ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಶ್ರೀಲಂಕಾ
ಸದಸ್ಯತ್ವವನ್ನು ಅಮಾನತುಗೊಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಶ್ರೀಲಂಕಾಗೆ ಐಸಿಸಿ ಅಮಾನತಿನ ಶಿಕ್ಷೆ ವಿಧಿಸಿದ್ದು ಯಾಕೆ? ಇಲ್ಲಿದೆ ಓದಿ
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿದೆ.
ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆ ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಲಂಕಾ ಕ್ರಿಕೆಟ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೂ ತಂಡ ಒಂದೇ ಒಂದು ಅಂತರರಾಷ್ಟ್ರೀಯ ಆಟವಾಡುವಂತಿಲ್ಲ. ದಿನದಿಂದ ದಿನಕ್ಕೆ ಸಿಂಹಳೀಯರ ಕ್ರಿಕೆಟ್ ಬೋರ್ಡ್ನಲ್ಲಿ ರಾಜಕೀಯ ಹೆಚ್ಚಾದ ಹಿನ್ನೆಲೆ ಐಸಿಸಿ ಅಮಾನತಿನ ಶಿಕ್ಷೆ ವಿಧಿಸಿದೆ.
ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ 9 ಪಂದ್ಯಗಳನ್ನು ಎದುರಿಸಿದೆ. ಅದರಲ್ಲಿ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಉಳಿದ 7 ಪಂದ್ಯಗಳಲ್ಲಿ ಸೋಲನ್ನೊಪ್ಪಿಕೊಂಡಿದೆ. ಆ ಮೂಲಕ ಸೆಮಿಫೈನಲ್ ರೇಸ್ನಿಂದ ಹೊರಗುಳಿದಿದೆ.
ಐಸಿಸಿ ಪೂರ್ಣ ಸದಸ್ಯತ್ವದೊಂದಿಗೆ ಶ್ರೀಲಂಕಾ ತಂಡವನ್ನು ಅಮಾನತುಗೊಳಿಸಿದೆ. 2021ರಲ್ಲಿ ಜಿಂಬಾಬ್ವೆ ಕೂಡ ಹೀಗೆ ಅಮಾನತುಗೊಂಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ