newsfirstkannada.com

ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಗ್ಯಾಸ್‌ ಸಿಲಿಂಡರ್‌ ವಾಹನ; ಸ್ವಲ್ಪದರಲ್ಲೇ ತಪ್ಪಿದೆ ಭಾರೀ ಅನಾಹುತ!

Share :

Published July 7, 2024 at 2:21pm

  ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನ

  ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಅಪಘಾತ

  ದ್ವಿಚಕ್ರ ವಾಹನ ತಪ್ಪಿಸಲು ಹಳ್ಳಕ್ಕೆ ಉರುಳಿ ಬಿದ್ದ ಗೂಡ್ಸ್ ಗಾಡಿ

ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಬೊಲೆರೋ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಮೂಗಿರೆಡ್ಡಿಪಲ್ಲಿ ಗ್ರಾಮದ ಸಮೀಪ ನಡೆದಿದೆ.

ಅಪಘಾತದಲ್ಲಿ ಬೊಲೆರೋ ವಾಹನದ ಚಾಲಕ ಹಾಗೂ ಕ್ಲೀನರ್‌ಗೆ ಗಂಭೀರ ಗಾಯಗಳಾಗಿದೆ. ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಜೀವ ಕಳೆದುಕೊಂಡ ಯುವಕ.. ದೇಹ ಪೀಸ್ ಪೀಸ್ 

ಬಾಗೇಪಲ್ಲಿ ಕಡೆ ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಗೂಡ್ಸ್ ಗಾಡಿ, ದ್ವಿಚಕ್ರ ವಾಹನವನ್ನು ತಪ್ಪಿಸಲು ಹಳ್ಳಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲೇ ಗ್ಯಾಸ್ ಸಿಲಿಂಡರ್‌ ವಾಹನದ ಭಾರೀ ಅನಾಹುತ ತಪ್ಪಿ ಹೋಗಿದೆ. ಪಾತಪಾಳ್ಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಗ್ಯಾಸ್‌ ಸಿಲಿಂಡರ್‌ ವಾಹನ; ಸ್ವಲ್ಪದರಲ್ಲೇ ತಪ್ಪಿದೆ ಭಾರೀ ಅನಾಹುತ!

https://newsfirstlive.com/wp-content/uploads/2024/07/Chikkaballapura-Accident.jpg

Load More