newsfirstkannada.com

ShubmanGill: ಪಾಕ್​ ಆಟಗಾರರಿಗೆ ಟಕ್ಕರ್ ಕೊಟ್ಟ ಶುಭ್​ಮನ್ ಗಿಲ್‌, ಸಿರಾಜ್‌; ICC ಏಕದಿನ ಱಂಕಿಂಗ್​ನಲ್ಲಿ ನಂ.1 ಪಟ್ಟ

Share :

08-11-2023

    ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್​ ಗಳಿಸಿರುವ ಶುಭ್​ಮನ್ ಗಿಲ್

    ICC ಏಕದಿನ ಱಂಕಿಂಗ್ ಔಟ್, ಬೌಲಿಂಗ್​ನಲ್ಲಿ ಸಿರಾಜ್ ಫಸ್ಟ್

    ಪಾಕ್​ ಕ್ಯಾಪ್ಟನ್ ಬಾಬರ್​​ನನ್ನ ಹಿಂದಿಕ್ಕಿದ ಶುಭ್​ಮನ್​ ಗಿಲ್, ಹೇಗೆ?

ಯುವ ಬ್ಯಾಟ್ಸ್​ಮನ್​ ಶುಭ್​ಮನ್ ಗಿಲ್​ ಅವರು ಅಮೋಘ ಫಾರ್ಮ್​ನಲ್ಲಿದ್ದು ಬ್ಯಾಟಿಂಗ್​ನಿಂದ ಎದುರಾಳಿಗಳಲ್ಲಿ ಭಯ ಹುಟ್ಟಿಸುವ ಆಟಗಾರ. ಇದೀಗ ಐಸಿಸಿ ಏಕದಿನ ಪಂದ್ಯಗಳಲ್ಲಿನ ಬ್ಯಾಟ್ಸ್​ಮನ್​, ಬೌಲರ್ಸ್​ಗಳ ಱಂಕಿಂಗ್​ ಅನ್ನು ರಿಲೀಸ್ ಮಾಡಿದೆ. ಈ ಎರಡು ವಿಭಾಗದಲ್ಲೂ ಟೀಮ್​ ಇಂಡಿಯಾದ ಇಬ್ಬರು ಅಗ್ರ ಸ್ಥಾನ ಪಡೆದುಕೊಳ್ಳುವ ಮೂಲಕ ಪಾಕಿಸ್ತಾನವನ್ನು ಹಿಂದಕ್ಕೆ ತಳ್ಳಿದ್ದಾರೆ.

ಶುಭ್​ಮನ್ ಗಿಲ್ ಬ್ಯಾಟಿಂಗ್

ಐಸಿಸಿ ಬಿಡುಗಡೆ ಮಾಡಿರುವ ಱಂಕಿಂಗ್​ನಲ್ಲಿ ವಿಶ್ವದ ಬ್ಯಾಟ್ಸ್​​ಮನ್​ಗಳಲ್ಲಿ ಶುಭ್​ಮನ್​ ಗಿಲ್​ 830 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಈ ಸ್ಥಾನದಲ್ಲಿ ಪಾಕ್ ಕ್ಯಾಪ್ಟನ್​ ಬಾಬರ್ ಇದ್ದರು. ಆದ್ರೆ ಗಿಲ್​, ಬಾಬರ್​ಗಿಂತ 6 ಅಂಕಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಶುಭ್​ಮನ್ ಗಿಲ್ ಈ ವರ್ಷ ಅತಿ ಹೆಚ್ಚು ರನ್​ ಗಳಿಸಿದ್ದು ಒಟ್ಟು 2000 ರನ್​ಗಳನ್ನು ಕಲೆ ಹಾಕಿದ್ದಾರೆ.

ಈ ಮೊದಲು ಭಾರತದ ಮಾಜಿ ಕ್ಯಾಪ್ಟನ್​ ಎಂಎಸ್ ಧೋನಿ, 38 ಇನ್ನಿಂಗ್ಸ್​ನಲ್ಲಿ ಐಸಿಸಿ ಱಂಕಿಂಗ್​ನಲ್ಲಿ ಮೊದಲ ವೇಗದ ಆಟಗಾರ ಸ್ಥಾನ ಪಡೆದಿದ್ದರೇ, ಇದೀಗ ಗಿಲ್​ 41 ಇನ್ನಿಂಗ್ಸ್​ನಲ್ಲಿ ಪ್ರಥಮ ಸ್ಥಾನ ಗಳಿಸಿ 2ನೇ ವೇಗದ ಆಟಗಾರ ಎಂಬ ಹೆಸರು ಪಡೆದಿದ್ದಾರೆ.

ಆಫ್ರಿದಿ ಹಾಗೂ ಭಾರತದ ಸಿರಾಜ್, ಶಮಿ

ಏಕದಿನ ಱಂಕಿಂಗ್​ನ ಬೌಲರ್​ಗಳ ವಿಭಾಗದಲ್ಲಿ ವಿಶ್ವದ ಬೌಲರ್​ಗಳಲ್ಲಿ ಮೊಹಮ್ಮದ್ ಸಿರಾಜ್ ಪ್ರಥಮ ಸ್ಥಾನವನ್ನು ಮತ್ತೆ ತಾವೇ ಪಡೆದುಕೊಂಡಿದ್ದಾರೆ. ಈ ಮೊದಲು ಱಂಕಿಂಗ್​​ನಲ್ಲೂ ಸಿರಾಜ್ ಅಗ್ರಜರಾಗಿದ್ದರು. ಎದುರಾಳಿಗಳ ವಿರುದ್ಧ ಆಕ್ರಮಣಕಾರಿಯಾಗಿ ದಾಳಿ ಮಾಡುವ ಮೂಲಕ ಸಿರಾಜ್ ಹೆಚ್ಚು ವಿಕೆಟ್​ಗಳನ್ನು ಉರುಳಿಸುತ್ತಿದ್ದಾರೆ. ಇದರಿಂದ ಈ ಬಾರಿಯು ಐಸಿಸಿ ಱಂಕಿಂಗ್​ನಲ್ಲಿ ಸಿರಾಜ್ ಮೊದಲ ಸ್ಥಾನ ಪಡೆದುಕೊಂಡರು. ಇಷ್ಟೇ ಅಲ್ಲದೇ ಱಂಕಿಂಗ್​ನಲ್ಲಿ ಪಟ್ಟಿಯಲ್ಲಿ ಟಾಪ್ 10 ಬೌಲರ್​ಗಳಲ್ಲಿ ಮೂವರು ಭಾರತೀಯ ಬೌಲರ್​ಗಳೇ ಇರುವುದು ಇನ್ನೊಂದು ವಿಶೇಷ. ಕುಲ್​ದೀಪ್ ಯಾದವ್, ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಟಾಪ್​ 10 ಬೌಲರ್​​ಗಳಲ್ಲಿ ಹೆಸರು ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ShubmanGill: ಪಾಕ್​ ಆಟಗಾರರಿಗೆ ಟಕ್ಕರ್ ಕೊಟ್ಟ ಶುಭ್​ಮನ್ ಗಿಲ್‌, ಸಿರಾಜ್‌; ICC ಏಕದಿನ ಱಂಕಿಂಗ್​ನಲ್ಲಿ ನಂ.1 ಪಟ್ಟ

https://newsfirstlive.com/wp-content/uploads/2023/11/GILL_SIRAJ.jpg

Load More