newsfirstkannada.com

ರಾಜ್ಯಾಧ್ಯಕ್ಷ ರೇಸ್‌ನಲ್ಲಿ ಸಿ.ಟಿ. ರವಿ.. ಹೈಕಮಾಂಡ್ ನಾಯಕರಿಂದ ದೆಹಲಿಗೆ ಬುಲಾವ್

Share :

31-07-2023

  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ನಾಯಕರ ಮಾತುಕತೆ

  ಇವತ್ತು ದೆಹಲಿ ಭೇಟಿ.. ‘ಕೇಸರಿ’ ಕ್ಯಾಪ್ಟನ್ ಆಗ್ತಾರಾ ರವಿ?

  ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ಆಯ್ಕೆ ಎಂದ ಬೊಮ್ಮಾಯಿ

ಕರ್ನಾಟಕದಲ್ಲಿ ನಳನಳಿಸುತ್ತಿದ್ದ ಕಮಲವೀಗ ವಿಧಾನಸಭಾ ಕದನದಲ್ಲಿ ಮುದುಡಿ ಹೋಗಿದೆ. ಇದೀಗ ಮುದುಡಿರೋ ಕಮಲ ಪಾಳಯಕ್ಕೆ ಜಯದ ಸೋಪಾನ ಕಟ್ಟಲು ಕಟ್ಟಾಳುವಿನ ಅಗತ್ಯವಿದೆ. ಜೊತೆಗೆ ಕೇಸರಿ ಸೇನೆಗೆ ಹೊಸ ಹುಮ್ಮಸ್ಸು ತುಂಬಲು ಯಂಗ್ ಅಂಡ್ ಎನರ್ಜಿಟಿಕ್ ಕ್ಯಾಪ್ಟನ್ ಬೇಕಿದೆ. ಈ ಹೊತ್ತಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ಗೆ ಸಿ.ಟಿ. ರವಿ ಹೆಸರು ಎಂಟ್ರಿಯಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಸಿ.ಟಿ. ರವಿ ದೆಹಲಿಯಾತ್ರೆ ಕೈಗೊಂಡಿದ್ದಾರೆ.

ರಾಜ್ಯ ಕೇಸರಿ ಪಾಳಯದಲ್ಲಿ ವಿಪಕ್ಷ ನಾಯಕನ ಸ್ಥಾನ ಖಾಲಿ ಇದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದ್ದೂ ಇಲ್ಲದಂತಾಗಿದೆ. ಒಂದ್ಕೆಡೆ ವಿರೋಧ ಪಕ್ಷದ ನಾಯಕನ ರೇಸ್‌ ನಡೀತಿದ್ರೆ. ಮತ್ತೊಂದೆಡೆ ಕೇಸರಿ ಕ್ಯಾಪ್ಟನ್ ಆಗಲು ಯುವಪಡೆ ತುದಿಗಾಲಲ್ಲಿ ನಿಂತಿದೆ. ಈ ಹೊತ್ತಲ್ಲಿ ರಾಜಕೀಯ ಚದುರಂಗದಾಟದಲ್ಲಿ ಸಿ.ಟಿ. ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಎಂಬ ಗುಮಾನಿ ಎದ್ದಿದೆ. ಕಟ್ಟಾ ಬಿಜೆಪಿ ನಾಯಕ ಸಿಟಿ ರವಿಗೆ ಕ್ಯಾಪ್ಟನ್‌ ಹುದ್ದೆ ನೀಡಲಾಗ್ತಿದೆ ಎಂಬ ಚರ್ಚೆ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ನಡೀತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ಗೆ ಎಂಟ್ರಿ ಕೊಟ್ಟ ಸಿ.ಟಿ. ರವಿ

ಕರ್ನಾಟಕದಿಂದ ಏಕೈಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಸಿ.ಟಿ ರವಿ. ಆದರೀಗ ಅವರನ್ನೂ ಈ ಹುದ್ದೆಯಿಂದ ಕೈಬಿಡಲಾಗಿದೆ. ಹೀಗಾಗಿ ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳೀನ್‌ ಕುಮಾರ್‌ ಕಟೀಲ್‌ ಸ್ಥಾನಕ್ಕೆ ಸಿ.ಟಿ ರವಿಯನ್ನ ತಂದು ಕೂಡಿಸುವ ಬಯಕೆಯನ್ನ ಬಿಜೆಪಿ ರಾಷ್ಟ್ರೀಯ ನಾಯಕರು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಇವತ್ತು ಸಿ.ಟಿ. ರವಿಗೆ ಹೈಕಮಾಂಡ್ ನಾಯಕರು ದೆಹಲಿಗೆ ಬುಲಾವ್ ಕೊಟ್ಟಿದ್ದಾರೆ. ಇದು ಸಿ.ಟಿ ರವಿಯನ್ನ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವುದು ಬಹುತೇಕ ಪಕ್ಕಾ ಅಂತಾ ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಆಗ್ತಾರಾ ರವಿ?

ಬಿಜೆಪಿ ನಾಯಕ ಸಿ.ಟಿ. ರವಿ ಇವತ್ತು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಇವತ್ತು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಸಂಘಟನಾ ನಾಯಕರನ್ನ ರವಿ ಭೇಟಿ ಮಾಡಲಿದ್ದಾರೆ. ಈಗಾಗಲೇ ಸಿ.ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ರೇಸ್​​ನಲ್ಲಿದ್ದು, ಈ ಸ್ಥಾನದ ಬಗ್ಗೆಯೂ ಹೈ ನಾಯಕರು ರವಿ ಜೊತೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ಅಥವಾ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುವ ಬಗ್ಗೆಯೂ ಹೈಕಮಾಂಡ್ ಲೆವೆಲ್ನಲ್ಲಿ ಚರ್ಚೆಯಾಗೋ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ಸಿ.ಟಿ ರವಿಗೆ ದೊಡ್ಡ ಸ್ಥಾನ ನೀಡುವ ಸಾಧ್ಯತೆ ಇದ್ದು, ಹೈ ನಾಯಕರ ಭೇಟಿ ಭಾರೀ ಕುತೂಹಲ ಮೂಡಿಸಿದೆ.

ರಾಜ್ಯಾಧ್ಯಕ್ಷ ಹುದ್ದೆ ಕೇಳಿ ಪಡೆಯೋದಲ್ಲ ಎಂದ ರವಿ

ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ಬಗ್ಗೆ ಮಾತನಾಡಿರೋ ಮಾಜಿ ಸಚಿವ ಸಿ.ಟಿ. ರವಿ, 35 ವರ್ಷಗಳಿಂದ ನನ್ನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಯಡಿಯೂರಪ್ಪನವರ ಆಶೀರ್ವಾದ ಇದೆ ಅಂತ ಮಾರ್ಮಿಕವಾಗಿ ನುಡಿದಿದ್ದಾರೆ. ಜೊತೆಗೆ ರಾಜ್ಯಾಧ್ಯಕ್ಷ ಹುದ್ದೆಯನ್ನ ಕೇಳಿಪಡೆಯೋದಲ್ಲ ಅಂತಲೂ ಹೇಳಿದ್ದಾರೆ.

ಕೇಸರಿ ಕ್ಯಾಪ್ಟನ್ ಬಗ್ಗೆ ಮಾತನಾಡಿರೋ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಬಿಜೆಿಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಒಟ್ಟಾರೆ, ಸಿ.ಟಿ.ರವಿ ಇವತ್ತು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಗುಡ್ನ್ಯೂಸ್ನೊಂದಿಗೆ ಮರಳುತ್ತಾರಾ.. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೇರಲಿದ್ದಾರೆ ಎಂಬ ಸುದ್ದಿ ನಿಜವಾಗುತ್ತಾ ಎಂಬ ಕುತೂಹಲ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಾಧ್ಯಕ್ಷ ರೇಸ್‌ನಲ್ಲಿ ಸಿ.ಟಿ. ರವಿ.. ಹೈಕಮಾಂಡ್ ನಾಯಕರಿಂದ ದೆಹಲಿಗೆ ಬುಲಾವ್

https://newsfirstlive.com/wp-content/uploads/2023/07/C-T-Ravi.jpg

Load More