newsfirstkannada.com

ಮದುವೆ ಮಂಟಪಕ್ಕೂ ತಟ್ಟಿದ ವಿಶ್ವಕಪ್ ಫೈನಲ್ ಫೀವರ್‌.. ವಧು-ವರರು ಮಾಡಿದ್ದೇನು?

Share :

19-11-2023

    ಫೈನಲ್ ಪಂದ್ಯ ನೋಡಲು ಎಲ್ಇಡಿ ಸ್ಕ್ರೀನ್ ಅಳವಡಿಸಿದ ಕ್ರಿಕೆಟ್ ಪ್ರೇಮಿ

    ಹರ್ಷವರ್ಧನ್, ಸಹನಾ ಮದುವೆ ಸಂಭ್ರಮದಲ್ಲಿ ಫೈನಲ್ ಮ್ಯಾಚ್ ಪ್ರದರ್ಶನ

    ಹರ್ಷಿತಾ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಫೈನಲ್ ಪಂದ್ಯ ವೀಕ್ಷಣೆ

ರಾಯಚೂರು: ಭಾರತ, ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ರಣರೋಚಕವಾಗಿದೆ. ಅಂತಿಮವಾಗಿ ಯಾರು ಗೆಲ್ತಾರೆ ಅಂತಾ ಕೋಟ್ಯಾಂತರ ಕೋಟಿ ಭಾರತೀಯರು ಫೈನಲ್ ಕ್ಷಣವನ್ನ ತುದಿಗಾಲಿನ ಮೇಲೆ ನಿಂತು ಕಾಯುತ್ತಿದ್ದಾರೆ. ಇದರ ಮಧ್ಯೆ ಮದುವೆ ಮಂಟಪದಲ್ಲೇ ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಮ್ಯಾಚ್​ ಅನ್ನು ವಧು-ವರರು ವೀಕ್ಷಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ರಾಯಚೂರಿನಲ್ಲಿ.

ಹರ್ಷಿತಾ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಸಿರವಾರ ತಾಲೂಕಿನ ನುಗದೋಣಿ ಗ್ರಾಮದ ಹಳೆಮನಿ ಕುಟುಂಬದ ಹರ್ಷವರ್ಧನ್ ಹಾಗೂ ಸಹನಾ ಮದುವೆ ಸಮಾರಂಭದಲ್ಲಿ ಕ್ರಿಕೆಟ್ ಪಂದ್ಯ ನೋಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಧು-ವರರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಮದುವೆ ಮಂಟಪದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

ಹರ್ಷವರ್ಧನ್ ಹಾಗೂ ಸಹನಾ ಮದುವೆಗೆ ಬಂದಿರುವ ಬಂಧು ಮಿತ್ರರು ಎಲ್.ಇ.ಡಿ ದೊಡ್ಡ ಸ್ಕ್ರೀನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮದುವೆಗೆ ಬಂದವರು ನವ ವಧುವರರಿಗೆ ಶುಭಾಶಯ ತಿಳಿಸುವ ಜೊತೆಗೆ ಟೀಂ ಇಂಡಿಯಾಗೂ ಶುಭ ಹಾರೈಸುತ್ತಿದ್ದಾರೆ. ಈ‌ ನಡುವೆ ವಿಶ್ವಕಪ್ ಕ್ರಿಕೆಟ್​ನಲ್ಲಿ ಭಾರತ ತಂಡ ಆರಂಭಿಕ ಆಘಾತ ಪಡೆಯುತ್ತಿದ್ದಂತೆ ಇಡೀ ಮದುವೆ ಮನೆ ಸೈಲೆಂಟ್ ಆದ ಪ್ರಸಂಗ ಕೂಡ ನಡೆದಿದೆ. ಈ ಜೋಡಿ ಫೈನಲ್ ಪಂದ್ಯ ನೋಡಲು ಎಲ್ ಇಡಿ ಸ್ಕ್ರೀನ್ ಹಾಕಿಸಿ ಕ್ರಿಕೆಟ್ ಪ್ರೇಮ ಮೆರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮಂಟಪಕ್ಕೂ ತಟ್ಟಿದ ವಿಶ್ವಕಪ್ ಫೈನಲ್ ಫೀವರ್‌.. ವಧು-ವರರು ಮಾಡಿದ್ದೇನು?

https://newsfirstlive.com/wp-content/uploads/2023/11/2023-match-11.jpg

Load More