ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದು ಕೊಟ್ಟ ನಿತೇಶ್ ಕುಮಾರ್
ಪ್ಯಾರಾ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಚಿನ್ನದ ಪದಕ
ಗ್ರೇಟ್ ಬ್ರಿಟನ್ನ ಡನಿಯಲ್ ಬಥೇಲ್ರನ್ನು ಸೋಲಿಸಿ ಬಂಗಾರ ಗೆದ್ದ ನಿತೇಶ್
ಪ್ಯಾರಿಸ್: ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರತಿಭೆಗಳ ಪದಕದ ಬೇಟೆ ಮುಂದುವರಿದಿದೆ. ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪುರುಷ ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಗ್ರೇಟ್ ಬ್ರಿಟನ್ನ ಡನಿಯಲ್ ಬಥೇಲ್ ವಿರುದ್ಧ ಮೂರು ಸುತ್ತಿನ ಆಟದಲ್ಲಿ 21-14, 18-21 ಮತ್ತು 23-21 ಅಂಕಗಳ ಅಂತರದಲ್ಲಿ ನಿತೇಶ್ ವಿಜಯಿಯಾಗಿದ್ದಾರೆ.
ಇದನ್ನೂ ಓದಿ: ರೋಹಿತ್ ಬೆನ್ನಲ್ಲೇ ಸ್ಟಾರ್ ಆಟಗಾರನಿಗೆ ಬಿಗ್ ಶಾಕ್ ಕೊಟ್ಟ ಗಂಭೀರ್; ಅಂಥದ್ದೇನಾಯ್ತು?
ನಿತೇಶ್ ಕುಮಾರ್ ಗೆದ್ದಿರುವ ಈ ಚಿನ್ನದ ಪದಕ ಭಾರತ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪಡೆದ 9ನೇ ಚಿನ್ನದ ಪದಕವಾಗಿದೆ. ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್ 2024ರಲ್ಲಿ ಭಾರತದ ಎರಡನೇ ಚಿನ್ನದ ಪದಕವಾಗಿದೆ. ನಿತೇಶ್ ಕುಮಾರ್ಗಿಂತ ಮೊದಲು ಅವನಿ ಲೇಖರ್ ಚಿನ್ನದ ಪದಕ ಗೆದ್ದಿದ್ದರು. ನಿತೇಶ್ ಕುಮಾರ್ ಗೆಲುವಿನ ಮೂಲಕ ಪ್ಯಾರಾ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಂತಾಗಿದೆ.
ಇದನ್ನೂ ಓದಿ: ಆರ್ಸಿಬಿಗೆ IPL ವಿನ್ನಿಂಗ್ ಕ್ಯಾಪ್ಟನ್ ಎಂಟ್ರಿ; ಫಾಫ್ ಸ್ಥಾನ ತುಂಬಲಿದ್ದಾರೆ ಸ್ಫೋಟಕ ಬ್ಯಾಟರ್!
29 ವರ್ಷದ ನಿತೇಶ್ ಕುಮಾರ್ ಮೂಲತಃ ಹರಿಯಾಣ ರಾಜ್ಯದವರು. 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತದಲ್ಲಿ ನಿತೇಶ್ ಕುಮಾರ್ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು. ಕಾಲು ಕಟ್ ಆದ ಮೇಲೆ ಕೆಲವು ವರ್ಷ ಹಾಸಿಗೆ ಮೇಲೆ ಮಲಗಿದ್ದರು. ಆಮೇಲೆ ಧೃತಿಗೆಡದ ನಿತೇಶ್ ಕುಮಾರ್ ಕಷ್ಟ ಪಟ್ಟು ಓದಿ IIT ಪಾಸ್ ಮಾಡಿದರು. ಇದೀಗ ನಿರಂತರ ಪರಿಶ್ರಮದಿಂದ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ಬರುವಂತೆ ಮಾಡಿದ್ದಾರೆ. ದೇಶದ ಪತಾಕೆಯನ್ನು ಪ್ಯಾರಿಸ್ ಅಂಗಳದಲ್ಲಿ ಹಾರಿಸಿದ್ದಾರೆ. ನಿತೇಶ್ ಕುಮಾರ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ 2 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕಗಳನ್ನು ಗಳಿಸಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ