ಲೆಜೆಂಡರಿ ಕ್ರಿಕೆಟರ್ ನಿಧನ ಹೊಂದಿರುವುದು ಸುಳ್ಳು ಸುದ್ದಿ..!
ಎಕ್ಸ್ನಲ್ಲಿ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಿದ್ದರು
ನಾನು ಜೀವಂತ ಇದ್ದೀನಿ ಗೆಳೆಯ ಎಂದು ವಾಟ್ಸ್ಆ್ಯಪ್ ಮೆಸೇಜ್
ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟರ್ ಹೀತ್ ಸ್ಟ್ರೀಕ್ ಅವರು ಸಾವನ್ನಪ್ಪಿಲ್ಲ, ಬದುಕಿದ್ದಾರೆ. ಇವರ ನಿಧನ ಕುರಿತು ಎಕ್ಸ್ನಲ್ಲಿ ಶೇರ್ ಮಾಡಿ ಸಂತಾಪ ಸೂಚಿಸಿದ್ದ ಕ್ರಿಕೆಟರ್ ಹೆನ್ರಿ ಒಲೊಂಗಾ ಅವರಿಗೆ ವಾಟ್ಸ್ಆ್ಯಪ್ ಮೂಲಕ ಮೆಸೇಜ್ ಮಾಡಿ ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಹೀತ್ ಸ್ಟ್ರೀಕ್ ಹೇಳಿದ್ದಾರೆ.
ಮಾಜಿ ಕ್ರಿಕೆಟರ್ ಹೆನ್ರಿ ಒಲೊಂಗಾ ಅವರು, ಲೆಜೆಂಡರಿ ಕ್ರಿಕೆಟರ್ ಹೀತ್ ಸ್ಟ್ರೀಕ್ ಕ್ಯಾನ್ಸರ್ನಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇವರ ಈ ಎಕ್ಸ್ನಿಂದ ಮಾಧ್ಯಮಗಳು ಹೀತ್ ಸ್ಟ್ರೀಕ್ ಸಾವನ್ನಪ್ಪಿದ್ದಾರೆಂದು ಸುದ್ದಿ ಮಾಡಿದ್ದವು. ಅಲ್ಲದೇ ಕ್ರಿಕೆಟರ್ಸ್ ಕೂಡ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದರು.
ಏನೆಂದು ಮೆಸೇಜ್ ಮಾಡಿದ್ದರು ಲೆಜೆಂಡರಿ ಕ್ರಿಕೆಟರ್
ಹೀತ್ ಸ್ಟ್ರೀಕ್ ಅವರು ಹೆನ್ರಿ ಒಲೊಂಗಾಗೆ ವಾಟ್ಸ್ಆ್ಯಪ್ ಮೂಲಕ, ನಾನು ತುಂಬಾ ಚೆನ್ನಾಗಿದ್ದು ಇನ್ನೂ ಜೀವಂತವಾಗಿದ್ದೇನೆ. ಪ್ಲೀಸ್ ನೀನು ಮಾಡಿರುವ ರನೌಟ್ ಅನ್ನು ಕ್ಯಾನ್ಸಲ್ ಮಾಡು ಗೆಳೆಯ ಎಂದು ಹೇಳಿದ್ದಾರೆ. ಸದ್ಯ ಅವರ ಮೆಸೇಜ್ನಿಂದ ಜಾಗೃತರಾದ ಒಲೊಂಗಾ, ತಾವು ಮಾಡಿದ್ದ ಎಕ್ಸ್ ಅನ್ನು ಡಿಲೇಟ್ ಮಾಡಿದ್ದು ಹೀತ್ ಸ್ಟ್ರೀಕ್ ಇನ್ನೂ ಜೀವಂತವಾಗಿದ್ದಾರೆ. ಸುಳ್ಳು ಸುದ್ದಿಗೆ ಕಿವಿಗೊಡಬೇಡಿ. ಥರ್ಡ್ ಅಂಪೈರ್ ಅವರನ್ನು ವಾಪಸ್ ಕರೆಯಿಸಿಕೊಂಡಿದ್ದಾರೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದಿದೆ.
I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga) August 23, 2023
ಇನ್ನು ಜಿಂಬಾಬ್ವೆಯ ಲೆಜೆಂಡರಿ ಹೀತ್ ಸ್ಟ್ರೀಕ್ 65 ಟೆಸ್ಟ್, 189 ಏಕದಿನ ಮ್ಯಾಚ್ಗಳನ್ನು ಆಡಿದ್ದು ಒಟ್ಟು 4,933 ರನ್ಗಳನ್ನು ಗಳಿಸಿದ್ದಾರೆ. ಉತ್ತಮ ಆಲ್ರೌಂಡರ್ ಆದ ಇವರು ಎಲ್ಲ ವಿಧದ ಕ್ರಿಕೆಟ್ನಲ್ಲಿ 455 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇವರು ಜಿಂಬಾಬ್ವೆ ಪರ ಏಕದಿನದಲ್ಲಿ 2,943 ರನ್ ಹಾಗೂ 239 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಟೆಸ್ಟ್ನಲ್ಲಿ 1,990 ರನ್ ಕಲೆ ಹಾಕಿದ್ದು 216 ವಿಕೆಟ್ಗಳನ್ನು ಗಳಿಸಿದ್ದರು. ಇನ್ನು ಟೆಸ್ಟ್ನಲ್ಲಿ 127 ರನ್ ಬಾರಿಸಿರುವುದು ವೈಯಕ್ತಿಕ ಅತಿ ಹೆಚ್ಚು ರನ್ ಆದ್ರೆ, ಏಕದಿನದಲ್ಲಿ 79 ರನ್ ವೈಯಕ್ತಿಕ ಗರಿಷ್ಟ ರನ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ