ಈ ಗ್ಯಾಂಗ್ ಕನ್ನ ಹಾಕಿದ್ದು ಚಿನ್ನಕ್ಕೂ ಅಲ್ಲ.. ಹಣಕ್ಕೂ ಅಲ್ಲ..!
ಮಿಡ್ನೈಟ್ನಲ್ಲಿ ಐಸ್ ಕ್ರೀಮ್ ತಿನ್ನೋ ಆಸೆಗೆ ಪಾರ್ಲರ್ಗೆ ಕನ್ನ
ಮಾದನಾಯಕನಹಳ್ಳಿ ಬಳಿ ದೊಂಬರಹಳ್ಳಿಯಲ್ಲಿ ಘಟನೆ ನಡೆದಿದೆ
ಬೆಂಗಳೂರು: ನಾವೆಲ್ಲರೂ ಬೈಕ್, ಫೋನ್, ಮನೆ, ಸರ ಹೀಗೆ ಸಾಕಷ್ಟೂ ರೀತಿಯಲ್ಲಿ ಕಳ್ಳರು ಕಳ್ಳತನ ಮಾಡುವುದನ್ನು ನೋಡಿರುತ್ತೇವೆ ಜೊತೆಗೆ ಕೇಳಿರುತ್ತೇವೆ. ಆದರೆ ಇಲ್ಲೊಂದು ಕಳ್ಳರ ಗುಂಪೊಂದು ಮಧ್ಯ ರಾತ್ರಿಯಲ್ಲಿ ಐಸ್‌ಕ್ರೀಮ್ ಕದ್ದು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಬಳಿಯ ದೊಂಬರಹಳ್ಳಿಯಲ್ಲಿ ನಡೆದಿದೆ.
ನಾಲ್ಕು ಜನ ಕಳ್ಳರ ಗುಂಪೊಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆಟೋದಲ್ಲಿ ಬಂದು ಐಸ್‌ಕ್ರೀಮ್ ಅಂಗಡಿಗೆ ನುಗ್ಗಿದ್ದಾರೆ. ಅಂಗಡಿಯ ಬೀಗ ಮುರಿದು ಒಳ ನುಗ್ಗಿದ ನಾಲ್ಕು ಜನರು 4 ಐಸ್ ಕ್ರೀಮ್ ಎತ್ತಿಕೊಂಡಿದ್ದಾರೆ. ಸುಮಾರು 100 ರೂಪಾಯಿ ಐಸ್‌ಕ್ರೀಮ್ ತಿಂದಿದ್ದಾರೆ. ಬಳಿಕ ಖದೀಮರು ಅಂಗಡಿಯ ಕ್ಯಾಷಿಯರ್ ಕೌಂಟರ್‌ಗೂ ಕೈ ಹಾಕಿ 200 ರೂಪಾಯಿ ಚಿಲ್ಲರೆ ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಕಳ್ಳರು ಐಸ್‌ಕ್ರೀಮ್ ಅಂಗಡಿಗೆ ನುಗ್ಗಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಯ್ಯೋ.. ಐಸ್ ಕ್ರೀಮ್ ಅನ್ನು ಬಿಡದ ಕಳ್ಳರು..! ಮಿಡ್ನೈಟ್ನಲ್ಲಿ ಬಂದು ಶೆಟರ್ ಒಡೆದು ಐಸ್‌ಕ್ರೀಮ್ ಕಳ್ಳತನ ಮಾಡಿರೋ ಘಟನೆ ಸಿಲಿಕಾನ್ ಸಿಟಿಯ ದೊಂಬರಹಳ್ಳಿಯಲ್ಲಿ ನಡೆದಿದೆ. ನಾಲ್ವರು ಐಸ್‌ಕ್ರೀಮ್ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.#newsfirstlive #newsfirstkannada #KannadaNews #Bengaluru #icecream… pic.twitter.com/SGwcwAQPb5
— NewsFirst Kannada (@NewsFirstKan) July 14, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ