newsfirstkannada.com

ICC ODI Ranking: ನಂ. 1 ಬ್ಯಾಟರ್​​ ಆಗಲು ಕೊಹ್ಲಿಗೆ ಬೇಕು ಕೇವಲ 60 ಪಾಯಿಂಟ್​​!

Share :

08-11-2023

    ವಿಶ್ವಕಪ್​ ಮಧ್ಯೆಯೇ ಐಸಿಸಿ ಏಕದಿನ ಱಂಕಿಂಗ್​ ಪ್ರಕಟ

    ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​​ ಗಿಲ್​ಗೆ ನಂ. 1 ಸ್ಥಾನ

    ಕ್ಯಾಪ್ಟನ್​​ ರೋಹಿತ್​​, ವಿರಾಟ್​​ ಕೊಹ್ಲಿಗೆ ಎಷ್ಟನೇ ಸ್ಥಾನ..?

ಸದ್ಯ ನಡೆಯುತ್ತಿರೋ 2023ರ ಐಸಿಸಿ ಏಕದಿನ ವಿಶ್ವಕಪ್​​​ ಟೂರ್ನಿಯಲ್ಲಿ ಎಂಟಕ್ಕೆ ಎಂಟು ಪಂದ್ಯ ಗೆದ್ದು ಟೀಮ್​ ಇಂಡಿಯಾ ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ. ಟೀಂ ಇಂಡಿಯಾದ ಗೆಲುವಿನ ನಾಗಲೋಟ ಮುಂದುವರಿದಿದ್ದು, ಈ ಮಧ್ಯೆ ಐಸಿಸಿ ಏಕದಿನ ಱಂಕಿಂಗ್​​ ಪಟ್ಟಿಯನ್ನು ರಿಲೀಸ್​ ಮಾಡಿದೆ.

ಹೌದು, ಐಸಿಸಿ ಏಕದಿನ ಱಂಕಿಂಗ್​ ಪಟ್ಟಿ ರಿಲೀಸ್​ ಆಗಿದ್ದು, ಟೀಂ ಇಂಡಿಯಾದ ಯುವ ಬ್ಯಾಟರ್​​ ಶುಭ್ಮನ್​​ ಗಿಲ್​​​ ಪಾಕ್​ ಕ್ಯಾಪ್ಟನ್​ ಬಾಬರ್​ ಅಜಮ್​ ಅವರನ್ನು ಹಿಂದಿಕ್ಕಿ ನಂಬರ್​ 1 ಸ್ಥಾನಕ್ಕೇರಿದ್ದಾರೆ.

ಶುಭ್ಮನ್​ ಗಿಲ್​​​ 830 ಪಾಯಿಂಟ್​ಗಳ ಮೂಲಕ ನಂಬರ್​ 1 ಆಗಿದ್ದರೆ, ಪಾಕ್​​ ಕ್ಯಾಪ್ಟನ್​​ ಬಾಬರ್​​​ 824 ಪಾಯಿಂಟ್​​ ಜತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ ಭಾರತದ ಇಬ್ಬರು ಸ್ಟಾರ್​ ಆಟಗಾರರು ವಿರಾಟ್​ ಕೊಹ್ಲಿ, ಕ್ಯಾಪ್ಟನ್​ ರೋಹಿತ್​ ಶರ್ಮಾ ಟಾಪ್​​ ಟೆನ್​ನಲ್ಲಿ ಇದ್ದಾರೆ. ಅದರಲ್ಲೂ ಕೊಹ್ಲಿ 4ನೇ ಸ್ಥಾನದಲ್ಲಿದ್ದು, ನಂಬರ್​​ 1 ಆಗಲು ಕೇವಲ 60 ಪಾಯಿಂಟ್​ ಬೇಕಿದೆ.

ಐಸಿಸಿ ಱಂಕಿಂಗ್​ ಪಟ್ಟಿ ಹೀಗಿದೆ..!

1) ಶುಭ್‌ಮನ್ ಗಿಲ್ (830)
2) ಬಾಬರ್ ಆಜಮ್ (824)
3) ಕ್ವಿಂಟನ್ ಡಿ ಕಾಕ್ (771)
4) ವಿರಾಟ್ ಕೊಹ್ಲಿ (770)
5) ಡೇವಿಡ್ ವಾರ್ನರ್ (743)
6) ರೋಹಿತ್ ಶರ್ಮಾ (739)
7) ವ್ಯಾನ್ ಡೆರ್ ಡಸ್ಸೆನ್ (730)
8) ಹ್ಯಾರಿ ಟೆಕ್ಟರ್ (729)
9) ಹೆನ್ರಿಕ್ ಕ್ಲಾಸೆನ್ (725)
10) ಡೇವಿಡ್ ಮಲಾನ್ (704)

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ICC ODI Ranking: ನಂ. 1 ಬ್ಯಾಟರ್​​ ಆಗಲು ಕೊಹ್ಲಿಗೆ ಬೇಕು ಕೇವಲ 60 ಪಾಯಿಂಟ್​​!

https://newsfirstlive.com/wp-content/uploads/2023/11/VIRAT-KOHLI.jpg

Load More