Advertisment

ಹೊಸ ಬೈಕ್ ಶೋಕಿ.. ತಂದೆ-ತಾಯಿ ಬುದ್ಧಿ ಮಾತಿಗೆ ಮನನೊಂದ ಮಗ ಸಾವಿಗೆ ಶರಣು; ಆಗಿದ್ದೇನು?

author-image
admin
Updated On
ಹೊಸ ಬೈಕ್ ಶೋಕಿ.. ತಂದೆ-ತಾಯಿ ಬುದ್ಧಿ ಮಾತಿಗೆ ಮನನೊಂದ ಮಗ ಸಾವಿಗೆ ಶರಣು; ಆಗಿದ್ದೇನು?
Advertisment
  • ಎರಡು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಯುವಕನಿಗೆ ಬುದ್ಧಿವಾದ
  • ತಂದೆ, ತಾಯಿ ಹೇಳಿದ ಒಂದೇ ಒಂದು ಬುದ್ಧಿ ಮಾತಿಗೆ ಯುವಕನ ಅನಾಹುತ
  • ನಿರ್ಜನ ಪ್ರದೇಶಕ್ಕೆ ಹೋಗಿದ್ದ ನಿಖಿಲ್ ಕುಮಾರ್ ದಾರುಣ ಸಾವು

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ ಮಕ್ಕಳಿಗೆ ಬುದ್ಧಿ ಹೇಳುವುದು ಕಷ್ಟವಾಗಿದೆ. ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ತಿದ್ದಿ ಸರಿ ದಾರಿ ತೋರಿಸಿದ್ರೂ ಕೇಳಲ್ಲ. ಇನ್ನು ತಂದೆ, ತಾಯಿ ಹೇಳುವ ಬುದ್ಧಿ ಮಾತು ಅನಾಹುತಕ್ಕೆ ಕಾರಣವಾಗುತ್ತೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮದಲ್ಲಿ ಇಂತಹದೊಂದು ದುರಂತ ನಡೆದು ಹೋಗಿದೆ.

Advertisment

ತಂದೆ- ತಾಯಿ ಬುದ್ಧಿ ಮಾತಿಗೆ ಮನನೊಂದ ಯುವಕ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಾಡೇಶ್ವರ ಗ್ರಾಮದಲ್ಲಿ ನಡೆದಿದೆ. ನಿಖಿಲ್ ಕುಮಾರ್ (28) ಪ್ರಾಣ ಬಿಟ್ಟಿರುವ ಯುವಕ.

ಇದನ್ನೂ ಓದಿ: BBMP ಗ್ರೌಂಡ್‌ನಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 10 ವರ್ಷದ ಬಾಲಕ ಸಾವು! 

ನಿಖಿಲ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ. ಎರಡು ತಿಂಗಳ‌ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿದ್ದ. ನಿರುದ್ಯೋಗಿಯಾಗಿದ್ದ ನಿಖಿಲ್‌ ಇತ್ತೀಚೆಗೆ ಸಾಲ‌ ಮಾಡಿ ಹೊಸ ಬೈಕ್ ಅನ್ನು ಖರೀದಿ ಮಾಡಿದ್ದ.

Advertisment

ಮಗನ ಬೈಕ್ ಶೋಕಿಗೆ ಸಿಟ್ಟಾದ ನಿಖಿಲ್‌ ಕುಮಾರ್ ತಂದೆ, ತಾಯಿ ಬೈದಿದ್ದಾರೆ. ಕೆಲಸ ಇಲ್ಲದೇ ಇದ್ದರೂ ಸಾಲ ಮಾಡಿ ಯಾಕೆ ಬೈಕ್ ಖರೀದಿ ಮಾಡಿದೆ. ಸಾಲ ತೀರಿಸುವವರು ಯಾರು ಎಂದು ಬುದ್ಧಿವಾದ ಹೇಳಿದ್ದಾರೆ. ತಂದೆ-ತಾಯಿಯ ಈ ಬುದ್ಧಿವಾದಕ್ಕೆ ಮನನೊಂದ ನಿಖಿಲ್ ಕುಮಾರ್ ಸಾವಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಮತ್ತೆ ಬಾತ್‌ ರೂಂನಲ್ಲಿ ರೀಲ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ನಿವೇದಿತಾ ಗೌಡ; ಕಿವಿ ಮೇಲೆ ಈ ಹೂ ಯಾಕೆ? 

ಹಸು ಮೇಯಿಸಲು ನಿರ್ಜನ ಪ್ರದೇಶಕ್ಕೆ ಹೋಗಿದ್ದ ನಿಖಿಲ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆಯ ಇನ್ಸ್‌ಪೆಕ್ಟರ್ ಎಂ.ಬಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಡೇಶ್ವರ ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment