newsfirstkannada.com

BREAKING: ಜೆಡಿಎಸ್ ಪಕ್ಷದಿಂದ ಸಿ.ಎಂ ಇಬ್ರಾಹಿಂ ಅಮಾನತು; ಹೆಚ್.ಡಿ‌.ದೇವೇಗೌಡರಿಂದ ಮಹತ್ವದ ಆದೇಶ

Share :

17-11-2023

    ಪಕ್ಷ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಅನ್ನೋ ಆರೋಪ

    ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ‌.ದೇವೇಗೌಡರಿಂದ ಆದೇಶ

    ತಕ್ಷಣದಿಂದಲೇ ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಅಮಾನತು

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಸಿ.ಎಂ ಇಬ್ರಾಹಿಂ ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿ.ಎಂ ಇಬ್ರಾಹಿಂ ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.

ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆಯನ್ನು ವಿರೋಧಿಸಿದ್ದ ಸಿ.ಎಂ ಇಬ್ರಾಹಿಂ ಅವರು ಒರಿಜಿನಲ್ ಜೆಡಿಎಸ್ ಪಕ್ಷ ನಮ್ಮದೇ. ನಿಜವಾದ ಜಾತ್ಯಾತೀತ ಜನತಾ ದಳವನ್ನು ಕಟ್ಟುತ್ತೇನೆ ಎಂದು ಗುಡುಗಿದ್ದರು. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಚಿಂತಿಸುವುದಾಗಿಯೂ ಮಾತನಾಡಿದ್ದರು.

ಸಿ.ಎಂ ಇಬ್ರಾಹಿಂ ಅವರ ಈ ರಾಜಕೀಯ ನಡೆಗೆ ಇದೀಗ ಹೆಚ್.ಡಿ ದೇವೇಗೌಡರೇ ಬ್ರೇಕ್ ಹಾಕಿದ್ದಾರೆ. ಕಳೆದ ನವೆಂಬರ್ 15ರಂದು ಕೇರಳದ ತಿರುವನಂತಪುರಂ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದ ವಿರೋಧಿ ಹೇಳಿಕೆಯನ್ನು ಸಿ.ಎಂ ಇಬ್ರಾಹಿಂ ನೀಡಿದ್ದಾರೆ ಎಂಬ ಕಾರಣದಿಂದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ‌.ದೇವೇಗೌಡರು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಜೆಡಿಎಸ್ ಪಕ್ಷದಿಂದ ಸಿ.ಎಂ ಇಬ್ರಾಹಿಂ ಅಮಾನತು; ಹೆಚ್.ಡಿ‌.ದೇವೇಗೌಡರಿಂದ ಮಹತ್ವದ ಆದೇಶ

https://newsfirstlive.com/wp-content/uploads/2023/10/CM_IBRAHIM.jpg

Load More