ಜನಪ್ರಿಯ ಐಸ್ಕ್ರೀಮ್ ಪಾರ್ಲರ್ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ
ದಾಳಿಯಲ್ಲಿ ಸಿಕ್ಕ ಐಸ್ಕ್ರೀಮ್ನಲ್ಲಿ ಏನು ಬೆರೆಸಿದ್ದ ಗೊತ್ತಾ ಆ ಮಾಲೀಕ
11.5 ಕೆಜಿ ಐಸ್ಕ್ರೀಮ್ ವಶಕ್ಕೆ ಪಡೆದ ಅಧಿಕಾರಿಗಳು, ಕಠಿಣ ಕ್ರಮಕ್ಕೆ ಮುಂದು
ಅಬಕಾರಿ ಇಲಾಖೆ ಅಧಿಕಾರಿಗಳು ಹೈದ್ರಾಬಾದ್ನ ಆರಿಕೊ ಕೆಫೆ ಐಸ್ಕ್ರೀಮ್ ಪಾರ್ಲರ್ ಎಂಬ ಜನಪ್ರಿಯ ಐಸ್ಕ್ರೀಮ್ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಸಿಕ್ಕ ಕೆಲವು ಐಸ್ಕ್ರೀಮ್ಗಳು ಅಬಕಾರಿ ಪೊಲೀಸರನ್ನೇ ದಂಗುಬಡಿಸಿದೆ. ಐಸ್ಕ್ರೀಮ್ನಲ್ಲಿ ವಿಸ್ಕಿ ಬೆರಸಿ ಮಾರುತ್ತಿದ್ದರು ಎಂಬ ಮಾಹಿತಿ ತಿಳಿದ ಹೈದ್ರಾಬಾದ್ ಅಬಕಾರಿ ಇಲಾಖೆ, ಈ ಜನಪ್ರಿಯ ಐಸ್ಕ್ರೀಮ್ ಪಾರ್ಲರ್ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ: ಭಾರತೀಯರ ತಟ್ಟೆಯ ಮೇಲೆ ಬಾಂಗ್ಲಾದೇಶದ ಕಣ್ಣು, ಹೊಸ ಮಧ್ಯಂತರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಎಂತಹದು?
ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ಐಸ್ಕ್ರೀಮ್ ಪಾರ್ಲರ್ನಲ್ಲಿ ನಡೆಯುತ್ತಿರುವ ಅನಾಚಾರದ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಅಂಗಡಿಯ ಮಾಲೀಕರು ವಿವಿಧ ಬಗೆಯ ಐಸ್ಕ್ರೀಮ್ಗಳಿಗೆ ಸಾಕಷ್ಟು ವಿಸ್ಕಿ ಬೆರೆಸಿ ಕಾನೂನು ಬಾಹಿರವಾಗಿ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ದಾಳಿ ವೇಳೆ ಅಧಿಕಾರಿಗಳು 23 ಬಗೆಯ ಅಕ್ರಮ ಐಸ್ಕ್ರೀಮ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅವುಗಳ ತೂಕ ಒಟ್ಟು 11.5 ಕಿಲೋ ಗ್ರಾಂ ಎಂದು ಹೇಳಲಾಗುತ್ತಿದೆ.
Excise department officials have arrested One and Five Ice Cream store owners Dayakar Reddy and Sobhan for selling ice creams made out of #whiskey for exorbitant prices.During their inspection,
1/2 pic.twitter.com/g6yMp7EH7y— RSB NEWS 9 (@ShabazBaba) September 6, 2024
ಇದನ್ನೂ ಓದಿ: ಮೋದಿ ಉದ್ಘಾಟಿಸಿದ್ದ ವಿಶ್ವದ ಅತಿದೊಡ್ಡ ಆಫೀಸ್ ಕಟ್ಟಡ ಈಗ ಭೂತ ಬಂಗಲೆ; ಕಾರಣವೇನು?
ಐಸ್ಕ್ರೀಮ್ ಪಾರ್ಲರ್ನ ಮಾಲೀಕನಾದ ಶರತ್ ಚಂದ್ರ ರೆಡ್ಡಿ ಈ ಅಕ್ರಮ ಐಸ್ಕ್ರೀಮ್ ಮಾರಾಟದ ಹಿಂದಿರುವ ಮಾಸ್ಟರ್ ಮೈಂಡ್ ಎಂದು ಗೊತ್ತಾಗಿದೆ. ಪ್ರತಿಕಿಲೋ ಗ್ರಾಂ ಐಸ್ಕ್ರೀಮ್ಗೆ 60ml ವಿಸ್ಕಿ ಬೆರೆಸಿ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸ್ಕ್ರೀಮ್ಗೆ ವಿಸ್ಕಿ ಬೆರೆಸುವ ವೇಳೆಯೇ ಅಧಿಕಾರಿಗಳು ದಾಳಿ ಮಾಡಿದ್ದು. ವಿಸ್ಕಿ ಮಿಶ್ರಿತ ಐಸ್ಕ್ರೀಮ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಬಕಾರಿ ಇಲಾಖೆಯ ಅಧಿಕಾರಿ ಪ್ರದೀಪ್ ರಾವ್. ಎಲ್ಲ ನಿಯಮಗಳನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ. ಆಲ್ಕೊಹಾಲ್ ಬೆರೆತ ಉತ್ಪನ್ವನ್ನು ಚಿಕ್ಕ ಮಕ್ಕಳಿಗೆ ಮಾರುವುದು ಕಾನೂನು ಬಾಹಿರ, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಹಾಗೂ ತಕ್ಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ