newsfirstkannada.com

ನಿಖಿಲ್ ಕುಮಾರಸ್ವಾಮಿಗೂ ಎದುರಾಯ್ತು ಹುಲಿ ಉಗುರಿನ ಸಂಕಷ್ಟ; ಮದುವೆಗೆ ಪೆಂಡೆಂಟ್‌ ಗಿಫ್ಟ್‌ ಕೊಟ್ಟಿದ್ದು ಯಾರು?

Share :

25-10-2023

    ತಮ್ಮ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂದು ನಿಖಿಲ್​ ಸ್ಪಷ್ಟನೆ

    ಮದುವೆ ವೇಳೆ ನೀಡಿರುವ ಉಡುಗೊರೆ ಈಗಲೂ ನನ್ನ ಬಳಿ ಇದೆ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ಅರಿವಿದೆ

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್‌ ಧರಿಸಿರುವ ಆರೋಪ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಟ್ಟಿಲ್ಲ. ಪೋಟೋ ವೈರಲ್ ಆದ ಬಳಿಕ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪವನ್ನು ಖುದ್ದು ನಿಖಿಲ್ ಕುಮಾರಸ್ವಾಮಿ ಅವರು ತಳ್ಳಿ ಹಾಕಿದ್ದಾರೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ. ವರ್ತೂರು ಸಂತೋಷ್ ಅವರ ಈ ಪ್ರಕರಣ ರಾಜ್ಯಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಇದೀಗ ಹುಲಿ ಉಗುರಿನ ಇದೇ ಕ್ರೇಜ್ ರಾಜ್ಯದ ಕೆಲವು ಸೆಲೆಬ್ರಿಟಿಗಳಿಗೂ‌ ಮುಳುವಾಗುವ ಸಾಧ್ಯತೆ ಇದೆ.

ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಅದೇ ರೀತಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ. ಇನ್ನೂ ಮದುವೆ ವೇಳೆ ಹುಲಿ ಉಗುರು ಪೆಂಡೆಂಟ್​ ಧರಿಸಿದ್ದ ಜೆಡಿಎಸ್ ಯುವ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಆ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ‘‘ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ನಿಖಿಲ್ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಖಿಲ್ ಕುಮಾರಸ್ವಾಮಿಗೂ ಎದುರಾಯ್ತು ಹುಲಿ ಉಗುರಿನ ಸಂಕಷ್ಟ; ಮದುವೆಗೆ ಪೆಂಡೆಂಟ್‌ ಗಿಫ್ಟ್‌ ಕೊಟ್ಟಿದ್ದು ಯಾರು?

https://newsfirstlive.com/wp-content/uploads/2023/10/nikil.jpg

Load More