ಮನೆ ಎದುರು ಹೆಂಡತಿ ಎಲ್ಲೇ ಹೋದರೂ ಬಿಡದ ಭಂಡ ನನ್ನ ಗಂಡ
ರಸ್ತೆಯಲ್ಲಿ ಅಟ್ಟಾಡಿಸಿ ಕತ್ತಿಯಿಂದ ಹಲ್ಲೆ ಮಾಡಿದ ಅಮಾನುಷ ಘಟನೆ
ಎರಡು ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಶ್ರೀನಿವಾಸನ ರಂಪಾಟ
ಹಾಸನ: ಹೆಂಡತಿ ಎಲ್ಲೇ ಹೋದರೂ ಬಿಡದ ಗಂಡ ರಸ್ತೆಯಲ್ಲಿ ಅಟ್ಟಾಡಿಸಿ ಕತ್ತಿಯಿಂದ ಹಲ್ಲೆ ಮಾಡಿದ ಅಮಾನುಷ ಘಟನೆ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ. ಶ್ರೀನಿವಾಸ ಎಂಬ ವ್ಯಕ್ತಿ ತನ್ನ ಪತ್ನಿ ಮೇಲೆ ರಾಕ್ಷಸನಂತೆ ಮನೆ ಎದುರೇ ಕತ್ತಿ ಬೀಸಿ ಹಲ್ಲೆ ಮಾಡಿರೋ ಭಯಾನಕ ವೀಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಶ್ರೀನಿವಾಸ ತನ್ನ ಪತ್ನಿ ಸವಿತಾಳಿದ್ದ ದೂರ ಇದ್ದನಂತೆ. ಪತ್ನಿ ಸವಿತಾ, ಆಸ್ತಿ ಭಾಗಕ್ಕಾಗಿ ಪತಿ ವಿರುದ್ಧ ಕೇಸ್ ದಾಖಲಿಸಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಜಗಳ ತೆಗೆದ ಶ್ರೀನಿವಾಸ ತನ್ನ ಪತ್ನಿ ಮೇಲೆ ಕ್ರೂರವಾಗಿ ದಾಳಿ ಮಾಡಿದ್ದಾರೆ. ಮನೆ ಎದುರೇ ಸವಿತಾ ತಪ್ಪಿಸಿಕೊಂಡು ಓಡಿದರೂ ಬಿಡದೆ ಅಮಾನುಷವಾಗಿ ಹಲ್ಲೆಗೆ ಯತ್ನಿಸಿದ್ದಾನೆ.
ಮನೆ ಎದುರೇ ಪತ್ನಿ ಮೇಲೆ ಶ್ರೀನಿವಾಸ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಸವಿತಾ ಸಹೋದರಿ ಅನಿತಾ ಕಾರಿನ ಮೇಲೂ ದಾಳಿ ಮಾಡಿ ಕತ್ತಿಯಿಂದ ಜಖಂಗೊಳಿಸಿದ್ದಾರೆ. ಪತಿ ಶ್ರೀನಿವಾಸನಿಂದ ಪತ್ನಿ ಸವಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳು ಸವಿತಾ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ