newsfirstkannada.com

ಚಿಕನ್ ಪೀಸ್​ ಗಂಟಲಲ್ಲಿ ಸಿಕ್ಕು ರಸ್ತೆ ಬದಿಯೇ ನರಳಿ, ನರಳಿ ಸಾವನ್ನಪ್ಪಿದ ವ್ಯಕ್ತಿ

Share :

Published June 23, 2024 at 3:19pm

  ಸಹೋದರಿಯನ್ನು ನೋಡಬೇಕೆಂದು ಬಂದಿದ್ದಾಗ ಘಟನೆ

  ನಗರದ ರಸ್ತೆಯಲ್ಲೇ ಬಿದ್ದು ಒದ್ದಾಡಿ ಸಾವನ್ನಪ್ಪಿರುವ ವ್ಯಕ್ತಿ.!

  ಹೋಟೆಲ್​ನಿಂದ ಹೊರ ಬಂದ ಮೇಲೆ ವ್ಯಕ್ತಿಗೆ ಏನಾಯಿತು?

ಹೈದರಾಬಾದ್: ಗಂಟಲಲ್ಲಿ ಚಿಕನ್ ಪೀಸ್ ಸಿಕ್ಕು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣ ರಾಜಧಾನಿಯ ಹೈದರಾಬಾದ್ ಸಿಟಿಯಲ್ಲಿನ ಷಾದ್ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್​.. ಇಬ್ಬರ ಮೃತದೇಹಗಳು ಪತ್ತೆ

ಹೈದರಾಬಾದ್​ನ ಅನ್ನಾರಂ ಗ್ರಾಮದ ನಿವಾಸಿ ಶ್ರೀಕಾಂತ್ (39) ಸಾವನ್ನಪ್ಪಿದ ದುರ್ದೈವಿ. ಇವರು ತನ್ನ ಸಹೋದರಿಯ ಮನೆಗೆ ಬಂದಿದ್ದನು. ಈ ವೇಳೆ ಕೋಟಿ ಎನ್ನುವ ನಗರದಲ್ಲಿನ ವೈನ್​ಶಾಪ್​ಗೆ ಹೋಗಿ ಚೆನ್ನಾಗಿ ಮದ್ಯಪಾನ ಮಾಡಿದ್ದಾರೆ. ಬಳಿಕ ನಶೆಯಲ್ಲಿಯೇ ಬಿರಿಯಾನಿ ಹೋಟೆಲ್​ಗೆ ಹೋಗಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದಾರೆ. ಹೋಟೆಲ್​ನಿಂದ ಹೊರಗಡೆ ಬರುವವರೆಗೂ ಚೆನ್ನಾಗಿಯೇ ಇದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಲಾಂಗ್ ಹಿಡಿದು ಇನ್​​ಸ್ಟಾದಲ್ಲಿ ವಿಡಿಯೋ​ ಶೇರ್​.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್​

ಆದರೆ ಹೋಟೆಲ್​​ನಿಂದ ಸ್ವಲ್ಪ ದೂರ ಬಂದ ಮೇಲೆ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಚಿಕನ್​ ಪೀಸ್ ನೋವು ಕೊಡಲು ಪ್ರಾರಂಭಿಸಿದೆ. ಇದರಿಂದ ಶ್ವಾಸಕೋಶದಲ್ಲಿ ಗಾಳಿಯಾಡದೇ ನರಳಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಬಿದ್ದು ಒದ್ದಾಡಿ, ಒದ್ದಾಡಿ ವ್ಯಕ್ತಿ ಕಣ್ಣು ಮುಚ್ಚಿದ್ದಾರೆ. ಕುಡಿದ ಮತ್ತಿನಲ್ಲಿ ಬಿರಿಯಾನಿ ಹೇಗೆಂದರೆ ಹಾಗೇ ತಿಂದಿರುವುದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕನ್ ಪೀಸ್​ ಗಂಟಲಲ್ಲಿ ಸಿಕ್ಕು ರಸ್ತೆ ಬದಿಯೇ ನರಳಿ, ನರಳಿ ಸಾವನ್ನಪ್ಪಿದ ವ್ಯಕ್ತಿ

https://newsfirstlive.com/wp-content/uploads/2024/06/TN_CHIKAN_NEW.jpg

Load More