Advertisment

ಡೀಪ್ ಫೇಕ್ ವಿಡಿಯೋ ಮಾಡಿದ್ರೆ IP ಅಡ್ರೆಸ್ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು; ಸಚಿವ ಅಶ್ವಿನ್ ವೈಷ್ಣವ್

author-image
AS Harshith
Updated On
ಡೀಪ್ ಫೇಕ್ ವಿಡಿಯೋ ಮಾಡಿದ್ರೆ IP ಅಡ್ರೆಸ್ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು; ಸಚಿವ ಅಶ್ವಿನ್ ವೈಷ್ಣವ್
Advertisment
  • ಡೀಪ್ ಫೇಕ್ ತಡೆಗಟ್ಟಲು ಸಭೆ ಕರೆದ ಕೇಂದ್ರ ಸರ್ಕಾರ
  • ತಂತ್ರಜ್ಞಾನ ದುರ್ಬಳಕೆಯನ್ನು ನಿಲ್ಲಿಸಲು ಮುಂದಾದ ಸರ್ಕಾರ
  • ಡಿಸೆಂಬರ್​ ಮೊದಲ ವಾರದಲ್ಲಿ ಮತ್ತೊಂದು ಸಭೆ

ಡೀಪ್ ಫೇಕ್ ವಿಡಿಯೋ ಹಾವಳಿ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಸಭೆ ಕರೆದಿದೆ. ಐ.ಟಿ. ಖಾತೆ ಸಚಿವ ಅಶ್ವಿನ್ ವೈಷ್ಣವ್ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಹೊಸ ನಿಯಮಗಳನ್ನು ಸದ್ಯದಲ್ಲೇ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.

Advertisment

ಡಿಸೆಂಬರ್ ನ ಮೊದಲ ವಾರದಲ್ಲಿ ಮತ್ತೊಂದು ಸಭೆ ಮಾಡುತ್ತೇವೆ. ಇಂದಿನ ಸಭೆಯ ಅಂಶಗಳ ಜಾರಿಯ ಬಗ್ಗೆ ಚರ್ಚೆ ನಡೆಸಲಾಯಿತು. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ತಂತ್ರಜ್ಞಾನ ದುರ್ಬಳಕೆಯನ್ನು ನಿಲ್ಲಿಸಲೇಬೇಕು. ಡೀಫ್ ಫೇಕ್ ವಿಡಿಯೋ, ಪೋಟೋ ಅಪ್ ಲೋಡ್ ಮಾಡಿದ ಐಪಿ ಅಡ್ರೆಸ್ ವಿವರ ನೀಡಬೇಕು. ಐ.ಪಿ. ಅಡ್ರೆಸ್ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಐ.ಟಿ. ಖಾತೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

ಇದನ್ನು ಓದಿ: ಬಿರಿಯಾನಿ ತಿನ್ನಿಲು ಹಣ ನೀಡದ ಅಪರಿಚಿತ; 60 ಬಾರಿ ಚುಚ್ಚಿ ಕೊಂದ 16 ವರ್ಷದ ಬಾಲಕ

ಬಳಿಕ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ಪ್ರತಿನಿಧಿಗಳಿಂದ ನೆರವು ನೀಡುವ ಭರವಸೆ ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಡೀಪ್ ಫೇಕ್ ಪೋಟೋ, ವಿಡಿಯೋ ಬಗ್ಗೆ ಲೇಬಲಿಂಗ್, ಮಾರ್ಕಿಂಗ್ ಮಾಡಲಾಗುವುದು. ಡೀಪ್ ಫೇಕ್ ವಿಡಿಯೋ ದೇಶ, ಪ್ರಜಾಪ್ರಭುತ್ವ, ಸಮಾಜಕ್ಕೆ ಬೆದರಿಕೆ ಒಡ್ಡುತ್ತದೆ. ಡೀಪ್ ಫೇಕ್ ವಿಡಿಯೋ, ಪೋಟೋ ಸೃಷ್ಟಿಸುವವರಿಗೆ, ಪ್ಲಾಟ್ ಫಾರಂಗೆ ದಂಡ ವಿಧಿಸಲಾಗುವುದು. ದೆಹಲಿಯಲ್ಲಿ ಐ.ಟಿ. ಖಾತೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಎಲ್ಲದರ ಬಗ್ಗೆ ಸಾರ್ವಜನಿಕರ ಜೊತೆಗೆ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment