newsfirstkannada.com

ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ಜ್ಯೂನಿಯರ್ ಇಂದಿರಾ ಭವಿಷ್ಯಕ್ಕೆ ಸೈಲೆಂಟ್ ಪ್ಲಾನ್!

Share :

14-08-2023

  ನರೇಂದ್ರ ಮೋದಿ ಭದ್ರಕೋಟೆಗೆ ಲಗ್ಗೆಯಿಟ್ಟು ಕಾಂಗ್ರೆಸ್ ಗೆಲ್ಲುತ್ತಾ?

  2019ರಲ್ಲಿ ಪ್ರಧಾನಿಗೆ ವಾರಣಾಸಿಯಲ್ಲಿ ದಾಖಲೆಯ ದಿಗ್ವಿಜಯ

  ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆಯೇ ‘ಇಂಡಿಯಾ’ ಫುಲ್ ಚರ್ಚೆ

ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದರೆ ಗೆಲ್ಲುವುದು ಪಕ್ಕಾ ಎಂದು ಶಿವಸೇನೆ ಉದ್ಧವ್ ಠಾಕ್ರೆ ಭಣದ ಸಂಸದ ಸಂಜಯ್ ರಾವತ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಈ ಬಾರಿ ರಾಯ್‌ಬರೇಲಿ, ವಾರಣಾಸಿ ಮತ್ತು ಅಮೇತಿ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ. ಸದ್ಯ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದ್ದು ಜನರು ಕಾಂಗ್ರೆಸ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ಹಾಗೂ ಬಿಜೆಪಿಯ ಭದ್ರಕೋಟೆ ಆಗಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಸ್ಪರ್ಧೆ ಮಾಡಿದರೆ ವಿಜಯ ಪತಾಕೆ ಹಾರಿಸಲಿದ್ದಾರೆ. ಕ್ಷೇತ್ರದ ಜನರಿಗೆ ಪ್ರಿಯಾಂಕಾ ಗಾಂಧಿ ಬೇಕಾಗಿರುವುದರಿಂದ ಚುನಾವಣೆಯ ಸ್ಪರ್ಧೆಯಲ್ಲಿ ಪ್ರಧಾನಿ ಮೋದಿ ಸೋಲಬಹುದು ಎಂದು ರಾವತ್ ಹೇಳಿದ್ದಾರೆ.

ಸಂಸದ ಸಂಜಯ್ ರಾವತ್

2014ರ ವಿಧಾನಸಭಾ ಚುನಾವಣೆಯ ಮುಂಚಿತವಾಗಿ ಮೈತ್ರಿ ಮುರಿದುಕೊಂಡಿದ್ದಕ್ಕಾಗಿ ಉದ್ಧವ್ ಠಾಕ್ರೆರನ್ನು ದ್ವೇಷಿಸುತ್ತಿದ್ದಾರೆ. ಮೈತ್ರಿ ಮುರಿದುಕೊಳ್ಳುವ ಬಗ್ಗೆ ಬಿಜೆಪಿಯಲ್ಲಿ ಮೊದಲೇ ನಿರ್ಧಾರವಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕ ಏಕನಾಥ್​ ಖಾಡ್ಸೆ ಅವರು ಕರೆ ಮಾಡಿ ಠಾಕ್ರೆಯವರಿಗೆ ಮಾಹಿತಿ ನೀಡಿದ್ದರು. ಈ ಸತ್ಯ ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ. ಆದ್ರೆ ಮಹಾರಾಷ್ಟ್ರದ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಸುಳ್ಳು ಹೇಳಿದ್ದರು ಎಂದು ಮೋದಿ ವಿರುದ್ಧ ಸಂಸದ ರಾವತ್ ವಾಗ್ದಾಳಿ ನಡೆಸಿದರು.

ನಿನ್ನೆಯಷ್ಟೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಮಹತ್ವದ ಸುಳಿವು ಕೊಟ್ಟಿದ್ದರು. ಪ್ರಿಯಾಂಕಾ ಗಾಂಧಿ ಅವರು ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ರೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ರಾಬರ್ಟ್ ವಾದ್ರಾ ಅವರ ಈ ಸುಳಿವಿನ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸ್ಪರ್ಧೆ ಬಗ್ಗೆಯೇ ಚರ್ಚೆಯಾಗುತ್ತಿದೆ. ಇತ್ತೀಚಿಗೆ ಕರ್ನಾಟಕ ಜ್ಯೋತಿಷಿಯೊಬ್ಬರು ಮುಂದಿನ ಪ್ರಧಾನಮಂತ್ರಿ ಹುದ್ದೆಗೆ ಸ್ತ್ರೀಯೊಬ್ಬರು ಬರಬಹುದು ಅನ್ನೋ ಭವಿಷ್ಯ ನುಡಿದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ಜ್ಯೂನಿಯರ್ ಇಂದಿರಾ ಭವಿಷ್ಯಕ್ಕೆ ಸೈಲೆಂಟ್ ಪ್ಲಾನ್!

https://newsfirstlive.com/wp-content/uploads/2023/08/PRIYANKA_GANDHI_MODI.jpg

Load More