20 ತಂಡಗಳು ವಿಶ್ವಕಪ್ನಲ್ಲಿ ಭಾಗಿಯಾಗಲಿವೆ
ಒಟ್ಟು 10 ಮೈದಾನದಲ್ಲಿ ಟೂರ್ನಿ ಆಯೋಜನೆ
ಟಿ-20 ವರ್ಲ್ಡ್ ಕಪ್ ಯಾವಾಗಿಂದ ನಡೆಯುತ್ತೆ..?
ಐಸಿಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯ-2023ಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದಾರೆ. ಇದರ ಮಧ್ಯೆ 2024ರಲ್ಲಿ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ನ ವೇಳಾಪಟ್ಟಿ ಬಿಡುಗಡೆಯಾಗಿದೆ.
2024 ಜೂನ್ 4 ರಿಂದ ಶುರುವಾಗಿ ಜೂನ್ 30ಕ್ಕೆ ತೆರೆ ಬೀಳಲಿದೆ. ಅಮೆರಿಕದಲ್ಲಿ ಈ ಕ್ರೀಡಾಕೂಟ ಆಯೋಜನೆಗೊಳ್ಳಲಿದ್ದು, ಒಟ್ಟು 10 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ವೆಸ್ಟ್ ವಿಂಡೀಸ್ ಹಾಗೂ ಅಮೆರಿಕ ಟೂರ್ನಿಯನ್ನು ಆಯೋಜಿಸುತ್ತಿವೆ. ಒಟ್ಟು 10 ಮೈದಾನಗಳಲ್ಲಿ ಪಂದ್ಯ ನಡೆಯಲಿವೆ.
2024ರ ಟೂರ್ನಿಯಲ್ಲಿ ಯಾವೆಲ್ಲ ತಂಡ
2024ರ ವಿಶ್ವಕಪ್ನಲ್ಲಿ ಒಟ್ಟು 20 ಪಂದ್ಯಗಳು ಟೂರ್ನಿಯ ಭಾಗವಾಗಲಿವೆ. 12 ತಂಡಗಳು ಈಗಾಗಲೇ ವಿಶ್ವಕಪ್ಗೆ ಅರ್ಹತೆಯನ್ನು ಪಡೆದುಕೊಂಡಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಇಂಡಿಯಾ, ನೆದರ್ಲ್ಯಾಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅರ್ಹತೆ ಪಡೆದುಕೊಂಡಿವೆ. ಇನ್ನು ಟೂರ್ನಿ ಆಯೋಜಿಸುತ್ತಿರುವ ಅಮೆರಿಕ ಮತ್ತು ವೆಸ್ಟ್ ವಿಂಡೀಸ್ ನೇರವಾಗಿ ಪಂದ್ಯಾವಳಿಗೆ ಎಂಟ್ರಿ ನಿಡಲಿವೆ.
ಕಳೆದ ಬಾರಿಗಿಂತ 2024ರಲ್ಲಿ ನಡೆಯುವ ಟೂರ್ನಿ ತುಂಬಾನೇ ವಿಭಿನ್ನವಾಗಿದೆ. 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಟಾಪ್-2 ತಂಡಗಳನ್ನು ಸೂಪರ್-8 ಹಂತವನ್ನು ಪ್ರವೇಶ ಮಾಡಲಿವೆ. ಸೂಪರ್ -8 ಹಂತವನ್ನು ತಲಾ 4 ತಂಡಗಳೊಂದಿಗೆ ಎರಡು ಗ್ರೂಪ್ ಮಾಡಲಾಗುತ್ತದೆ. ಈ ಎರಡು ಗ್ರೂಪ್ನಲ್ಲಿ ಗೆಲುವು ಸಾಧಿಸಿದ ಟಾಪ್-2 ತಂಡಗಳು ಸೆಮಿಫೈನಲ್ ಪ್ರವೇಶ ಮಾಡಲಿವೆ. 2022 ವಿಶ್ವಕಪ್ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶ ಮಾಡಿದ್ದವು. ಇಂಗ್ಲೆಂಡ್ ಪಾಕ್ ಬಗ್ಗು ಬಡಿದು ಟಿ-20 ವಿಶ್ವಕಪ್ಗೆ ಮುತ್ತಿಟ್ಟಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ