ಮುದ್ದಾದ ಆನೆಮರಿಯನ್ನ ಸಾಕುತ್ತಿದ್ದಾರೆ ಈ ದಂಪತಿ
‘ವೇದಾ’ಳ ಹುಟ್ಟಿನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ
ಬಂಡೀಪುರದಲ್ಲೊಂದು ಎಲಿಫೆಂಟ್ ಎಲಿಫೆಂಟ್ ವಿಸ್ಪರರ್ಸ್ನಂತಿರೋ ಸ್ಟೋರಿ
ಚಾಮರಾಜನಗರ: ಇತ್ತೀಚೆಗೆ ಇಂಟರ್ ನ್ಯಾಷನಲ್ ಅವಾರ್ಡ್ ಪಡೆದ ‘ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿ ಬಿಡುಗಡೆಗೊಂಡ ಮೇಲೆ ‘ರಘು’ ಎಂಬ ಮುದ್ದಾದ ಆನೆಯ ನಿಜ ಕಥೆ ಎಲ್ಲರಿಗೆ ತಿಳಿಯಿತು. ಇದೀಗ ಅಂತಹದ್ದೇ ಮತ್ತೊಂದು ನೈಜ್ಯ ಕಥೆ ಬಂಡೀಪುರದಲ್ಲೊಂದು ಬೆಳಕಿಗೆ ಬಂದಿದೆ.
ಇದು ತಾಯಿಯಿಂದ ಬೇರ್ಪಟ್ಟ ಆನೆಮರಿಯ ಸ್ಟೋರಿ. ಬಂಡೀಪುರದ ರಾಮಾಪುರ ಆನೆ ಕ್ಯಾಂಪ್ನಲ್ಲಿರುವ ‘ವೇದಾ’ಳ ಮುದ್ದಾದ ಸ್ಟೋರಿ. ಅಂದಹಾಗೆಯೇ ಸದಾ ತುಂಟಾಟ ಮಾಡುತ್ತಾ, ಅತ್ತಿಂದಿತ್ತ ಓಡಾಡುತ್ತಿರುವ ಈ ಹೆಣ್ಣು ಆನೆಮರಿಗೆ ಮಾವುತರೇ ತಂದೆ ತಾಯಿಯಾಗಿದ್ದಾರೆ.
ಹೌದು. ‘ವೇದಾ’ಳನ್ನು ರಾಜು ಮತ್ತು ರಮ್ಯಾ ಎಂಬ ದಂಪತಿಗಳು ಪಾಲನೆ ಮಾಡುತ್ತಿದ್ದಾರೆ. ಕಳೆದ ಏಳು ತಿಂಗಳಿನಿಂದ ‘ವೇದಾ’ಳನ್ನು ಮುದ್ದಾಗಿ ಸಾಕುತ್ತಿದ್ದಾರೆ. ಅವರೇ ಈ ಆನೆ ಮರಿಗೆ ‘ವೇದಾ’ ಎಂಬ ನಾಮಕರಣ ಮಾಡಿರೋದು.
ದುರಾದೃಷ್ಟಕರ ಸಂಗತಿ ಎಂದರೆ ‘ವೇದಾ’ ಜನಿಸಿದ 14 ದಿನಗಳಿಗೆ ತಾಯಿಯಿಂದ ಬೇರ್ಪಟ್ಟಳು. ಆ ಬಳಿಕ ಮುದ್ದಾದ ಆನೆಮರಿಯನ್ನು ರಾಜು ಮತ್ತು ರಮ್ಯಾ ಸಾಕುತ್ತಾ ಬಂದಿದ್ದಾರೆ. ತೆಪ್ಪಕಾಡಿನ ಬೆಳ್ಳಿ-ಬೊಮ್ಮನ್ ಮಾದರಿಯಲ್ಲೇ ‘ವೇದಾ’ಳನ್ನು ರಮ್ಯಾ ಮತ್ತು ರಾಜು ಸಾಕುತ್ತಿದ್ದಾರೆ. ಸದ್ಯ ‘ವೇದಾ’ಳಿಗಂತು ಈ ದಂಪತಿಗಳೆಂದರೆ ಸರ್ವಸ್ವ.
ಇನ್ನು ದಂಪತಿಗಳು ಕೂಡ ತಮ್ಮ ಮಕ್ಕಳಂತೆ ‘ವೇದಾ’ಳನ್ನು ಸಾಕುತ್ತಿದ್ದಾರೆ. ‘ವೇದಾ’ಳ ತುಂಟಾಟ ವಿಡಿಯೋ ನ್ಯೂಸ್ ಫಸ್ಟ್ ಕ್ಯಾಮೆರಾಗೆ ಸಿಕ್ಕಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.
ಬಂಡೀಪುರದಲ್ಲೊಂದು ಎಲಿಫೆಂಟ್ ವಿಸ್ಪರರ್ಸ್ನಂತಿರೋ ಮುದ್ದಾದ ಆನೆಮರಿಯ ಕಥೆ ಕೇಳೀದ್ರಾ?
ಇಲ್ಲಿದೆ: https://t.co/vMVIYudFCV#elephant #Bandipur pic.twitter.com/8B9LdvklOL
— NewsFirst Kannada (@NewsFirstKan) July 22, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ