newsfirstkannada.com

ಕಾಲು ನೋವು ಮಧ್ಯೆಯೂ ದ್ವಿಶತಕ ಸಿಡಿಸಿದ ಮ್ಯಾಕ್ಸಿ.. RCB ಸ್ಟಾರ್​​ನನ್ನು ಹಾಡಿಹೊಗಳಿದ ಸಚಿನ್​​!

Share :

08-11-2023

  ವಿಶ್ವಕಪ್​ನಲ್ಲಿ ಅಫ್ಘಾನ್​ ವಿರುದ್ಧ ಡಬಲ್ ಸೆಂಚುರಿ ಸಿಡಿಸಿದ್ದ ಆಲ್​ರೌಂಡರ್

  ವಾಂಖೆಡೆಯಲ್ಲಿ ಸಿಡಿಲಬ್ಬರದ ಸಿಕ್ಸರ್​, ಬೌಂಡರಿ ಬಾರಿಸಿದ್ದ ಮ್ಯಾಕ್ಸ್​ವೆಲ್​

  ಮ್ಯಾಕ್ಸಿಯನ್ನು ಹಾಡಿಹೊಗಳಿದ ಟೀಮ್​​ ಇಂಡಿಯಾದ ದಿಗ್ಗಜ ಸಚಿನ್​​..!

ಸದ್ಯ ವಿಶ್ವಕಪ್​ ಟೂರ್ನಿಯಲ್ಲಿ ಆರ್​ಸಿಬಿ ಸ್ಟಾರ್​, ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೆನ್​​​ ಮ್ಯಾಕ್ಸ್​ವೆಲ್​ ಅವರದ್ದೇ ಮಾತು. ವರ್ಲ್ಡ್​ಕಪ್​ ಇತಿಹಾಸದಲ್ಲಿ ಯಾರೂ ಮಾಡಿರದ ಐತಿಹಾಸಿಕ ಸಾಧನೆ ದ್ವಿಶತಕ ಸಿಡಿಸಿ ಮ್ಯಾಕ್ಸ್​ವೆಲ್​ ಹೊಸ ಹೆಜ್ಜೆ ಗುರುತನ್ನು ಸೃಷ್ಟಿಸಿದರು. ಆಸಿಸ್​ನ ಸ್ಟಾರ್​ ಆಲ್​ರೌಂಡರ್​ ಅವರ ಹೆಜ್ಜೆ ಗುರುತಿನ ಬಗ್ಗೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್ ಹಾಡಿ ಹೊಗಳಿದ್ದಾರೆ.

ಮ್ಯಾಕ್ಸ್​ವೆಲ್​ ಬಗ್ಗೆ ಎಕ್ಸ್​ನಲ್ಲಿ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿರುವ ಕ್ರಿಕೆಟ್​ ದೇವ್ರು ಸಚಿನ್ ತೆಂಡೂಲ್ಕರ್​, ಕ್ರಿಕೆಟ್​ ಮತ್ತು ನಮ್ಮ ಲೈಫ್​ ಸಮಾನಾಂತರಗಳನ್ನು ಹೊಂದಿದ್ದು ಯಾವುದು ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆಯೋ ಅದೇ ಕೆಲವೊಮ್ಮೆ ನಿಮ್ಮನ್ನ ಸ್ಪ್ರಿಂಗ್​ನಂತೆ ಆಕಾಶದೆತ್ತರ ಪುಟಿದೇಳಿಸುತ್ತದೆ. ಅದು ಮುಂದಕ್ಕೆ ತಳ್ಳಿ ಐತಿಹಾಸಿಕ ಸಾಧನೆಗೆ ಕಾರಣವಾಗುತ್ತದೆ ಎಂದಿದ್ದಾರೆ.

201 ರನ್ ಬಾರಿಸಿದ್ದ ಮ್ಯಾಕ್ಸ್​ವೆಲ್​

ಅಫ್ಘಾನ್​ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲಬೇಕಾದರೆ, ಮ್ಯಾಕ್ಸ್​ವೆಲ್​ ಬ್ಯಾಟಿಂಗ್​ ನಿರ್ಣಾಯಕವಾಗಿತ್ತು. ಒಂದು ವೇಳೆ ಅವರು ಕಾಲು ನೋವಿನಿಂದ ಮೈದಾನದಿಂದ ಹೊರ ಹೋಗಿದ್ದರೇ ತಂಡದ ದಿಕ್ಕೆ ಬೇರೆ ಆಗುತ್ತಿತ್ತು. ಕಾಲು ನೋವಿದ್ದರೂ ಕೈ ಮತ್ತು ಕಣ್ಣು ಮ್ಯಾಕ್ಸಿಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಹಕರಿಸಿದವು. ಇದರಿಂದ ಮಹತ್ವದ ದಾಖಲೆ ಸೃಷ್ಟಿಸಲು ನೆರವಾಯಿತು. ಆಟದಲ್ಲಿ ಕಾಲಿನ ಚಲನೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತೆ. ಆದರೂ ಕೆಲವೊಮ್ಮೆ ‘no footwork becomes great footwork too’ ಎಂದು ಮ್ಯಾಕ್ಸಿ ಬಗ್ಗೆ ಸಚಿನ್ ಗುಣಗಾನ ಮಾಡಿದ್ದಾರೆ.

ನಿನ್ನೆ ಅಫ್ಘಾನ್​ ವಿರುದ್ಧದ ಮ್ಯಾಚ್​ನಲ್ಲಿ ಕಾಂಗರೂ ಸೋಲುತ್ತದೆ ಎಂದು ಅಲ್ಲರೂ ಅಂದುಕೊಂಡಿದ್ದರು. ಆದ್ರೆ ಕ್ರೀಸ್​ಗೆ ಬಂದ ಮ್ಯಾಕ್ಸ್​ವೆಲ್​ ಹೊಡಿಬಡಿ ಆಟಕ್ಕೆ ಮುಂದಾಗಿ ವೈಯಕ್ತಿಕವಾಗಿ ಡಬಲ್ ಸೆಂಚುರಿ (201) ಸಿಡಿಸಿ ವಿಶ್ವಕಪ್​ನಲ್ಲಿ ಐತಿಹಾಸಿಕ ದಾಖಲೆ ಜೊತೆಗೆ ತಂಡಕ್ಕೆ ಗೆಲುವು ತಂದು ಕೊಟ್ಟರು. ಇದು ಅಲ್ಲವೇ ಸಾಧನೆ ಎಂದು ಕ್ರಿಕೆಟ್​ ದೇವ್ರು ಹೇಳಿದ್ದಾರೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಾಲು ನೋವು ಮಧ್ಯೆಯೂ ದ್ವಿಶತಕ ಸಿಡಿಸಿದ ಮ್ಯಾಕ್ಸಿ.. RCB ಸ್ಟಾರ್​​ನನ್ನು ಹಾಡಿಹೊಗಳಿದ ಸಚಿನ್​​!

https://newsfirstlive.com/wp-content/uploads/2023/11/SACHIN_MAXWELL.jpg

Load More