newsfirstkannada.com

‘ನೇತಾಜಿ ಇದ್ದಿದ್ದರೆ ಭಾರತ ವಿಭಜನೆಯೇ ಆಗ್ತಿರಲಿಲ್ಲ’- ಅಜಿತ್ ದೋವಲ್ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲ

Share :

18-06-2023

    ಸಿಂಹಸ್ವಪ್ನವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಇದ್ದಿದ್ದರೆ ಏನಾಗ್ತಿತ್ತು?

    ಸಂಚಲನ ಸೃಷ್ಟಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

    ನೆಹರು ಮತ್ತು ಬೋಸ್ ಇತಿಹಾಸ ಓದಲು ಕಾಂಗ್ರೆಸ್ ನಾಯಕರ ಸಲಹೆ

ನವದೆಹಲಿ: ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಇದ್ದಿದ್ದರೆ ಭಾರತ ಅಖಂಡ ಭಾರತವಾಗೇ ಉಳಿಯುತ್ತಿತ್ತು. ನೇತಾಜಿ ಭಾರತದ ವಿಭಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಜಿತ್ ದೋವಲ್ ಈ ಮಾತುಗಳನ್ನಾಡಿದ್ದಾರೆ. ಒಂದು ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕಿದ್ದರೆ ಭಾರತ ಎರಡು ಭಾಗವಾಗಲು ಅವಕಾಶವೇ ಮಾಡಿ ಕೊಡುತ್ತಿರಲಿಲ್ಲ. ನೇತಾಜಿ ಅವರು ಮಹಾತ್ಮ ಗಾಂಧಿ ಅವರಿಗೆ ಸವಾಲು ಹಾಕುವ ದಿಟ್ಟತನ ಹೊಂದಿದ್ದರು ಎಂದು ಹೇಳಿದ್ದಾರೆ.

ನಾನು ಯಾವುದು ಸರಿ ಅಥವಾ ತಪ್ಪು ಎಂದು ಹೇಳುತ್ತಿಲ್ಲ. ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸಂಪೂರ್ಣ ಸ್ವಾತಂತ್ರ್ಯದ ವಿಚಾರದಲ್ಲಿ ಯಾವುದೇ ರಾಜಿಗೆ ಒಳಗಾಗುತ್ತಿರಲಿಲ್ಲ. ರಾಜಕೀಯದಲ್ಲಿ ಅಧೀನಕ್ಕೆ ಒಳಗಾಗುವುದು ಅವರಿಗೆ ಇಷ್ಟವಿರಲಿಲ್ಲ. ರಾಜಕೀಯದ ಹೊರತಾಗಿ ಆಕಾಶದಲ್ಲಿ ಹಕ್ಕಿ ಹಾರಾಡುವಂತಹ ಸ್ವತಂತ್ರ್ಯವನ್ನು ನೇತಾಜಿ ಬಯಸಿದ್ದರು. ಭಾರತವಷ್ಟೇ ಅಲ್ಲ ವಿಶ್ವದ ಇತಿಹಾಸದಲ್ಲೇ ಸುಭಾಷ್ ಚಂದ್ರ ಬೋಸ್‌ ಅಂತಾ ಧೈರ್ಯವಂತರು ಕೆಲವೇ ಕೆಲವು ಮಂದಿ. ಕಠಿಣ ನಿಲುವು, ದಿಟ್ಟತನ ಹೊಂದಿದ್ದ ಧೀಮಂತ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದಿದ್ದಾರೆ.

ಅಜಿತ್ ದೋವಲ್ ಆಡಿದ ಈ ಮಾತುಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮೊಟ್ಟ ಮೊದಲ ಪ್ರಧಾನಮಂತ್ರಿ ನೆಹರು ಅವರನ್ನೇ ಪ್ರಶ್ನಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ದೋವಲ್ ಅವರು ವಿಕೃತ ಮನಸ್ಥಿತಿಯ ವ್ಯಕ್ತಿಗಳ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದ್ದಾರೆ. ಅಜಿತ್ ದೋವಲ್ ವಾಸ್ತವದ ಇತಿಹಾಸವನ್ನು ಓದಬೇಕಿದೆ. ನಾನು ರುದ್ರಂಗ್ಶು ಮುಖರ್ಜಿ ಅವರು ಬರೆದಿರುವ ನೆಹರು ಮತ್ತು ಬೋಸ್ ಅವರ ಸಮಾನಂತರ ಜೀವನ ಪುಸ್ತಕವನ್ನು ಓದಲು ಕಳುಹಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ನೇತಾಜಿ ಇದ್ದಿದ್ದರೆ ಭಾರತ ವಿಭಜನೆಯೇ ಆಗ್ತಿರಲಿಲ್ಲ’- ಅಜಿತ್ ದೋವಲ್ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲ

https://newsfirstlive.com/wp-content/uploads/2023/06/Subash-Chandra-Bose.jpg

Load More