ಅತ್ತಿಗೆಯೊಂದಿಗೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ವಂತ ಅಣ್ಣ
5 ವರ್ಷದ ಹಿಂದೆ ತನ್ನ ಅತ್ತಿಗೆಯನ್ನು ಕರೆದುಕೊಂಡು ಓಡಿ ಹೋಗಿದ್ದ
ಬೇಸತ್ತು ತನ್ನ ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದ ಅಣ್ಣ
ದೊಡ್ಡಬಳ್ಳಾಪುರ: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಲೆ ಮಾಡಿರೋ ಘಟನೆ ದೊಡ್ಡಮಂಕಲಾಳದಲ್ಲಿ ನಡೆದಿದೆ. ಗಂಗರಾಜು (35) ಕೊಲೆಯಾದ ದುರ್ದೈವಿ.
ಗಂಗರಾಜು ಹೆಂಡತಿ ಭಾಗ್ಯಮ್ಮಳಿಗೆ ಗಂಗರಾಜುವಿನ ತಮ್ಮ ರವಿ ಜೊತೆ ಅಕ್ರಮ ಸಂಬಂಧವಿತ್ತು. ಕಳೆದ 5 ವರ್ಷಗಳ ಹಿಂದೆ ರವಿ ತನ್ನ ಅತ್ತಿಗೆಯನ್ನು ಕರೆದುಕೊಂಡು ಓಡಿ ಹೋಗಿದ್ದ. ಹೀಗಾಗಿ ಗಂಗರಾಜು ತನ್ನ ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದ. 15 ದಿನಗಳ ಹಿಂದೆ ಹೆಂಡತಿ ಮತ್ತು ತಮ್ಮ ಬಂದಾಗ ಗಲಾಟೆ ಮಾಡಿಕೊಂಡಿದ್ದಾರೆ.
ಅಣ್ಣ, ತಮ್ಮನ ನಡುವೆ ನಡೆದ ಗಲಾಟೆಯಲ್ಲಿ ರವಿ ಮತ್ತು ಭಾಗ್ಯಮ್ಮ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗಂಗರಾಜು ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದ್ದು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ