newsfirstkannada.com

ಹೆಂಡತಿ ಹೆಸರಲ್ಲಿ 10 ಕೋಟಿ ಆಸ್ತಿ.. ಮಲಗಿದ್ದಾಗಲೇ ಕೊಲೆ ಮಾಡಿ ಡ್ರಾಮಾ ಮಾಡಿದ ಗಂಡ; ಸಿಕ್ಕಿಬಿದ್ದಿದ್ದು ಹೇಗೆ?

Share :

16-11-2023

    ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಇಟ್ಟು ಕೊಂದ ಗಂಡ

    ತಂದೆ, ತಾಯಿ ಹಾಗೂ ತಂಗಿ ಸಾವಿನ ಬಳಿಕ ಶೃತಿ ಹೆಸರಿಗೆ ಆಸ್ತಿ

    ಕಮರ್ಷಿಯಲ್ ಬಿಲ್ಡಿಂಗ್ಸ್, ಮನೆ, ಸೈಟ್‌ಗಳು ಹೆಂಡತಿ ಹೆಸರಲ್ಲಿತ್ತು

ಮಂಡ್ಯದ ವಿ.ವಿ ನಗರ ಬಡಾವಣೆಯಲ್ಲಿ ಗೃಹಿಣಿ ಎಸ್‌. ಶೃತಿ ಸಾವನ್ನಪ್ಪಿದ ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ಆಸ್ತಿ ಆಸೆಗೆ ಗಂಡನಿಂದಲೇ ಹೆಂಡತಿ ಕೊಲೆ‌ ಮಾಡಿರೋ ಸತ್ಯ ಬಯಲಾಗಿದೆ. ಹಣದ ದಾಹಕ್ಕೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿದ ಪ್ರೊಫೆಸರ್ ಗಂಡ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

ವಿ.ವಿ ನಗರ ಬಡಾವಣೆಯ ಎಸ್.ಶೃತಿ (32) ಕೊಲೆಯಾದ ಗೃಹಿಣಿ. 41 ವರ್ಷದ ಟಿ.ಎನ್.ಸೋಮಶೇಖರ್ ಎಂಬಾತನೇ ಕೊಲೆ ಮಾಡಿದ ಪಾಪಿ ಪತಿ. ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು, ಬೆಡ್ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆದರೆ ಸಹಜ ಸಾವೆಂದು ಬಿಂಬಿಸಿದ್ದ ನಾಟಕವಾಡಿದ್ದು, ಕಿರಾತಕ ಪತಿಯ ಯತ್ನ ಇದೀಗ ವಿಫಲವಾಗಿದೆ.

ತಂದೆ, ತಾಯಿ ಹಾಗೂ ತಂಗಿ ಸಾವಿನ ಬಳಿಕ ಶೃತಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಬಂದಿದೆ. ಕೆಲ ವರ್ಷಗಳ ಹಿಂದೆ ಮೃತ ಶೃತಿ ತಂದೆ, ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. 2018ರಲ್ಲಿ ಶೃತಿ ತಂಗಿ ಸುಶ್ಮಿತ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಮೂವರ ಸಾವಿನ ಬಳಿಕ ಶೃತಿ ಹೆಸರಿಗೆ 10 ಕೋಟಿಗೂ ಅಧಿಕ ಮೌಲ್ಯದ ಪ್ರಾಪರ್ಟಿ ಬಂದಿದೆ. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಬಿಲ್ಡಿಂಗ್ಸ್, ಮನೆ ಹಾಗೂ ಸೈಟ್‌ಗಳು ಈಕೆಯ ಹೆಸರಿಗೆ ಸೇರಿದೆ.

ಇತ್ತೀಚೆಗೆ ಕೋಟ್ಯಾಂತರ ರೂಪಾಯಿ ಆಸ್ತಿ ಮಾರಲು ಶೃತಿಗೆ ಪತಿ ಸೋಮಶೇಖರ್ ಒತ್ತಾಯಿಸುತ್ತಿದ್ದ. ಮೈಸೂರಿನ ಆಸ್ತಿ ಮಾರಾಟ ಮಾಡಿ ಬೇರೆಡೆ ಪ್ರಾಪರ್ಟಿ ಖರೀದಿಗೆ ಪ್ಲಾನ್‌ ಮಾಡಿದ್ದ. ಆದರೆ ಶೃತಿ ಆಸ್ತಿ ಮಾರಾಟಕ್ಕೆ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ಗಂಡ, ಹೆಂಡತಿ ಮಧ್ಯೆ ಜಗಳ ನಡೆದಿದೆ.

ಕಳೆದ ಶನಿವಾರ ಶೃತಿ ಮನೆಯಲ್ಲಿ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆದರೆ ಪಲ್ಸ್ ರೇಟ್ ಕಮ್ಮಿಯಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದಾನೆ. ಮೃತ ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವೆಂದು ಸೋಮಶೇಖರ್ ತಿಳಿಸಿದ್ದಾನೆ. ಅನುಮಾನಗೊಂಡ ಶೃತಿ ಚಿಕ್ಕಪ್ಪ ಕುಮಾರಸ್ವಾಮಿ ಅನುಮಾನಾಸ್ಪದ ಸಾವೆಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವ ಸತ್ಯ ಗೊತ್ತಾಗಿದೆ.

ಶೃತಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಪತಿ ಸೋಮಶೇಖರ್ ಅವರನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿರೋದಾಗಿ ಸೋಮಶೇಖರ್‌ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿ ಪತಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಹೆಸರಲ್ಲಿ 10 ಕೋಟಿ ಆಸ್ತಿ.. ಮಲಗಿದ್ದಾಗಲೇ ಕೊಲೆ ಮಾಡಿ ಡ್ರಾಮಾ ಮಾಡಿದ ಗಂಡ; ಸಿಕ್ಕಿಬಿದ್ದಿದ್ದು ಹೇಗೆ?

https://newsfirstlive.com/wp-content/uploads/2023/11/Mandya-Murder.jpg

Load More