newsfirstkannada.com

World Cup: ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?

Share :

Published August 18, 2023 at 12:05pm

    4ನೇ ಕ್ರಮಾಂಕದಲ್ಲಿ ರೆಕಾರ್ಡ್​ ಹೊಂದಿರುವ ವಿರಾಟ್​​

    2019ರ ವಿಶ್ವಕಪ್​ನಲ್ಲಿ ರೆಡಿಯಾಗಿತ್ತು ಈ ಮೆಗಾ ಪ್ಲಾನ್​

    ಈ ಕಗ್ಗಂಟಿನ ಪ್ರಶ್ನೆಗೆ ವಿರಾಟ್​ ಕೊಹ್ಲಿ ಉತ್ತರವಾಗ್ತಾರಾ?

ಟೀಮ್​ ಇಂಡಿಯಾಗೆ ಎದುರಾಗಿರೋ ನಂಬರ್​​ 4 ಸಂಕಷ್ಟಕ್ಕೆ ಪರಿಹಾರ ಏನೆಂಬುದು ತಿಳಿಯುತ್ತಿಲ್ಲ. ಈ ಪ್ರಶ್ನೆಗೆ ಉತ್ತರ ಒನ್​ & ಒನ್ಲಿ ವಿರಾಟ್​ ಕೊಹ್ಲಿ. 3ನೇ ಕ್ರಮಾಂಕದಲ್ಲಿ ತಂಡದ ಬೆನ್ನೆಲುಬಾಗಿರೋ ಕೊಹ್ಲಿಯ ಬ್ಯಾಟಿಂಗ್​ ಆರ್ಡರ್​ ಬದಲಾವಣೆ ಮಾಡ್ಬೇಕಾ. ಈ ಪ್ಲಾನ್ ಮೆಗಾ ಟೂರ್ನಿಯಲ್ಲಿ ವರ್ಕೌಟ್​ ಆಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ವಿಶ್ವಕಪ್​ಗೆ ಸಿದ್ಧತೆ ನಡೆಸ್ತಿರೋ ಟೀಮ್​ ಇಂಡಿಯಾವನ್ನ ಗೊಂದಲಗಳು ಬಿಟ್ಟೂ ಬಿಡದೇ ಕಾಡ್ತಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ, ವಿಶ್ವಕಪ್​​ ಟೂರ್ನಿ ಆರಂಭವಾದ್ರೂ, ಟೀಮ್​ ಇಂಡಿಯಾದ ಕೆಲ ಸಮಸ್ಯೆಗೆಳಿಗೆ ಪರಿಹಾರ ಸಿಗೋದು ಅನುಮಾನ. ಆದ್ರೆ, ಒಂದು ಸಮಸ್ಯೆಗೆ ತಂಡದಲ್ಲಿ ಪರಿಹಾರವಿದೆ. ಆದ್ರೆ, ಸ್ವಲ್ಪ ರಿಸ್ಕ್​ ತಗೋಬೇಕಷ್ಟೇ.

ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಖರಿ

4ನೇ ಕ್ರಮಾಂಕ ಟೀಮ್​ ಇಂಡಿಯಾ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಸ್ವತಃ ಕ್ಯಾಪ್ಟನ್​​ ರೋಹಿತ್​ ಶರ್ಮಾ ಕೂಡ ಈ ಕಹಿ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಯುವರಾಜ್​ ಸಿಂಗ್​ ನಿರ್ಗಮನದ ಬಳಿಕ ನಂಬರ್​ 4ರಲ್ಲಿ ಸಮರ್ಥವಾಗಿ ಆಡೋ ಬೆಸ್ಟ್​ ಬ್ಯಾಟ್ಸ್​ಮನ್​ ಸಿಕ್ಕಿಲ್ಲ ಅಂತಾ ರೋಹಿತ್​ ಹೇಳಿದ್ರು. ಈ ಮೂಲಕ ಮೆಗಾ ಟೂರ್ನಿಗೂ ತಮಗಿರೋ ಭೀತಿಯನ್ನ ಹೊರಹಾಕಿದರು.

ನಂ.4ರ ಕಗ್ಗಂಟಿಗೆ ತಂಡದಲ್ಲೇ ಇದೇ ಉತ್ತರ..!

ಇತ್ತೀಚಿನ ದಿನಗಳಲ್ಲಿ 4ನೇ ಕ್ರಮಾಂಕದ ಸಕ್ಸಸ್​ಫುಲ್​ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದ ಶ್ರೇಯಸ್​ ಅಯ್ಯರ್​ ಇನ್ನೂ 100% ಫಿಟ್​ ಆಗಿಲ್ಲ. ರಿಷಭ್​ ಪಂತ್​ ಕೂಡ ಇಲ್ಲ.. ಹೀಗಾಗಿ ವಿಶ್ವಕಪ್​ಗೂ ಮುನ್ನ ಮತ್ತೆ ನಂಬರ್​ 4ರ ತಲೆನೋವು ಶುರುವಾಗಿದೆ. ಇದಕ್ಕೆ ಪರಿಹಾರ ಯಾರು ಅನ್ನೋ ಪ್ರಶ್ನೆ ಮ್ಯಾನೇಜ್​ಮೆಂಟ್​ ತಲೆ ಕೆಡಿಸಿದೆ. ಇಂಟರೆಸ್ಟಿಂಗ್​ ವಿಚಾರ ಏನಂದ್ರೆ ಅದಕ್ಕೆ ಉತ್ತರ ತಂಡದಲ್ಲೇ ಇದೆ.

ತಂಡಕ್ಕೆ ಸಂಕಷ್ಟ, ಪರಿಹಾರವಾಗ್ತಾರಾ ವಿರಾಟ್​.?

ವಿರಾಟ್​​ ಕೊಹ್ಲಿ ಯಾವಾಗ್ಲೂ ಏಕದಿನ ಮಾದರಿಯಲ್ಲಿ ಆಡೋದು ನಂಬರ್​​ ತ್ರಿ ಸ್ಲಾಟ್​ನಲ್ಲಿ. ವೈಟ್​ ಬಾಲ್​ ಫಾರ್ಮೆಟ್​​ನಲ್ಲಿ ಅತಿ ಹೆಚ್ಚು ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರೋ ವಿರಾಟ್​, ಕೆಲವೊಮ್ಮೆ ತಮ್ಮ ಖಾಯಂ ಸ್ಲಾಟ್​ನ ತ್ಯಾಗ ಮಾಡಿದ್ದಾರೆ. ಗೇಮ್​ಪ್ಲಾನ್​ಗಳಲ್ಲಿ ಬದಲಾವಣೆಯಾದಾಗ ತಂಡದ ಗೆಲುವಿಗಾಗಿ ನಂ.3ರ ಬದಲು ಬೇರೆ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ದಾರೆ. ಸದ್ಯ ಸಂಕಷ್ಟ ಎದುರಾಗಿರುವ ಈ ಸಂದರ್ಭದಲ್ಲೂ ತಂಡಕ್ಕೆ ವಿರಾಟ್​ ಕೊಹ್ಲಿಯೊಬ್ಬರೇ ಪರಿಹಾರವಾಗಿದ್ದಾರೆ.

4ನೇ ಕ್ರಮಾಂಕದಲ್ಲಿ ಕೊಹ್ಲಿ, ಬೆಂಕಿ-ಬಿರುಗಾಳಿ.!

ಮೂರನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಸೂಪರ್- ಡೂಪರ್​ ಪರ್ಫಾಮೆನ್ಸ್​ ನೀಡಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಇದಕ್ಕೆ ಕೊಹ್ಲಿಯ ಅಂಕಿ-ಅಂಶಗಳೇ ಬೆಸ್ಟ್​ ಎಕ್ಸಾಂಪಲ್​. ಹಾಗಂತ ಕೊಹ್ಲಿ ಸಾಮರ್ಥ್ಯ ಕೇವಲ 3ನೇ ಕ್ರಮಾಂಕಕ್ಕೇ ಸೀಮಿತ ಅಂದುಕೊಳ್ಳುವಂತೇ ಇಲ್ಲ. ನಂಬರ್​ 4ರಲ್ಲೂ ಕೊಹ್ಲಿ ಕಿಂಗ್.

ಶ್ರೇಯಸ್ ಅಯ್ಯರ್​, ಭಾರತದ ಯುವ ಆಟಗಾರ

4ನೇ ಕ್ರಮಾಂಕದಲ್ಲಿ ಕೊಹ್ಲಿ (ODI)

4ನೇ ಕ್ರಮಾಂಕದಲ್ಲಿ ಈವರೆಗೆ 39 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, 1767 ರನ್​ ಸಿಡಿಸಿದ್ದಾರೆ. ಬರೋಬ್ಬರಿ 55.21ರ ಸರಾಸರಿಯಲ್ಲಿ ಬ್ಯಾಟಿಂಗ್​ ನಡೆಸಿರೋ ಕೊಹ್ಲಿ, 7 ಸೆಂಚುರಿ, 8 ಹಾಫ್​ ಸೆಂಚುರಿ ಸಿಡಿಸಿದ್ದಾರೆ.

2019ರ ವಿಶ್ವಕಪ್​ನಲ್ಲೇ ರೆಡಿಯಾಗಿತ್ತು ಪ್ಲಾನ್​.!

ಟೀಮ್​ ಇಂಡಿಯಾದ ಅಂದಿನ ಕೋಚ್​ ರವಿ ಶಾಸ್ತ್ರಿ ರಿವೀಲ್​ ಮಾಡಿರೋ ಸತ್ಯವಿದು. 2019ರ ಏಕದಿನ ವಿಶ್ವಕಪ್​ ವೇಳೆ ಕೊಹ್ಲಿಯನ್ನ 4ನೇ ಕ್ರಮಾಂಕದಲ್ಲಿ ಇಳಿಸಲು ಪ್ಲಾನ್​ ರೂಪಿಸಲಾಗಿತ್ತಂತೆ. ಆದರೆ, ಕಾರಣಾಂತರಗಳಿಂದ ಈ ಪ್ಲಾನ್​ನ ಇಂಪ್ಲಿಮೆಂಟ್​ ಮಾಡೋಕೆ ಆಗಿರಲಿಲ್ಲ. ಇದೀಗ ಮತ್ತೊಂದು ವಿಶ್ವಕಪ್​ ಟೂರ್ನಿಗೆ ಅಖಾಡ ಸಿದ್ಧವಾಗಿದೆ. ತಂಡಕ್ಕೆ ಮತ್ತೆ ನಂ.4 ಸಮಸ್ಯೆ ಕಾಡ್ತಿದೆ. ಈ ಸಮಸ್ಯೆಗೆ ಕೊಹ್ಲಿ ಪರಿಹಾರವಾಗ್ತಾರಾ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?

https://newsfirstlive.com/wp-content/uploads/2023/08/VIRAT_KOHLI-1.jpg

Load More