newsfirstkannada.com

VIDEO: ನನ್ನ ನಂತ್ರ ಕೆಪಿಸಿಸಿ ಅಧ್ಯಕ್ಷ ಯಾರಾಗ್ತಾರೆ ಅಂದ್ರೆ.. ಸದನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕಣ್ಣೀರು

Share :

03-07-2023

    ಆ ಪ್ರಶ್ನೆ ಬಂದಾಗಲೆಲ್ಲಾ ನನ್ನ ಮನಸಲ್ಲಿ ಇದ್ದಿದ್ದು ಅವರು ಮಾತ್ರ

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅವರ ಜೊತೆ ಒಮ್ಮೆ ಮಾತಾಡಿದ್ದೆ

    ಸದನದಲ್ಲಿ ಸಂತಾಪ ಸೂಚನೆ ವೇಳೆ ಡಿ.ಕೆ ಶಿವಕುಮಾರ್ ಕಣ್ಣೀರು

ವಿಧಾನಸಭಾ ಅಧಿವೇಶನದ ಸಂತಾಪ ಸೂಚನೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಚಾಮರಾಜನಗರ ಜಿಲ್ಲೆಯ ಮಾಜಿ ಸಂಸದ, ಕಾಂಗ್ರೆಸ್ ನಾಯಕ ದಿವಂಗತ ಆರ್‌. ಧ್ರುವನಾರಾಯಣ ಅವರನ್ನು ಸ್ಮರಿಸಿಕೊಳ್ಳುವ ವೇಳೆ ಡಿಕೆ ಶಿವಕುಮಾರ್ ಭಾವುಕರಾಗಿದ್ದಾರೆ.

ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಇಂದು ಅಗಲಿದ ನಾಡಿನ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ದಿವಂಗತ ಆರ್‌. ಧ್ರುವನಾರಾಯಣ ಅವರ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನನ್ನ ನಂತರ ಯಾರು ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಯಾರಾಗ್ತಾರೆ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆ ಬಂದಾಗಲೆಲ್ಲಾ ನನ್ನ ಮನಸಲ್ಲಿ ಇದ್ದಿದ್ದು ಧ್ರುವನಾರಾಯಣ ಅವರ ಹೆಸರು ಮಾತ್ರ. ನನ್ನ ನಂತರ ಧ್ರುವನಾರಾಯಣ ಅವರನ್ನೇ ಅಧ್ಯಕ್ಷರಾಗಿ ಮಾಡ್ತಿದ್ದೆ ಎಂದ ಹೇಳಿದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜಂಜಾಟದ ಬಗ್ಗೆ ಧ್ರುವನಾರಾಯಣ ಅವರ ಜೊತೆ ಒಮ್ಮೆ ಮಾತಾಡಿದ್ದೆ. ಅವರು ನಮ್ಮೊಂದಿಗೆ ಇದ್ದಿದ್ದರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಆಕಾಂಕ್ಷೆ ಇತ್ತು. ಇವತ್ತು ಅವರಿದ್ದಿದ್ರೆ ಕ್ಯಾಬಿನೆಟ್ ಸಚಿವ ಆಗುವುದನ್ನ ಯಾರೂ ತಪ್ಪಿಸೋಕೆ ಆಗ್ತಿರಲಿಲ್ಲ ಎಂದು ಹೇಳಿದ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ಅಪಾರ ಬೆಂಬಲಿಗ ಬಳಗವನ್ನು ಅಗಲಿ ಹೋಗಿರುವ ಕಾಂಗ್ರೆಸ್ ನಾಯಕ ಧ್ರುವ ನಾರಾಯಣ್ ಅವರನ್ನು ಸ್ಮರಿಸುತ್ತಾ ಗದ್ಗದಿತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನನ್ನ ನಂತ್ರ ಕೆಪಿಸಿಸಿ ಅಧ್ಯಕ್ಷ ಯಾರಾಗ್ತಾರೆ ಅಂದ್ರೆ.. ಸದನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕಣ್ಣೀರು

https://newsfirstlive.com/wp-content/uploads/2023/07/Dk-Shivakumar-3.jpg

Load More