newsfirstkannada.com

ಅಯ್ಯೋ.. ಕೋಪದಲ್ಲಿ ಆ ವ್ಯಕ್ತಿ ವೀರೇಂದ್ರ ಸೆಹ್ವಾಗ್ ಕಾಲರ್​ ಹಿಡಿದಿದ್ರು! ಮುಂದೇನಾಯ್ತು?

Share :

31-07-2023

    ಇದು ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಸ್ಟೋರಿ

    ಆ ಘಟನೆಯಿಂದ ಸೆಹ್ವಾಗ್ ಮನೆಗೆ ಮರಳುವುದಾಗಿ ಪಟ್ಟು ಹಿಡಿದಿದ್ರು

    ಪ್ರತ್ಯೇಕತೆಯ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಕ್ಕೆ ಸೆಹ್ವಾಗ್​ಗೆ ಹೀಗಾಯ್ತ?

ವೀರೇಂದ್ರ ಸೆಹ್ವಾಗ್. ಟೀಮ್ ಇಂಡಿಯಾದ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್​ಮನ್​. ಚೆಂಡು ಇರೋದೆ ದಂಡಿಸೋಕೆ ಅನ್ನೋದು ಸೆಹ್ವಾಗ್​ರ ಮಂತ್ರ. ಆದರೆ, ಇದೇ ಡೇರಿಂಗ್ ಬ್ಯಾಟಿಂಗ್​​ ಟೀಮ್ ಇಂಡಿಯಾದ ಮಾಜಿ ಕೋಚ್​​​​ ಜಾನ್​ ರೈಟ್​ ಕೋಪಕ್ಕೆ ಗುರಿಯಾಗಿತ್ತು. ಕೋಪದಲ್ಲಿ ವಿರೇಂದ್ರ ಸೆಹ್ವಾಗ್​ ಕುತ್ತಿಗೆ ಹಿಡಿದು ವಾರ್ನಿಂಗ್ ಸಹ ನೀಡಿದ್ದರು.

ಹೌದು! 2002ರಲ್ಲಿ ಟೀಮ್ ಇಂಡಿಯಾ, ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಗಾಗಿ ಇಂಗ್ಲೆಂಡ್​​​​​ಗೆ ತೆರಳಿತ್ತು. ಈ ಸರಣಿಗೂ ಮುನ್ನ ಕೋಚ್ ಜಾನ್ ರೈಟ್, ನೆಟ್ಸ್​ನಲ್ಲಿ ​ ಗಾಳಿಯಲ್ಲಿ ಚೆಂಡು ಹೊಡೆಯದಂತೆ ತಾಕೀತು ಮಾಡಿದ್ದರು. ಆದರೆ, ಇದಕ್ಕೆ ಕಿವಿಗೊಡದ ಸೆಹ್ವಾಗ್, ಡರ್ಬನ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಬ್ಯಾಟ್ ಬೀಸಿದ್ದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್, 60 ರನ್​ ಗಳಿಸಿದ್ದಾಗ ಕೆಟ್ಟ ಹೊಡತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಇದರಿಂದ ಸಹನೆ ಕಳೆದುಕೊಂಡಿದ್ದ ಜಾನ್​ ರೈಟ್​, ಸೆಹ್ವಾಗ್ ಡ್ರೆಸ್ಸಿಂಗ್ ರೂಮ್ ಪ್ರವೇಶಿಸುತ್ತಿದ್ದಂತೆ ಕಾಲರ್ ಹಿಡಿದ ತರಾಟೆಗೆ ತೆಗೆದುಕೊಂಡಿದ್ದರು.

ಜಾನ್​ ರೈಟ್- ವೀರೇಂದ್ರ ಸೆಹ್ವಾಗ್​
ಜಾನ್​ ರೈಟ್- ವೀರೇಂದ್ರ ಸೆಹ್ವಾಗ್​

ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದವೇ ನಡೆದಿತ್ತು. ನಂತರ ಮಧ್ಯೆ ಪ್ರವೇಶಿಸಿದ ಗಂಗೂಲಿ, ಕೋಚ್ ನಡೆಯನ್ನೇ ಖಂಡಿಸಿದ್ದರು. ಈ ಬಳಿಕ ಸೆಹ್ವಾಗ್​ ಬಳಿ ಕ್ಷಮೆಯಾಚಿಸಿದ್ರು. ಆದರೆ, ಸೆಹ್ವಾಗ್ ಮನೆಗೆ ಮರಳುವುದಾಗಿ ಪಟ್ಟು ಹಿಡಿದಿದ್ರು. ಅಂತಹ ಶಾಟ್ ಬಾರಿಸಿದರೆ ಮನೆಗೆ ಕಳುಹಿಸುವ ಬೆದರಿಕೆ ಹಾಕಿದ್ದಾರೆ ಎಂದು ಗಂಗೂಲಿ ಬಳಿ ಹೇಳಿದ್ದರು. ನಂತರ ಸೆಹ್ವಾಗ್​ರನ್ನ ಗಂಗೂಲಿ ಕೂಲ್​ ಮಾಡಿದರು. ಇಷ್ಟೆಲ್ಲಾ ನಡೆದ್ರೂ ಸೆಹ್ವಾಗ್​​​ ತನ್ನ ಬ್ಯಾಟಿಂಗ್ ಶೈಲಿಯನ್ನ ಮಾತ್ರ ಬದಲಿಸಿರಲಿಲ್ಲ.

ಜಾನ್​ ರೈಟ್- ಸೌರವ್​ ಗಂಗೂಲಿ
ಜಾನ್​ ರೈಟ್- ಸೌರವ್​ ಗಂಗೂಲಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಯ್ಯೋ.. ಕೋಪದಲ್ಲಿ ಆ ವ್ಯಕ್ತಿ ವೀರೇಂದ್ರ ಸೆಹ್ವಾಗ್ ಕಾಲರ್​ ಹಿಡಿದಿದ್ರು! ಮುಂದೇನಾಯ್ತು?

https://newsfirstlive.com/wp-content/uploads/2023/07/Virendra-Sehwag.jpg

Load More