ಏರ್ ಬಲೂನ್ನಿಂದ ಆಕಾಶಕ್ಕೆ ಕಳುಹಿಸಿ ಟ್ರೋಫಿ ಅನಾವರಣ
ಈ ಬಾರಿ ವಿನೂತನವಾಗಿ ಟ್ರೋಫಿ ಲಾಂಚ್ ಮಾಡಿದ ಐಸಿಸಿ
ವಿಶ್ವಕಪ್ ಫೈನಲ್ ಮ್ಯಾಚ್ ನಡೆಯುವುದು ಈ ಸ್ಟೇಡಿಯಂನಲ್ಲಿ
2023ರ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ಈ ಬಾರಿ ಭಾರತದಲ್ಲಿ ನಡೆಯಲಿದೆ. ಇದಕ್ಕಾಗಿ ಐಸಿಸಿಯು ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಡೀ ವಿಶ್ವವೇ 2023ರ ವರ್ಲ್ಡ್ ಕಪ್ಗಾಗಿ ಕಾದು ಕುಳಿತ್ತಿದ್ದು ಈ ವಿಶ್ವಕಪ್ ಅನ್ನು ಐಸಿಸಿಯು ವಿನೂತನ ರೀತಿಯಲ್ಲಿ ಬಾಹ್ಯಾಕಾಶದಲ್ಲಿ ಲಾಂಚ್ ಮಾಡಿದೆ. ಅಲ್ಲದೇ ಬಾಹ್ಯಾಕಾಶದಲ್ಲಿ ಲಾಂಚ್ ಆದ ವಿಶ್ವದ ಮೊದಲು ಟ್ರೋಫಿ ಎನಿಸಿಕೊಂಡಿತು.
ವಿಶ್ವಕಪ್ ಟ್ರೋಫಿಯನ್ನು ಸರಿಯಾಗಿ ಭೂಮಿಯಿಂದ 1,20,000 ಅಡಿ ಎತ್ತರದಲ್ಲಿ ಏರ್ ಬಲೂನ್ ಮೂಲಕ ಆಕಾಶದೆಡೆಗೆ ಕಳುಹಿಸಿ ಅನಾವರಣ ಮಾಡಲಾಯಿತು. ಈ ಟ್ರೋಫಿಯು ಇಟಲಿ, ಬೆಹರೆನ್, ಉಗಾಂಡ, ನೈಜೀರಿಯಾ, ಫ್ರಾನ್ಸ್, ಪಾಕಿಸ್ತಾನ, ಇಂಗ್ಲೆಂಡ್, ಕುವೈತ್, ಆಸ್ಟ್ರೇಲಿಯಾ ಹೀಗೆ 18 ರಾಷ್ಟ್ರಗಳಲ್ಲಿ ಸಂಚಾರ ಮಾಡಲಿದೆ. ಟ್ರೋಫಿಯು ಭಾರತದಲ್ಲಿ ಇಂದು ಅಂದರೆ ಜೂನ್ 27 ರಂದು ಪ್ರಾರಂಭವಾಗಿ ಪ್ರಪಂಚದಾದ್ಯಂತ ಪ್ರಯಾಣಿಸಿ ನಂತರ ಸೆಪ್ಟಂಬರ್ 4 ರಂದು ಭಾರತಕ್ಕೆ ಬರಲಿದೆ. ಅಂದೇ ಅದಕ್ಕೆ ತೆರೆ ಬೀಳಲಿದೆ ಎಂದು ತಿಳಿಸಲಾಗಿದೆ.
ವಿಶ್ವಕಪ್ ಪಂದ್ಯಾವಳಿಗಳು ಅಕ್ಟೋಬರ್ 5 ರಿಂದ ಆರಂಭ ಆಗಲಿವೆ. ಮೊದಲ ಪಂದ್ಯ ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೈನಲ್ ಮ್ಯಾಚ್ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯುವುದು ವಿಶೇಷ ಎನಿಸಿದೆ. 1,20,000 ಅಡಿ ಎತ್ತರದಲ್ಲಿ ವಿಶ್ವಕಪ್ ಫೋಟೋ ತೆಗೆಯಲಾಗಿದೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲ, ಇದನ್ನು ಸಿದ್ಧಪಡಿಸಲಾಯಿತು ಎಂಬುದರ ಬಗ್ಗೆ ವಿಡಿಯೋವನ್ನು ಬಿಸಿಸಿಐ ಕಾರ್ಯದರ್ಶಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
An out-of-this-world moment for the cricketing world as the #CWC23 trophy unveiled in space. Marks a milestone of being one of the first official sporting trophies to be sent to space. Indeed a galactic start for the ICC Men's Cricket World Cup Trophy Tour in India. @BCCI @ICC… pic.twitter.com/wNZU6ByRI5
— Jay Shah (@JayShah) June 26, 2023