಬಸ್ ಸಂಚಾರ ಸ್ಥಗಿತವಾಗಿತ್ತು. ಅತ್ತ ಬಸ್ ನಲ್ಲಿ‌ ಕುಳಿತ ಪ್ರಯಾಣಿಕರು ಪರದಾಡಬೇಕಾಯ್ತು. ಬಸ್​ ಟೈರ್​ನಡಿ ತಲೆ ಇಟ್ಟು ಮಲಗಿದ ಪತಿ ಮಾತ್ರ ನನ್ನ ಹೆಂಡತಿ ಟ್ರಿಪ್ ಗೆ ಹೋದವಳು‌ ಇನ್ನು ವಾಪಸ್ ಬಂದಿಲ್ಲ. ಸಿದ್ದರಾಮಯ್ಯ ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ ಎಂದು ಅತ್ತಿದ್ದಾನೆ.

ಮಾತ್ರವಲ್ಲದೆ, ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕೆಂದು ಕುಡುಕ ಗಂಡ ಅವಾಂತರ ಸೃಷ್ಟಿಸಿದ್ದಾನೆ. ಕುಡಿದು ತೂರಾಡಿ ವಾಹನ‌‌ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಬಳಿಕ ಟೈರ್ ಗೆ ತಲೆಕೊಡಲು ಯತ್ನಿಸಿದ ಕುಡುಕನನ್ನು ಜನರೇ ರಕ್ಷಿಸಿದ್ದಾರೆ. ಬಳಿಕ ಸಾರ್ವಜನಿಕರು ಹೊಸಕೋಟೆ ಪೊಲೀಸರಿಗೆ ‌ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಫ್ರೀ ಬಸ್​ ಹತ್ತಿ ಹೋದವಳು ವಾಪಸ್ಸು ಬಂದಿಲ್ಲ’ ಬಸ್​ ಟೈರ್​ನಡಿಗೆ ತಲೆಯಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಪತಿ

https://newsfirstlive.com/wp-content/uploads/2023/06/Hosakote.jpg

Load More