newsfirstkannada.com

×

IAS ಆಗಬೇಕು ಎಂದಿದ್ದ ಯುವಕ; ಕೇವಲ 28 ವರ್ಷಕ್ಕೆ 150 ಕೋಟಿ ಕಂಪನಿ ಮಾಲೀಕ ಆಗಿದ್ಹೇಗೆ?

Share :

Published September 19, 2024 at 6:19am

    ಎಲ್ಲರಿಗೂ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಲೇಬೇಕು ಅನ್ನೋ ಗುರಿ ಇರುತ್ತೆ!

    ಕೆಲವೊಮ್ಮೆ ನಮ್ಮ ಗುರಿ ಒಂದಾದ್ರೆ, ನಾವು ಸಕ್ಸಸ್​ ಆಗೋದೇ ಮತ್ತೊಂದು ಕ್ಷೇತ್ರದಲ್ಲಿ

    ಗುರಿ ತಲುಪದೆ ಹೋದ್ರೂ ಏನಾದ್ರೂ ಒಂದು ಸಾಧನೆ ಅಂತೂ ಮಾಡಿಯೇ ತೀರುತ್ತೇವೆ

ಎಲ್ಲರಿಗೂ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಲೇಬೇಕು ಅನ್ನೋ ಗುರಿ ಇದ್ದೇ ಇರುತ್ತದೆ. ಕೆಲವೊಮ್ಮೆ ನಮ್ಮ ಗುರಿ ಒಂದಾದ್ರೆ, ನಾವು ಸಕ್ಸಸ್​ ಆಗೋದೇ ಮತ್ತೊಂದು ಕ್ಷೇತ್ರದಲ್ಲಿ. ಎಷ್ಟು ವಿಚಿತ್ರ ಎಂದರೆ ನಾವು ನಮ್ಮ ಗುರಿ ತಲುಪದೆ ಹೋದ್ರೂ ಏನಾದ್ರೂ ಒಂದು ಸಾಧನೆ ಅಂತೂ ಮಾಡುತ್ತೇವೆ. ಇಂಥದ್ದೇ ಒಂದು ಕಥೆ ನಿಮ್ಮ ಮುಂದೆ..!

ಐಎಎಸ್​​​ ಆಗಬೇಕಿದ್ದ ಯುವಕ ಕೋಟಿ ಕೋಟಿ ಸಂಪಾದಿಸಿದ್ದು ಹೇಗೆ?

ಹೆಸರು ಅನುಭವ್ ದುಬೆ. ಯುವ ಉದ್ಯಮಿ ಕೂಡ ಹೌದು. ಚಾಯ್ ಸುಟ್ಟಾ ಬಾರ್ ಎಂಬ ಕೆಫೆ ಎಲ್ಲರಿಗೂ ಗೊತ್ತೇ ಇರುತ್ತೆ. ಅದರ ಮಾಲೀಕರೇ ಈ ಅನುಭವ್ ದುಬೆ. ಯುಪಿಎಸ್‌ಸಿ ಗುರಿ ಹೊಂದಿದ್ದ ಈ ವ್ಯಕ್ತಿ ಸಾಧನೆ ಮಾಡಿದ್ದೇ ಬೇರೆ ಕ್ಷೇತ್ರದಲ್ಲಿ. ಅದು ಕೆಫೆ ಉದ್ಯಮದಲ್ಲಿ ಎಂಬುದು ವಿಶೇಷ. ಗುರಿ ಕಡೆ ಸಾಗದಿದ್ರೂ ಕೋಟಿ ಕೋಟಿ ಸಂಪಾದನೆ ಅಂತೂ ಮಾಡಿದ್ದಾರೆ.

ಯಾರು ಅನುಭವ್​​ ದುಬೆ?

ಅನುಭವ್ ದುಬೆ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ತಂದೆಗೆ ಮಗ ಐಎಎಸ್ ಆಗಬೇಕು ಅನ್ನೋ ಆಸೆ ಇತ್ತು. ತಂದೆ ಆಸೆಯಂತೆ ಅನುಭವ್‌ ದುಬೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ, ದುಬೆ ಯುಪಿಎಸ್​​ಸಿ ಪಾಸ್​ ಮಾಡಲು ಆಗಲಿಲ್ಲ. ಬಳಿಕ ದುಬೆ ವ್ಯಾಪಾರದ ಜಗತ್ತಿಗೆ ಕಾಲಿಟ್ಟರು. ಸ್ನೇಹಿತ ಆನಂದ್‌ ನಾಯಕ್ ಜತೆ ಸೇರಿ ಕೇವಲ 3 ಲಕ್ಷದಲ್ಲಿ ಚಾಯ್ ಸುಟ್ಟಾ ಬಾರ್‌ ಲೇ ಔಟ್‌ ಶುರು ಮಾಡಿದ್ರು. ಒಂದು ಚಾಯ್ ಸುಟ್ಟಾ ಬಾರ್‌ ಬಳಿಕ 400 ಆಯ್ತು. ಸದ್ಯ ಈ ಚಹಾ ಕೆಫೆ ದೇಶದ 195ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಇದೆ. ದುಬೈ, ಯುಕೆ, ಕೆನಡಾ ಮತ್ತು ಓಮನ್‌ಗಳಲ್ಲಿ ಕೂಡ ಇವರ ಬ್ಯುಸಿನೆಸ್​ ಇದೆ.

ಬರೋಬ್ಬರಿ 150 ಕೋಟಿ ಬ್ಯುಸಿನೆಸ್​​

ಚಾಯ್ ಸುಟ್ಟಾ ಬಾರ್ ಸುಮಾರು 150 ಕೋಟಿ ರೂ. ವಾರ್ಷಿಕ ವಹಿವಾಟಿಗೆ ಸಾಕ್ಷಿಯಾಗಿದೆ. ಕೇವಲ 28 ವರ್ಷಕ್ಕೆ 150 ಕೋಟಿ ಆಸ್ತಿಗೆ ಅನುಭವ್ ದುಬೆ ಮಾಲೀಕರಾಗಿದ್ದಾರೆ. 150ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇದು 250ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿದೆ.

ಇದನ್ನೂ ಓದಿ: ಪಂಜಾಬ್​ ಕಿಂಗ್ಸ್​ನಿಂದ ಮಹತ್ವದ ಘೋಷಣೆ; ಮುಖ್ಯ ಕೋಚ್​​ ಆಗಿ ರಿಕಿ ಪಾಂಟಿಂಗ್​​ ನೇಮಕ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IAS ಆಗಬೇಕು ಎಂದಿದ್ದ ಯುವಕ; ಕೇವಲ 28 ವರ್ಷಕ್ಕೆ 150 ಕೋಟಿ ಕಂಪನಿ ಮಾಲೀಕ ಆಗಿದ್ಹೇಗೆ?

https://newsfirstlive.com/wp-content/uploads/2024/09/Anubhav-Dubey-2.jpg

Load More