newsfirstkannada.com

ಐ-ಪೋನ್ ಬಳಕೆದಾರರೇ ಎಚ್ಚರ.. ಚೀನಾ ಸರ್ಕಾರದಿಂದ ಮಹತ್ವದ ಆದೇಶ; ಕಾರಣವೇನು?

Share :

06-09-2023

  ಐ-ಫೋನ್‌ಗೆ ಮಾಸ್ಟರ್ ಸ್ಟ್ರೋಕ್‌ ಕೊಟ್ಟ ಡ್ರ್ಯಾಗನ್ ರಾಷ್ಟ್ರ

  ಆ್ಯಪಲ್‌ ಫೋನ್‌ಗಳಲ್ಲಿ ದತ್ತಾಂಶ ಸೋರಿಕೆಯಾಗೋ ಭಯ

  ಆ್ಯಪಲ್ ಕಂಪನಿಗೆ ಬಿಗ್ ಶಾಕ್ ಕೊಟ್ಟ ಚೀನಾ ನಿರ್ಧಾರವೇನು?

ಚೀನಾ ಸರ್ಕಾರ ಐ-ಫೋನ್ ಕಂಪನಿಗೆ ಇಂದು ಮಾಸ್ಟರ್ ಸ್ಟ್ರೋಕ್‌ ಕೊಟ್ಟಿದೆ. ಐ-ಫೋನ್‌ನಲ್ಲಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐ-ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡದಂತೆ ಸರ್ಕಾರಿ ಅಧಿಕಾರಿಗಳಿಗೆ ಚೀನಾ ಸರ್ಕಾರ ಕಟ್ಟಾಜ್ಞೆಯನ್ನು ಹೊರಡಿಸಿದೆ. ಇನ್ಮುಂದೆ ಆಡಳಿತಾಧಿಕಾರಿಗಳು ಐ-ಫೋನ್‌ಗಳನ್ನು ತರದಂತೆ ಸೂಚಿಸಲಾಗಿದೆ.

ಚೀನಾ ಸರ್ಕಾರದ ಉನ್ನತ ಅಧಿಕಾರಿಗಳು ಐಫೋನ್ ಬಳಕೆಗೆ ಸಂಬಂಧಿಸಿದಂತೆ ಹೊಸ ಸೂಚನೆ ಕೊಟ್ಟಿದ್ದಾರೆ. ಐ-ಫೋನ್‌ಗಳಲ್ಲಿ ದತ್ತಾಂಶ ಸೋರಿಕೆಯಾಗೋ ಸಾಧ್ಯತೆ ಹಿನ್ನೆಯಲ್ಲಿ ಈ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಐಫೋನ್ ಬಳಕೆಗೆ ನಿರ್ಬಂಧ ವಿಧಿಸಿರೋ ಚೀನಾ, ಸ್ವದೇಶಿ ತಂತ್ರಜ್ಞಾನ ಹೊಂದಿದ ಫೋನ್ ಬಳಕೆಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಭಾರತ ಅಂತಾದ್ರೆ ಪಾಕ್‌ಗೆ ಲಾಭ; ‘ಇಂಡಿಯಾ’ ಮೇಲೆ ಹಕ್ಕು ಚಲಾಯಿಸಲು ಪ್ಲಾನ್‌; ಏನಿದು ಭಯಾನಕ ಸಂಚು?

ಮುಂದಿನ ವಾರ ಆ್ಯಪಲ್ ಕಂಪನಿಯು ಚೀನಾದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಆ್ಯಪಲ್ ತನ್ನ ಮಾರುಕಟ್ಟೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸೋ ಗುರಿಯನ್ನು ಹೊಂದಿತ್ತು. ಆ್ಯಪಲ್‌ ಕಂಪನಿಯ ಈ ಕಾರ್ಯಕ್ರಮಕ್ಕೂ ಮುನ್ನ ಚೀನಾದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಮೆರಿಕದ ಹುವಾವೇ ಕೂಡ ಇದೇ ರೀತಿ ಐ-ಫೋನ್‌ಗಳನ್ನು ಬಳಕೆ ಮಾಡದ ನಿರ್ಧಾರ ಕೈಗೊಂಡಿತ್ತು. ಹುವಾವೇ ಬಳಿಕ ಚೀನಾ ಕೂಡ ಐ-ಫೋನ್‌ಗಳಲ್ಲೂ ಮಾಹಿತಿ ಸೋರಿಕೆಯಾಗುವ ಅನುಮಾನ ವ್ಯಕ್ತಪಡಿಸಿದ್ದು ಬಳಕೆ ಮಾಡದಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐ-ಪೋನ್ ಬಳಕೆದಾರರೇ ಎಚ್ಚರ.. ಚೀನಾ ಸರ್ಕಾರದಿಂದ ಮಹತ್ವದ ಆದೇಶ; ಕಾರಣವೇನು?

https://newsfirstlive.com/wp-content/uploads/2023/09/China-IPhone.jpg

Load More