newsfirstkannada.com

ನಮೋ ಹೊಸ ದಾಳ, I.N.D.I.A ತಳಮಳ.. ವಿಪಕ್ಷಗಳಿಗೆ ಪ್ರಧಾನಿ ಮೋದಿ 10 ಸಂದೇಶ

Share :

27-07-2023

    ಗೊಂದಲದಲ್ಲಿರುವ ಮತಗಳ ಬೇಟೆಗೂ ಮೋದಿ ಹೊಸ ಅಸ್ತ್ರ

    ವಿಪಕ್ಷಗಳ ಕೂಟದ ನಿದ್ರೆಗೆ ಭಂಗ ತಂದ ಮೋದಿ ಅಸ್ತ್ರ

    ಜನಕ್ಕೆ ಮೂರನೇ ಟರ್ಮ್​​ನಲ್ಲಿ ‘ಮೋದಿ ಗ್ಯಾರಂಟಿ’ ವಾಗ್ದಾನ

ಯುದ್ಧಭೂಮಿಯಲ್ಲಿ ಕಾಂಗ್ರೆಸ್​​ ಉರುಳಿಸಿದ ಗ್ಯಾರಂಟಿ ಕಾರ್ಡ್​​ಗೆ ಬಿಜೆಪಿ ಹಿಡಿತದಲ್ಲಿದ್ದ ಎರಡು ರಾಜ್ಯಗಳ ಪತನವಾಗಿದೆ. ಕಾಂಗ್ರೆಸ್​ಗೆ ಗ್ಯಾರಂಟಿ ವರವಾಗಿ ಸಿಂಹಾಸನ ದಕ್ಕಿಸಿಕೊಂಡಿದೆ. ಇದೇ ಗ್ಯಾರಂಟಿ, ಬಿಜೆಪಿಯ ನೈತಿಕ ಬಲವನ್ನೇ ಕುಗ್ಗಿಸಿ ಹಾಕಿದೆ. ಈಗ ಬಿಜೆಪಿಗೂ ಗ್ಯಾರಂಟಿ ಅನಿವಾರ್ಯ ಆಗಿದೆ. ಗ್ಯಾರಂಟಿಗಳ ವಿರುದ್ಧ ಪ್ರಧಾನಿ ಮೋದಿ ಮಾತಿನ ದಾಳಿ ನಡೆಸಿದ್ರು. ಇದೀಗ ದೇಶದ ಜನಕ್ಕೆ ಗ್ಯಾರಂಟಿ ಒಂದರ ವಾಗ್ದಾನ ನೀಡಿದ್ದಾರೆ. ಇದೇ ವಾಗ್ದಾನ ನವಕೂಟವನ್ನ ಬೆಚ್ಚಿಬೀಳಿಸಿದೆ.

2024ರ ಲೋಕ ಕದನಕ್ಕೆ ವರ್ಷ ಸರಿದು ತಿಂಗಳ ಕ್ಯಾಲೆಂಡರ್​​​ನ ಹಾಳೆಗಳು ಹತ್ತಿರವಾಗ್ತಿವೆ. ಈಗಾಗ್ಲೇ ಎರಡು ಬದಿಯಲ್ಲೂ ತಮ್ಮ ಸೇನೆಗೆ ಮತ್ತಷ್ಟು ಬಲ ತುಂಬಿಕೊಳ್ಳಲು ಮೈತ್ರಿ ಮಂಥನಕ್ಕೆ ಜಾರಿವೆ. ಒಂದ್ಕಡೆ ಎನ್​ಡಿಎ, ಇನ್ನೊಂದ್ಕಡೆ ಹೊಸದಾಗಿ ಜನ್ಮತಾಳಿದ ಐಎನ್​ಡಿಐಎ ಅಂತಿಮ ಹಣಾಹಣಿಗೆ ಎದೆಗೊಡಲಿವೆ. ಇದೇ ಕಾರಣಕ್ಕೆ 2024ರ ಕದನ ಭೂಮಿ ರಣರೋಚಕ ಆಗಿಸಿದೆ. ಇದೇ ಹೊತ್ತಲ್ಲೇ ಮೋದಿ ಪ್ರಯೋಗಿಸಿದ ಅದೊಂದು ಅಸ್ತ್ರ ವಿಪಕ್ಷಗಳ ಕೂಟದ ನಿದ್ರೆಯನ್ನೆ ಕದ್ದಿದೆ.

ವಿಶ್ವದ ಮೊದಲ ಮೂರು ಆರ್ಥಿಕತೆಯಲ್ಲಿ ಭಾರತ!

ಪ್ರಧಾನಿ ಮೋದಿ ಶಬ್ಧ ಕದ್ರೂ ಉರುಳಿಸಿದ ದಾಳ ಮಾತ್ರ ಚಕಿತಗೊಳಿಸಿದೆ. ದೆಹಲಿಯ ಪ್ರಗತಿ ಮೈದಾನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ. ಭಾರತದ ದಿಗ್ಗಜ ಉದ್ಯಮಿಗಳು, ಸಾವಿರಾರು ಜನರ ಸಮ್ಮುಖದಲ್ಲಿ ಮೋದಿಯ ಆತ್ಮವಿಶ್ವಾಸದ ನುಡಿ, ರಾಜಕೀಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ನನ್ನ 3ನೇ ಅವಧಿಯಲ್ಲಿ ವಿಶ್ವದ ಮೊದಲ ಮೂರು ಆರ್ಥಿಕತೆಯ ರಾಷ್ಟ್ರಗಳ ಪೈಕಿ ಭಾರತವು ಒಂದಾಗಿರಲಿದೆ.. ಇದು ಮೋದಿಯ ಗ್ಯಾರಂಟಿ ಅಂತ ಸಂದೇಶ ಸಾರಿದ್ದಾರೆ.

ಟ್ರ್ಯಾಕ್​ ರೆಕಾರ್ಡ್​ನ ಆಧಾರದ ಮೇಲೆ ಹೇಳ್ತಿದ್ದೀನಿ. ನಾನು ದೇಶಕ್ಕೆ ಭರವಸೆ ನೀಡ್ತಿದ್ದೀನಿ. ಮೂರನೇ ಅವಧಿಯಲ್ಲಿ, ಮೂರನೇ ಅವಧಿಯಲ್ಲಿ ವಿಶ್ವದ ಮೊದಲ ಮೂರು ಆರ್ಥಿಕ ದೇಶಗಳಲ್ಲಿ ಒಂದು ಹೆಸರು ಭಾರತ ಆಗಿರಲಿದೆ. ಮೂರನೇ ಅವಧಿಯಲ್ಲಿ ಮೊದಲ ಮೂರು ಆರ್ಥಿಕ ದೇಶಗಳ ಪೈಕಿ ಗರ್ವದಿಂದ ಹಿಂದೂಸ್ತಾನ ಎದ್ದು ನಿಲ್ಲಲಿದೆ. 3ನೇ ಅವಧಿಯಲ್ಲಿ 3ನೇ ಸ್ಥಾನವನ್ನ ಭಾರತ ತಲುಪಲಿದೆ. ಇದು ಮೋದಿಯ ಗ್ಯಾರಂಟಿ.

– ನರೇಂದ್ರ ಮೋದಿ, ಪ್ರಧಾನಿ

ಮೊದಲ ಅವಧಿಯಲ್ಲಿ ಭಾರತ ವಿಶ್ವದ ಟಾಪ್ 10 ಆರ್ಥಿಕತೆಯ ರಾಷ್ಟ್ರಗಳ ಪೈಕಿ ಒಂದಾಗಿತ್ತು. 2ನೇ ಅವಧಿಯಲ್ಲಿ 5 ಆರ್ಥಿಕತೆಯ ರಾಷ್ಟ್ರಗಳ ಪೈಕಿ ಒಂದಾಗಿದೆ. 3ನೇ ಅವಧಿಯಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯ ರಾಷ್ಟ್ರಗಳ ಪೈಕಿ ಒಂದಾಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಆಡಿದ ಒಂದೇ ಹೇಳಿಕೆಯಲ್ಲಿ ಹಲವು ನಿಗೂಢ ಲೆಕ್ಕಾಚಾರಗಳು ಅಡಗಿವೆ.. ಇದನ್ನ ಆರ್ಥಿಕವಾಗಿ ಮಾತ್ರ ಗಮನಿಸದೆ ರಾಜಕೀಯವಾಗಿಯೂ ನೋಡಬೇಕಿದೆ.

ನಮೋ ದಾಳ.. I.N.D.I.A ತಳಮಳ..!

  • ಸಂದೇಶ 1 : ಭಾರತದ ಆರ್ಥಿಕತೆ ವೃದ್ಧಿಸುವ ಭರವಸೆ
  • ಸಂದೇಶ 2 : ಮೋದಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ
  • ಸಂದೇಶ 3 : 9 ವರ್ಷಗಳಲ್ಲಿ ಅಸಾಧಾರಣ ಬೆಳವಣಿಗೆ
  • ಸಂದೇಶ 4 : ದೇಶದ ಎಲ್ಲಾ ಪ್ರದೇಶಕ್ಕೂ ಅಭಿವೃದ್ಧಿ ಗತಿ
  • ಸಂದೇಶ 5 : ವಿಪಕ್ಷದಿಂದ ದೇಶದ ಅಭಿವೃದ್ಧಿಗೆ ಅಡ್ಡಗಾಲು
  • ಸಂದೇಶ 6 : ಮೂರನೇ ಅವಧಿಗೂ ತನ್ನದೇ ಸರ್ಕಾರ
  • ಸಂದೇಶ 7 : ವಿಪಕ್ಷಗಳ ಆತ್ಮಸ್ಥೈರ್ಯ ಕುಗ್ಗಿಸುವ ಹೇಳಿಕೆ
  • ಸಂದೇಶ 8 : INDIA ಕೂಟದಿಂದ ಕೆಲವರು ಅಂತರ
  • ಸಂದೇಶ 9 : 3ನೇ ಅವಧಿಯಲ್ಲಿ ನಾಯಕತ್ವ ಬದಲಿಲ್ಲ
  • ಸಂದೇಶ 10 : ಗೊಂದಲದಲ್ಲಿರುವ ಮತಗಳ ಶಿಕಾರಿ!

ಒಟ್ಟಾರೆ, ಮೋದಿ ಆಡಿದ ಒಂದು ಮಾತು, ಹತ್ತಾರು ಸಂದೇಶಗಳನ್ನ ದಾಟಿಸಿದೆ.. ಈ ಮೂಲಕ 2024ರ ಚುನಾವಣೆಗೆ ಇದೇ ವೇದಿಕೆ ಮೂಲಕ ಕಹಳೆ ಮೊಳಗಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮೋ ಹೊಸ ದಾಳ, I.N.D.I.A ತಳಮಳ.. ವಿಪಕ್ಷಗಳಿಗೆ ಪ್ರಧಾನಿ ಮೋದಿ 10 ಸಂದೇಶ

https://newsfirstlive.com/wp-content/uploads/2023/07/PM_MODI-1-1.jpg

Load More