ಧೋನಿ ಲೈಫ್ಸ್ಟೈಲ್ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು..?
ಯುವರಾಜ್ ಕ್ರಿಕೆಟ್ ಕರಿಯರ್ ಹಾಳು ಮಾಡಿದ್ರಾ ಧೋನಿ..?
ಧೋನಿ ಬಗ್ಗೆ ಯುವರಾಜ್ ಸಿಂಗ್ ಸ್ಪೋಟಕ ಹೇಳಿಕೆ..!
ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್, ಎಂ.ಎಸ್.ಧೋನಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಯುವರಾಜ್ ತಂದೆ ಯೋಗರಾಜ್ ಸಿಂಗ್, ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ರು, ಇದೀಗ ಯುವರಾಜ್ ಸಿಂಗ್, ಮಾಜಿ ನಾಯಕನ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಾರೆ. ಧೋನಿ ಮೇಲೆ ಯುವರಾಜ್ಗೆ ಕೋಪ ಯಾಕೆ..? ಈ ಸ್ಟೋರಿ ಓದಿ.
ಮಹೇಂದ್ರ ಸಿಂಗ್ ಧೋನಿ..! ಈ ಹೆಸರಲ್ಲೇ ಅದೇನೋ ಶಕ್ತಿ ಇದೆ. ಧೋನಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಗುಡ್ಬೈ ಹೇಳಿ 5 ವರ್ಷ ಕಳೆದಿದೆ. ಆದರೂ ಧೋನಿ ಹೆಸರು, ಭಾರತೀಯ ಕ್ರಿಕೆಟ್ನಲ್ಲಷ್ಟೇ ಅಲ್ಲ! ವಿಶ್ವಕ್ರಿಕೆಟ್ನಲ್ಲಿ ಇನ್ನೂ ರಾರಾಜಿಸುತ್ತಿದೆ.
ಹೌದು..! ಟೀಮ್ ಇಂಡಿಯಾ ನಾಯಕನಾಗಿ, ಆಟಗಾರನಾಗಿ ಧೋನಿ ಕೊಡುಗೆ ಅಪಾರ. ಭಾರತಕ್ಕೆ ಟಿ-ಟ್ವೆಂಟಿ ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, ನಿಜವಾಗ್ಲೂ ಗ್ರೇಟೇ ಬಿಡಿ..! ತನ್ನ ಕ್ರಿಕೆಟ್ ಕರಿಯರ್ನಲ್ಲಿ ಸಹ ಆಟಗಾರರ ಮತ್ತು ಎದುರಾಳಿ ತಂಡಗಳ ಆಟಗಾರರ ಪ್ರೀತಿ ಗೆದ್ದಿದ್ದ ಮಾಹಿ, ಆ ಒಬ್ಬ ಆಟಗಾರನಿಗೆ ಮಾತ್ರ ವಿಲನ್ ಆಗ್ಬಿಟ್ರು..!
ಯುವರಾಜ್ ಸಿಂಗ್ಗೆ ಧೋನಿ ಅಂದ್ರೆ ಅಷ್ಟಕಷ್ಟೆ.! ಏನೋ ಒಂದೇ ತಂಡಕ್ಕೆ ಕ್ರಿಕೆಟ್ ಆಡ್ತಿದ್ದೀವಿ ಅಂತ, ಆನ್ಫೀಲ್ಡ್ನಲ್ಲಿ ಜೊತೆಜೊತೆಯಾಗಿ ಕಾಣಿಸಿಕೊಂಡಿರಬಹುದು. ಆದರೆ, ಆಫ್ ದಿ ಫೀಲ್ಡ್ನಲ್ಲಿ ಯುವಿಗೆ, ಧೋನಿ ಮೇಲೆ ಇದ್ದ ಅಭಿಪ್ರಾಯವೇ ಬೇರೆ..!
ಯುವರಾಜ್ ಸಿಂಗ್ ಧೋನಿಗಿಂತ ಸೀನಿಯರ್ ಪ್ಲೇಯರ್. ಆದರೆ ತನಗಿಂತ ಹಿಂದೆ ಬಂದವ ಟೀಮ್ ಇಂಡಿಯಾ ನಾಯಕನಾದ್ರೆ, ಯುವಿ ಹೇಗೆ ತಡ್ಕೋತಾರೆ ಹೇಳಿ..! ಯುವರಾಜ್ ಒಳ ಗಾಯವನ್ನ ನೀವೇ ಒಮ್ಮೆ ನೋಡಿ, ಕೇಳ್ಬಿಡಿ..!
ವಿಡಿಯೋ ಕೃಪೆ: ಟಿಆರ್ಎಸ್ ಕ್ಲಿಪ್ಸ್
ಧೋನಿ ಟೀಮ್ ಇಂಡಿಯಾ ನಾಯಕನಾಗಿದ್ದಾಗ, ಯುವರಾಜ್ ಸಿಂಗ್ ಕರಿಯರ್ನಲ್ಲಿ ಚೆಲ್ಲಾಟ ಆಡಿದ್ರು ಅಂತ, ಯುವಿ ತಂದೆ ಯೋಗರಾಜ್ ಸಿಂಗ್ ಆಗಾಗ ಆಕ್ರೋಶ ವ್ಯಕ್ತಪಡಿಸ್ತಿದ್ರು. ಆದರೀಗ ಸ್ವತಃ ಯುವರಾಜ್ ಇನ್ಡೈರೆಕ್ಟ್ ಆಗಿ ಧೋನಿ ವಿರುದ್ಧ ಆರೋಪಿಸಿದ್ದಾರೆ.
ಒಟ್ಟಿನಲ್ಲಿ..! ಧೋನಿ ಮತ್ತು ಯುವರಾಜ್ ಸಿಂಗ್ ನಡುವೆ ಎಲ್ಲವೂ ಸರಿ ಇರ್ಲಿಲ್ಲ ಅನ್ನೋದು, ಸಾಬೀತಾಗಿದೆ. ಇಷ್ಟು ದಿನ ಯುವಿ ತಂದೆ ಯೋಗರಾಜ್ ಸಿಂಗ್, ಮಾಹಿ ವಿರುದ್ಧ ಘರ್ಜಿಸ್ತಿದ್ರು. ಇದೀಗ ಯುವರಾಜ್ ಧೋನಿ ವಿರುದ್ಧ ಬಹಿರಂಗ ಹೇಳಿಕೆ ನೀಡೋ ಮೂಲಕ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ