newsfirstkannada.com

ಹಾಸನಾಂಬೆ ಸನ್ನಿಧಿಯಲ್ಲಿ ಮತ್ತೆ ನೂಕುನುಗ್ಗಲು; ಭಕ್ತರ ಆಕ್ರೋಶಕ್ಕೆ ತುತ್ತಾದ ಡಿಸಿ; ಆಗಿದ್ದೇನು?

Share :

11-11-2023

    ಹಾಸನಾಂಬೆ ಭಕ್ತರನ್ನು ನಿಯಂತ್ರಿಸಲು ಡಿಸಿ ಸತ್ಯಭಾಮ ಹರಸಾಹಸ

    ಮುಖ್ಯದ್ವಾರದ ಗೇಟ್ ಮುಂಭಾಗ ಡಿಸಿ ಹಾಗೂ ಜನರ ನಡುವೆ ತಳ್ಳಾಟ

    ಹಾಸನಾಂಬೆ ದೇವಿ ದರ್ಶನಕ್ಕೆ ಇನ್ನು ಉಳಿದಿರೋದು ನಾಲ್ಕೇ ದಿನಗಳು

ಹಾಸನ: ಹಾಸನಾಂಬೆ ಸನ್ನಿಧಿಯಲ್ಲಿ ನಿನ್ನೆ ಭಕ್ತರು ಕರೆಂಟ್ ಶಾಕ್‌ಗೆ ಗುರಿಯಾಗಿದ್ದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂದೂ ಕೂಡ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಮುಖ್ಯದ್ವಾರದ ಗೇಟ್ ಮುಂಭಾಗ ನಿಂತಿದ್ದ ನೂರಾರು ಮಂದಿ ಡಿಸಿ ಸಿ.ಸತ್ಯಭಾಮ ಅವರನ್ನೇ ತಳ್ಳಿ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ.

ಹಾಸನಾಂಬೆ ಭಕ್ತರ ನಿಯಂತ್ರಿಸಲು ಖುದ್ದು ಡಿಸಿ ಸಿ.ಸತ್ಯಭಾಮ ಅವರೇ ಫೀಲ್ಡಿಗೆ ಇಳಿದಿದ್ದರು. ಆದರೆ ದೇವಿಯ ದರ್ಶನಕ್ಕೆಂದು ಜೆಡಿಎಸ್‌ ಶಾಸಕ ಎ.ಮಂಜು ಬಂದಿದ್ದ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ಮಧ್ಯೆ ನೂಕುನುಗ್ಗಲು ಉಂಟಾಗಿರೋ ಘಟನೆಯೊಂದು ನಡೆದಿದೆ. ಹಾಸನಾಂಬೆ ದರ್ಶನಕ್ಕೆಂದು ಅರಕಲಗೂಡು ಜೆಡಿಎಸ್​ ಶಾಸಕ ಎ.ಮಂಜು ಕುಟುಂಬ ದೇವಸ್ಥಾನಕ್ಕೆ ಬಂದಿತ್ತು.

ಇದೇ ವೇಳೆ ಹೈಕೋರ್ಟ್ ಮುಖ್ಯನ್ಯಾಯಾಧೀಶೆ ಗೀತಾ ಪ್ರಸನ್ನ ಜೆಡಿಎಸ್​ ಶಾಸಕ ಎ.ಮಂಜು ಕುಟುಂಬಸ್ಥರನ್ನು ನೋಡಿದ ಕೂಡಲೇ ಒಳಗೆ ಬಿಡುವಂತೆ ಹೇಳಿದ್ದಾರೆ. ಮುಖ್ಯನ್ಯಾಯಾಧೀಶೆ ಗೀತಾ ಅವರ ಸೂಚನೆ ಮೇರೆಗೆ ಜೆಡಿಎಸ್​ ಶಾಸಕರನ್ನು ಒಳಗೆಡೆ ಕಳುಹಿಸಿದ್ದಾರೆ. ಇದೇ ವೇಳೆ ದೇವರ ದರ್ಶನಕ್ಕೆಂದು ಬಂದಿದ್ದ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿದೆ.

ಅಲ್ಲೇ ನಿಂತಿದ್ದ ಡಿಸಿ ಸಿ. ಸತ್ಯಭಾಮ ಅವರು ಮೂರ್ನಾಲ್ಕು ಮುಖ್ಯದ್ವಾರವನ್ನು ಬಂದ್​ ಮಾಡಿಸಿದ್ದಾರೆ. ಆಗ ಭಕ್ತರು ಡಿಸಿಯನ್ನು ತಳ್ಳಿಕೊಂಡು ಒಳಗಡೆ ನುಗ್ಗಲು ಯತ್ನಿಸಿದರು. ಇನ್ನು ಸ್ಕ್ಯಾನ್ ಮಾಡೋ ವಿಚಾರದಲ್ಲಿ ಎಸಿ ಮಹಮದ್ ಸುಜೀತಾ ಮತ್ತು ಡಿಸಿ ಸತ್ಯಭಾಮ ನಡುವೆ ಮಾತಿನ ಚಕಮಕಿ ಸಹ ನಡೆದಿದೆ. ನೀವೇ ನೋಡಿಕೊಳ್ಳಿ ನಾನು ಹೋಗುವೆ ಎಂದ ಡಿಸಿ ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನಾಂಬೆ ಸನ್ನಿಧಿಯಲ್ಲಿ ಮತ್ತೆ ನೂಕುನುಗ್ಗಲು; ಭಕ್ತರ ಆಕ್ರೋಶಕ್ಕೆ ತುತ್ತಾದ ಡಿಸಿ; ಆಗಿದ್ದೇನು?

https://newsfirstlive.com/wp-content/uploads/2023/11/hsn-4.jpg

Load More