newsfirstkannada.com

ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡು ಹೃದಯಾಘಾತ; ಸಾವನ್ನಪ್ಪಿದ ಅಪ್ಪಟ ಅಭಿಮಾನಿ

Share :

21-11-2023

    ಭಾರತೀಯ ಕ್ರಿಕೆಟ್​ ಅಭಿಮಾನಿ ಹೃದಯಾಘಾತಕ್ಕೆ ಬಲಿ

    ರೋಹಿತ್​ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡಂತೆ ಹೃದಯಾಘಾತ

    ಹಾರ್ಟ್​ ಅಟ್ಯಾಕ್​ಗೆ ತಿರುಪತಿಯ ಮೂಲದ ಹಾರ್ಡ್​ ಕೋರ್​ ಫ್ಯಾನ್​​ ಬಲಿ

ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾವು ಸೋತ ಬೆನ್ನಲ್ಲೇ ವ್ಯಕ್ತಿಯೊಬ್ಬ ಹೃದಯಾಘಾತಕ್ಕೆ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಕುಮಾರ್​ ಯಾದವ್​ ಎಂಬ ಕ್ರಿಕೆಟ್​ ಅಭಿಮಾನಿ ಸಾವನ್ನಪ್ಪಿರುವ ದುರ್ದೈವಿ.

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತಿದ್ದು, ಸೋತ ಬೆನ್ನಲ್ಲೇ ರೋಹಿತ್​ ಶರ್ಮಾ ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರಕ್ಕೆ ನಡೆದರು. ಈ ದೃಶ್ಯ ಕಂಡು ಜ್ಯೋತಿ ಕುಮಾರ್​ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಇನ್ನು ಜ್ಯೋತಿ ಕುಮಾರ್​ ತಿರುಪತಿಯ ದುರ್ಗಾಸಮುದ್ರದವರಾಗಿದ್ದು, ಟೀಂ ಇಂಡಿಯಾದ ಅಭಿಮಾನಿಯಾಗಿದ್ದರು. ಆದರೆ ನವೆಂಬರ್​ 19 ರಂದು ನಡೆದ ವಿಶ್ವಕಪ್​ ಫೈನಲ್​ ಪಂದ್ಯವನ್ನು ನೋಡುತ್ತಿದ್ದ ಜ್ಯೋತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡು ಹೃದಯಾಘಾತ; ಸಾವನ್ನಪ್ಪಿದ ಅಪ್ಪಟ ಅಭಿಮಾನಿ

https://newsfirstlive.com/wp-content/uploads/2023/11/Rohit-Sharma-1-3.jpg

Load More