newsfirstkannada.com

ಹೆಂಡತಿಗೆ ಮೊಬೈಲ್‌, ರೀಲ್ಸ್ ಹುಚ್ಚು.. ಕೊಲೆ ಮಾಡಿ ಮನೆಯಲ್ಲೇ ಕೂತಿದ್ದ ಗಂಡ; ಆಮೇಲೇನಾಯ್ತು?

Share :

Published August 23, 2024 at 2:00pm

    ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಪತಿಯಿಂದ ಪತ್ನಿಯ ಬರ್ಬರ ಹತ್ಯೆ

    ಬಾಡಿಗೆ ಮನೆಯಲ್ಲಿ ವಾಸವಿದ್ದ ಗಂಡ, ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ

    ದೇವಸ್ಥಾನದಲ್ಲಿ 2 ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ ಆರೋಪಿ ಗಂಡ

ಉಡುಪಿ: ಬೆಳ್ಳಂಬೆಳಗ್ಗೆ ಪತಿಯಿಂದ ಪತ್ನಿಯ ಬರ್ಬರ ಹತ್ಯೆಯಾಗಿರೋ ದಾರುಣ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯಶ್ರೀ (31) ಹತ್ಯೆಗೊಳಗಾದವರು. ಜಯಶ್ರೀ ಗಂಡ ತನ್ನ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕಿರಣ್ ಉಪಾಧ್ಯ ಹಾಗೂ ಜಯಶ್ರೀ ದಂಪತಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಂದು ಮುಂಜಾನೆ ಪತಿ ಕಿರಣ್ ಉಪಾಧ್ಯರಿಂದ ಪತ್ನಿ ಜಯಶ್ರೀಯ ಹತ್ಯೆ ನಡೆದಿದೆ.

ಹೆಂಡತಿಯ ಹತ್ಯೆ ಮಾಡಿ ಮನೆಯಲ್ಲೇ ಕೂತಿದ್ದ ಪತಿ ಕಿರಣ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್‌ ನಡೆದಿದ್ದೇ ರೋಚಕ!

ಮೃತ ಜಯಶ್ರೀ ಅವರು ಬೀದರ್ ಜಿಲ್ಲೆಯ ದೊಣಗಪುರ ಮೂಲದವರು. ಜಯಶ್ರೀ ಪತಿ ಕಿರಣ್, ಗುರು ನರಸಿಂಹ ದೇವಸ್ಥಾನದಲ್ಲಿ ಕಳೆದ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ. ಕಳೆದ 2-3 ತಿಂಗಳ ಹಿಂದೆ ತಾರನಾಥ್ ಅವರ ಮನೆ ಬಾಡಿಗೆಗೆ ಪಡೆದಿದ್ದ.

ಇದನ್ನೂ ಓದಿ: Breaking: ನದಿಗೆ ಬಿದ್ದ 40 ಪ್ರಯಾಣಿಕರಿದ್ದ ಬಸ್; ಭಾರೀ ದುರಂತದ ಆತಂಕ 

ಹೆಂಡತಿಗೆ ಮೊಬೈಲ್‌, ರೀಲ್ಸ್ ಹುಚ್ಚು!
ಮೃತ ಜಯಶ್ರೀ ಸದಾ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದರಂತೆ. ರೀಲ್ಸ್ ಮಾಡೋ ಹುಚ್ಚು ಇದ್ದ ಜಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದರು. ಪತ್ನಿಯ ಈ ಮೊಬೈಲ್‌ ಗೀಳು ಪತಿ, ಪತ್ನಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಗಂಡ, ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿರೋ ಅನುಮಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿಗೆ ಮೊಬೈಲ್‌, ರೀಲ್ಸ್ ಹುಚ್ಚು.. ಕೊಲೆ ಮಾಡಿ ಮನೆಯಲ್ಲೇ ಕೂತಿದ್ದ ಗಂಡ; ಆಮೇಲೇನಾಯ್ತು?

https://newsfirstlive.com/wp-content/uploads/2024/08/Udupi-Reels-Wife-husband.jpg

Load More