newsfirstkannada.com

Breaking News: ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ಸಚಿವ ಪ್ರಿಯಾಂಕ ಖರ್ಗೆ

Share :

03-11-2023

  ‘ಐದೂ ವರ್ಷ ನಾನೇ ಸಿಎಂ’ ಎಂದು ಸಿದ್ದರಾಮಯ್ಯ ಹೇಳಿಕೆ

  ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಮುಖ್ಯಮಂತ್ರಿ ವಿಚಾರ

  ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ-ಖರ್ಗೆ

ಮೈಸೂರು: ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

‘ಮುಂದಿನ ಐದು ವರ್ಷಗಳ ಕಾಲ ನಮ್ಮದೇ ಸರ್ಕಾರ, ನಾನೇ ಸಿಎಂ’ ಎಂಬ ಸಿದ್ದರಾಮಯ್ಯರ ಹೇಳಿಕೆ.. ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯರ ಈ ಹೇಳಿಕೆ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರ ಕಣ್ಣು ಕೆಂಪಾಗಿಸುವಂತೆ ಮಾಡಿದೆ.

ಸಿದ್ದರಾಮಯ್ಯ ಹೇಳಿಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಪ್ರಿಯಾಂಕ ಖರ್ಗೆ.. ಸಿಎಂ ಯಾರು ಆಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡಿರೋದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನನ್ನನ್ನೂ ಸೇರಿ ಯಾರೇ ಇರಬಹುದು. ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆ ನಡೆದಿದೆ ಅನ್ನೋದು ಅವರಿಗಷ್ಟೇ ಗೊತ್ತಿದೆ. ಅದು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ನಾನು ಕೂಡ ಏನಾದರೂ ಹೇಳಿದರೆ ಅದು ನನ್ನ ಕಲ್ಪನೆಯೇ ಹೊರತು ಹೈಕಮಾಂಡ್ ಆದೇಶ, ಸಂದೇಶ ಅಲ್ಲ ಎಂದರು.

ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕೂಡ ಹೈಕಮಾಂಡ್ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಅಂದು ನಾಲ್ಕು ಜನ ಕೂತು ಮಾತನಾಡಿದ್ದಾರೆ, ಅಲ್ಲಿ ತೆಗೆದುಕೊಂಡು ತೀರ್ಮಾನವೇ ಅಂತಿಮ. ಎಲ್ಲವನ್ನೂ ಹೈಕಮಾಂಡ್ ಹೇಳಬೇಕು. ಹೈಕಮಾಂಡ್ ನಾಯಕರು ನಾಳೆ ನನಗೆ ಫೋನ್ ಮಾಡಿ, ನೀವೇ ಮುಖ್ಯಮಂತ್ರಿ ಅಂದರೆ ನಾನು ‘ಎಸ್​’ ಎನ್ನುತ್ತೇನೆ. ನಾವು ರೆಡಿ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟ ಸಚಿವ ಪ್ರಿಯಾಂಕ ಖರ್ಗೆ

https://newsfirstlive.com/wp-content/uploads/2023/06/PRIYANK_KHARGE.jpg

Load More