newsfirstkannada.com

BREAKING: ನಟ ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ; ಕೋರ್ಟ್‌ ಮಹತ್ವದ ಆದೇಶ

Share :

Published June 20, 2024 at 5:05pm

Update June 20, 2024 at 5:09pm

    A1 ಪವಿತ್ರಗೌಡ, A3 ಪವನ್‌ ಅವರು ಪರಪ್ಪನ ಅಗ್ರಹಾರ ಪಾಲು

    A2 ದರ್ಶನ್ ಸೇರಿ 6 ಮಂದಿ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಮನವಿ

    ಕೋರ್ಟ್‌ ಕಟಕಟೆಗೆ ಹಾಜರಾದ ರೇಣುಕಾಸ್ವಾಮಿ ಕೊಲೆ ಆರೋಪಿಗಳು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೋರ್ಟ್ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದೆ. ಕೊಲೆ ಆರೋಪ ಎದುರಿಸುತ್ತಿರುವ ಆರೋಪಿಗಳಲ್ಲಿ A2 – ದರ್ಶನ್, A10 – ವಿನಯ್, A14 – ಪ್ರದೂಶ್, A11 – ನಾಗರಾಜ್, ಧನರಾಜ್, ವಿನಯ್ & ಪ್ರದೂಶ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪೊಲೀಸ್‌ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನ ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ ಕಟಕಟೆಗೆ ಹಾಜರಾದ ಆರೋಪಿಗಳನ್ನ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡ ಅವರು ವಿಚಾರಣೆ ನಡೆಸಿದರು.

ಇದನ್ನೂ ಓದಿ: ‘ದರ್ಶನ್​ ಪರ ಯಾರು ಮಾತಾಡಬಾರ್ದು’- ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್​​! 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಪವಿತ್ರಗೌಡ ಹಾಗೂ A3 ಪವನ್‌ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು. ನಂತರ A2 ಆರೋಪಿ ದರ್ಶನ್ ಸೇರಿ 6 ಮಂದಿಯನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಕೊಲೆ ಆರೋಪ ಇರುವ ಆರೋಪಿಗಳಾದ ದರ್ಶನ್, ವಿನಯ್, ಪ್ರದೂಶ್, ನಾಗರಾಜ, ಲಕ್ಷ್ಮಣ್ & ಧನರಾಜ್ ಅವರನ್ನು ಕಸ್ಟಡಿಗೆ ಕೇಳಲಾಯಿತು.

6 ಮಂದಿ ಬಿಟ್ಟು ಉಳಿದವರಿಗೆ ಜೈಲು?
ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಸ್ಯಾಂಪಲ್ ಅನ್ನು FSLಗೆ ಕಳುಹಿಸಲಾಗಿದೆ. ಅದರ ರಿಪೋರ್ಟ್ ಇನ್ನೂ ಬರಬೇಕಿದೆ. ಅದರ ಆಧಾರದ ಮೇಲೆ ವಿಚಾರಣೆಯು ಬಾಕಿ ಇದೆ. ಹೀಗಾಗಿ ದರ್ಶನ್, ವಿನಯ್, ಪ್ರದೂಶ್ , ನಾಗರಾಜ, ಲಕ್ಷ್ಮಣ್ & ಧನರಾಜ್ ಅವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ನಟ ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ; ಕೋರ್ಟ್‌ ಮಹತ್ವದ ಆದೇಶ

https://newsfirstlive.com/wp-content/uploads/2024/06/darshan28.jpg

Load More