ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ
ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ನಡೆಯುತ್ತಿರೋ ಶೃಂಗಸಭೆ
ಇಂದಿನ ಮಹತ್ವದ ಸಭೆಯಲ್ಲಿ ಜಿ20 ನಾಯಕರು ಭಾಗಿಯಾಗಿದ್ದರು..!
ನವದೆಹಲಿ: ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಶುರುವಾಗಿದೆ. ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ನಡೆಯುತ್ತಿರೋ ಈ ಮಹತ್ವದ ಸಭೆಯಲ್ಲಿ ಜಿ20 ನಾಯಕರು ಭಾಗಿಯಾಗಿದ್ದರು. ಜತೆಗೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು.
ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ಪ್ರಮುಖ ಘೋಷಣೆಗಳು!
- ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ ಉತ್ತೇಜನ
- ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
- ನೀಲಿ (ಸಮುದ್ರ) ಆರ್ಥಿಕತೆ
- ಆಹಾರ ಭದ್ರತೆ ಕುರಿತಾದ ಘೋಷಣೆಗಳು ಮತ್ತು ಅನುಮೋದನೆ
- ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, ಜಾಗತಿಕ ಆರ್ಥಿಕ ಪರಿಸ್ಥಿತಿ!
- ವಿಶ್ವದ ಬೆಳವಣಿಗೆಗಾಗಿ ಉತ್ತಮ ವ್ಯಾಪಾರ ಸಂಬಂಧ ಭವಿಷ್ಯದ ದೃಷ್ಟಿಯಲ್ಲಿ ತಯಾರಿ ನಡೆಸುವುದು
- ಆರ್ಥಿಕ ಒಳಗೊಳ್ಳುವಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು
- ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ ವೇಗವನ್ನ ಹೆಚ್ಚುಗೊಳಿಸುವುದು
- ವಿಶ್ವದಲ್ಲಿನ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಕೆಲಸ ಮಾಡುವುದು
- ಆಹಾರ ಮತ್ತು ಅಭದ್ರತೆಯ ಮೇಲೆ ಆರ್ಥಿಕ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದು
- ಜಾಗತಿಕ ಆರೋಗ್ಯ ಬಲಪಡಿಸುವುದು ಹಾಗೂ ಮಹತ್ತರ ಆರೋಗ್ಯ ವಿಧಾನವನ್ನು ಕಾರ್ಯಗತಗೊಳಿಸುವತ್ತ ಕೆಲಸ ಮಾಡುವುದು
- ಗುಣಮಟ್ಟದ ಶಿಕ್ಷಣವನ್ನು ನೀಡುವುದು
- ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ
- ಹವಾಮಾನ ಬದಲಾವಣೆ ಮತ್ತು ಪರಿವರ್ತನೆಯ ಹಾದಿಗಳಿಂದ ಉಂಟಾಗುವ ಆರ್ಥಿಕ ಅಪಾಯಗಳು
- ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಜೀವನಶೈಲಿಯತ್ತ ಗಮನ ಕೊಡುವುದು
- ಸುಸ್ಥಿರ, ಕೈಗೆಟಕುವ ರೀತಿಯಲ್ಲಿ ಸುಸ್ಥಿರ ಹಣಕಾಸು ವ್ಯವಸ್ಥೆ ಅನುಷ್ಠಾನಗೊಳಿಸುವುದು
- ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾಗಿ ಬಳಸುವುದು ಮತ್ತು ಮರುಸ್ಥಾಪಿಸುವುದು
- ನೀಲಿ (ಸಾಗರ ) ಆಧಾರಿತ ಆರ್ಥಿಕತೆಯನ್ನು ಬಳಸಿಕೊಳ್ಳುವುದು ಮತ್ತು ಸಂರಕ್ಷಿಸುವುದು
- ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವುದು
- ಮುಂದೆ ನಗರಗಳಾಗಿ ಬೆಳೆಯುವ ಪ್ರದೇಶಗಳಿಗೆ ಹಣಕಾಸು ಒದಗಿಸುವುದು
- ವಿಪತ್ತು ಅಪಾಯವನ್ನು ಕಡಿಮೆ ಮಾಡುವುದು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ನಿರ್ಮಿಸುವುದು
- 21ನೇ ಶತಮಾನಕ್ಕೆ ಬಹುಪಕ್ಷೀಯ ಸಂಸ್ಥೆಗಳನ್ನ ಸ್ಥಾಪನೆ ಮಾಡುವತ್ತ ಕೆಲಸ ನಿರ್ವಹಿಸುವುದು
- ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವುದು
- ಜಾಗತಿಕ ಸಾಲದ ದೋಷಗಳನ್ನು ನಿರ್ವಹಿಸುವುದು
- ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಬಳಕೆ ಮಾಡುವುದು
- ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸವನ್ನ ನಿರ್ಮಾಣ ಮಾಡುವುದು
- ಕ್ರಿಪ್ಟೋ-ಸ್ವತ್ತುಗಳು, ನೀತಿ ಮತ್ತು ನಿಯಂತ್ರಣದ ಬಗ್ಗೆ ಗಮನ ಹರಿಸುವುದು
- ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹಾಗೂ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಬೆಳೆಸುವುದು
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಜವಾಬ್ದಾರಿಯುತವಾಗಿ ಎಲ್ಲರೂ ಬಳಸಿಕೊಳ್ಳುವಂತೆ ಮಾಡುವುದು
- ಅಂತಾರಾಷ್ಟ್ರೀಯ ತೆರಿಗೆ
- ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ
- ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಹೆಚ್ಚಿಸುವುದು
- ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯದ ಗುರಿ
- ಮಹಿಳೆಯರ ಆಹಾರ ಭದ್ರತೆ, ಪೋಷಣೆ ಮತ್ತು ಯೋಗಕ್ಷೇಮವನ್ನು ಭದ್ರಪಡಿಸುವುದು
- ಮಹಿಳಾ ಸಬಲೀಕರಣದ ಮೇಲೆ ವರ್ಕಿಂಗ್ ಗ್ರೂಪ್ ರಚನೆ
- ಆರ್ಥಿಕ ವಲಯದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು
- ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಅನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯ ಸನ್ನದ್ಧರಾಗುವುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ