newsfirstkannada.com

×

BJP Meeting: ಮತ್ತೊಮ್ಮೆ ‘ಲೋಕಸಭೆ’ ಗೆಲ್ಲಲು ಮಿಡ್​​ನೈಟ್ ಮೀಟಿಂಗ್; ಬಿಜೆಪಿ ಅಜೆಂಡಾದಲ್ಲಿ ಭಾರೀ ಬದಲಾವಣೆಯ ಬಿರುಗಾಳಿ..!

Share :

Published June 29, 2023 at 1:30pm

Update June 29, 2023 at 1:32pm

    ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಮಹತ್ವದ ಸಭೆ

    ಈ ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಗೊತ್ತಾ..?

    ಆ 4 ವಿಧಾನಸಭೆ ಗೆದ್ದರೆ ಬಿಜೆಪಿಗೆ ‘ಲೋಕ’ ಗೆಲುವು ಸುಲಭ

ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಎನ್​ಡಿಎ (National Democratic Alliance) ಒಕ್ಕೂಟವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿರುವ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮುಂದೆ ಬಿಗ್ ಚಾಲೆಂಜ್ ಇದೆ. ಕಳೆದ ಎರಡು ಅವಧಿಯಲ್ಲಿ ಸಿಕ್ಕ ಸುಲಭ ಗೆಲುವನ್ನು ಈ ಬಾರಿಯೂ ನಿರೀಕ್ಷೆ ಮಾಡೋದು ಅಸಾಧ್ಯ. ಇದನ್ನು ಅರಿತಿರುವ ಬಿಜೆಪಿ ನಾಯಕರು, ಚುನಾವಣೆ ಸಂಬಂಧ ನಿನ್ನೆ ರಾತ್ರಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸಭೆಯಲ್ಲಿ ಯಾರೆಲ್ಲ ಇದ್ದರು?

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಬಿಜೆಪಿಯ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾಣೆಯಲ್ಲಿ ಗೆಲುವು ಸಾಧಿಸುವ ಸಂಬಂಧ ಹಿರಿಯನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಏನೆಲ್ಲ ಚರ್ಚೆ ಆಗಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಬರೋಬ್ಬರಿ 5 ಗಂಟೆ ಚರ್ಚೆ

ಮೋದಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಆದ ಬೆನ್ನಲ್ಲೇ ಸಭೆ ನಡೆದಿರೋದು ಹಲವು ಕುತೂಹಲಕ್ಕೂ ಕಾರಣವಾಗಿದೆ. ಬರೋಬ್ಬರಿ 5 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಕ್ಷದಲ್ಲಿನ ನಿಲುವುಗಳಲ್ಲಿ ಹಾಗೂ ಸಂಪುಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಗಳು ಹೇಳಿವೆ. ಬಿಜೆಪಿಯಲ್ಲಿ ಪ್ರಮುಖರಾಗಿರುವ ಬಿ.ಎಲ್.ಸಂತೋಷ್, ಅಮಿತ್ ಶಾ, ನಡ್ಡಾ ಪಕ್ಷ ಸಂಘಟನೆ ಹಾಗೂ ಇತ್ತೀಚೆಗಿನ ರಾಜಕೀಯ ವಿಚಾರಗಳ ಬಗ್ಗೆ ಮುಂದಿನ ಚುನಾವಣೆಗಾಗಿ ನಿರಂತರವಾಗಿ ಚಿಂತನ-ಮಂಥನ ಮಾಡಿಕೊಂಡು ಬರುತ್ತಿದ್ದಾರೆ. ಸಂಘಟನೆಯಲ್ಲಿ ವ್ಯಕ್ತವಾಗಿರುವ ಅಭಿಯಾಗಳನ್ನು ಇಟ್ಟುಕೊಂಡು ಸದ್ಯದಲ್ಲೇ ಪಕ್ಷ ಅಧಿಕೃತವಾಗಿ ತನ್ನ ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಇನ್ನು ಲೋಕಸಭೆ ಗೆಲ್ಲಬೇಕು ಅಂದರೆ ಆಡಳಿತದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ. ಇದರ ಮುಂದುವರಿದ ಭಾಗವಾಗಿ ಮೊನ್ನೆಯಷ್ಟೇ ಮೋದಿ ‘ಏಕರೂಪ ನಾಗರಿಕ ಸಂಹಿತೆ’ ವಿಚಾರವನ್ನು ಪ್ರಸ್ತಾಪಿಸಿ, ದೇಶದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ‘ಏಕರೂಪ ನಾಗರೀಕ ಸಂಹಿತೆ’ಗೆ ಆದ್ಯತೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.

4 ರಾಜ್ಯಗಳು ತುಂಬಾನೇ ನಿರ್ಣಾಯಕ..!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ. ಹೀಗಾಗಿ ಇಲ್ಲಿ ಅನುಸರಿಸಿರುವ ಚುನಾವಣಾ ತಂತ್ರಗಳನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಪಕ್ಷ ಇಲ್ಲ. ಕರ್ನಾಟಕ ಚುನಾವಣೆಯಲ್ಲಿ ಬಳಸಿದ ತಂತ್ರ, ಪ್ರತಿತಂತ್ರಗಳ ಬದಲಾಗಿ ಬೇರೆಯದ್ದೇ ಮಾದರಿಯನ್ನು ಬಳಸಿಕೊಳ್ಳುವ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯು ಬಿಜೆಪಿಗೆ ತುಂಬಾನೇ ಮುಖ್ಯವಾಗಿದೆ. ಇಲ್ಲಿ ಗೆದ್ದರೆ ಲೋಕಸಭೆ ರಣಕಣ ಮತ್ತಷ್ಟು ಸುಲಭವಾಗಲಿದೆ ಅನ್ನೋ ಲೆಕ್ಕಚಾರದಲ್ಲಿ ಕೇಂದ್ರದ ನಾಯಕರು ಇದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಚತ್ತೀಸ್​ಗಢ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದಲ್ಲೀಗ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಸಾಹಸವನ್ನು ಬಿಜೆಪಿ ಬೇಕಿದೆ. ಇನ್ನು ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ವಿರುದ್ಧ ಈಗಾಗಲೇ ವಿರೋಧಿ ಅಲೆಗಳು ಶುರುವಾಗಿದ್ದರಿಂದ ಈ ಬಾರಿ ಬಿಜೆಪಿ ಗೆಲುವಿನ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ.
ಇತ್ತೀಚೆಗಷ್ಟೇ ಕೇಂದ್ರದಲ್ಲಿ ಮೋದಿ ಸರ್ಕಾರ, ಅಧಿಕಾರಕ್ಕೆ ಬಂದು 9 ವರ್ಷಗಳ ಸಂಭ್ರಮವನ್ನು ಆಚರಿಸಿಕೊಂಡಿದೆ. ಈ ಸಂಭ್ರಮವನ್ನು ಲೋಕಸಭೆ ಚುನಾವಣೆಯವರೆಗೆ ತೆಗೆದುಕೊಂಡು ಹೋಗಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಅಂತೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಜನಪರ ಯೋಜನೆಗಳನ್ನು, ಲಾಭಗಳನ್ನು ದೇಶದ ನಾಗರಿಕರಿಗೆ ತಲುಪಿಸುವ ಕೆಲಸವನ್ನು ಬಿರುಸಿನಿಂದ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಮತ್ತೊಂದು ಕಡೆ ಬಿಜೆಪಿ ನೇತೃತ್ವದ ಒಕ್ಕೂಟವನ್ನು ಸೋಲಿಸಬೇಕು ಎಂದು ಎಲ್ಲಾ ವಿರೋಧ ಪಕ್ಷಗಳು ಒಂದಾಗುತ್ತಿವೆ. ಈಗಾಗಲೇ ವಿಪಕ್ಷಗಳು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಇತ್ತೀಚೆಗೆ ವಿಪಕ್ಷಗಳು ಸಭೆ ನಡೆಸಿದ್ದವು. ಈ ಸಭೆಯಲ್ಲಿ ಕಾಂಗ್ರೆಸ್, ಆಮ್​ಆದ್ಮಿ ಪಾರ್ಟಿ ಸೇರಿ ಒಟ್ಟು 14 ವಿರೋಧ ಪಕ್ಷಗಳು ಭಾಗಿಯಾಗಿದ್ದವು. ಆದರೆ ಈ ಸಭೆಯು ಫಲಪ್ರದಾವಾಗಿಲ್ಲ ಎಂಬ ವರದಿಗಳು ಬಂದಿವೆ. ಒಂದು ವೇಳೆ ದೇಶದಲ್ಲಿರುವ ಎಲ್ಲಾ ವಿಪಕ್ಷಗಳು ಒಂದಾಗಿ ಚುನಾವಣೆಯನ್ನು ಎದುರಿಸುವ ನಿರ್ಧಾರವನ್ನು ತೆಗೆದುಕೊಂಡರೆ, ಬಿಜೆಪಿ ಒಕ್ಕೂಟಕ್ಕೆ ಕಠಿಣ ಸವಾಲ್ ಎದುರಾಗೋದ್ರಲ್ಲಿ ಡೌಟೇ ಇಲ್ಲ. ಇದನ್ನು ಮನಗಂಡ ಬಿಜೆಪಿ ಹಿರಿಯ ನಾಯಕರು ರಾತ್ರೋರಾತ್ರಿ ಮಹತ್ವದ ಸಭೆಗಳನ್ನು ನಡೆಸಿ ಚುನಾವಣೆ ತಂತ್ರವನ್ನು ರೂಪಿಸಲು ಮುಂದಾಗಿದ್ದಾರೆ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP Meeting: ಮತ್ತೊಮ್ಮೆ ‘ಲೋಕಸಭೆ’ ಗೆಲ್ಲಲು ಮಿಡ್​​ನೈಟ್ ಮೀಟಿಂಗ್; ಬಿಜೆಪಿ ಅಜೆಂಡಾದಲ್ಲಿ ಭಾರೀ ಬದಲಾವಣೆಯ ಬಿರುಗಾಳಿ..!

https://newsfirstlive.com/wp-content/uploads/2023/06/MODI-7.jpg

Load More