newsfirstkannada.com

ಪ್ರಿನ್ಸಿಪಾಲ್ ಕುರ್ಚಿಗಾಗಿ ಕಿತ್ತಾಟ.. ಶಾಲೆಯಲ್ಲಿ ಇಬ್ಬರ ಜಗಳದ ಬಳಿಕ ನಡೆದಿದ್ದೇನು? ವಿಡಿಯೋ ವೈರಲ್‌!

Share :

Published July 5, 2024 at 8:12pm

Update July 5, 2024 at 8:13pm

    ಬಿಷಪ್ ಜಾನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಹೈಡ್ರಾಮಾ!

    ಹಾಲಿ ಪ್ರಿನ್ಸಿಪಲ್‌ ಕುರ್ಚಿ ಬಿಟ್ಟು ಕೊಡಲು ಪಟ್ಟು ಹಿಡಿದ ಜನರು

    ಮತ್ತೊಬ್ಬರನ್ನು ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕೂರಿಸಲು ಹರಸಾಹಸ

ಸಾಮಾನ್ಯವಾಗಿ ಮ್ಯೂಸಿಕಲ್ ಚೇರ್‌ ಆಟ ಆಡುವ ಮಕ್ಕಳು ಕುರ್ಚಿಗಾಗಿ ಕಿತ್ತಾಡುತ್ತಾರೆ. ಅದು ಬಿಟ್ರೆ ಅಧಿಕಾರಕ್ಕಾಗಿ ಹಪಹಪಿಸುವ ರಾಜಕೀಯ ಮುಖಂಡರು ಕುರ್ಚಿಗಾಗಿ ಕಿತ್ತಾಡೋದು ಸಹಜ. ಆದರೆ ಮಕ್ಕಳಿಗೆ ತಿದ್ದಿ, ಬುದ್ದಿ ಹೇಳುವ ಪ್ರಿನ್ಸಿಪಾಲ್‌ ಕುರ್ಚಿಗಾಗಿ ಜಗಳ ಆಡೋದನ್ನ ನೋಡೋದು ಬಹಳ ಅಪರೂಪ.

ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ಇಂತಹದೊಂದು ಹೈಡ್ರಾಮಾವೇ ನಡೆದಿದೆ. ಬಿಷಪ್ ಜಾನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಹಾಲಿ ಪ್ರಿನ್ಸಿಪಲ್‌ ಕುರ್ಚಿ ಬಿಟ್ಟು ಕೊಡಲು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಕೆಲಸದ ಒತ್ತಡಕ್ಕೆ ಬೇಸತ್ತು ಸೂಸೈಡ್​ ಮಾಡಿಕೊಂಡ ರೋಬೋಟ್​​! ಜಗತ್ತನ್ನೇ ಬೆಚ್ಚಿಬೀಳಿಸೋ ಘಟನೆ! 

ಸ್ಕೂಲ್‌ ಒಳಗೆ ನುಗ್ಗಿದ ಜನರು ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕುಳಿತಿದ್ದವರನ್ನು ಕುರ್ಚಿ ಸಮೇತ ಹೊರಗೆ ತಳ್ಳಿದ್ದಾರೆ. ಬಳಿಕ ಮತ್ತೊಬ್ಬರನ್ನು ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕೂರಿಸಿ ಪ್ರಿನ್ಸಿಪಾಲ್ ಬದಲಾವಣೆ ಮಾಡಿದ್ದಾರೆ. ಹೀಗೆ ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಬೇರೊಬ್ಬರನ್ನು ಕೂರಿಸಲು ಹೈಡ್ರಾಮಾವೇ ನಡೆದಿದೆ.

ರೊಚ್ಚಿಗೆದ್ದ ಜನರು ಹಾಲಿ ಇದ್ದ ಮಹಿಳಾ ಪ್ರಿನ್ಸಿಪಾಲ್‌ಗೆ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಅವಕಾಶ ಕೊಟ್ಟಿಲ್ಲ. ಪ್ರಿನ್ಸಿಪಾಲ್ ಮೊಬೈಲ್ ಅನ್ನು ಕಿತ್ತುಕೊಂಡ ಹೊಸ ಪ್ರಿನ್ಸಿಪಾಲ್‌ಗೆ ಕುರ್ಚಿ ಮೇಲೆ ಕೂರುವಂತೆ ಮಾಡಿದ್ದಾರೆ. ಮ್ಯೂಸಿಕ್ ಚೇರ್‌ನಂತಾದ ಪ್ರಿನ್ಸಿಪಾಲ್ ಕುರ್ಚಿ ಕದನ ಸಾಕಷ್ಟು ಚರ್ಚೆಯಾಗಿದೆ.

ಪ್ರಯಾಗ್‌ರಾಜ್‌ ಸ್ಕೂಲ್ ಪ್ರಿನ್ಸಿಪಾಲ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿತ್ತು. ಜನರು ಕಚೇರಿಗೆ ನುಗ್ಗಿ ಕುರ್ಚಿ ಬಿಟ್ಟುಕೊಡುವಂತೆ ಗಲಾಟೆ ಮಾಡಿದ್ದಾರೆ. ಆದರೆ ಕುರ್ಚಿ ಬಿಟ್ಟುಕೊಡಲು ಹಾಲಿ ಪ್ರಿನ್ಸಿಪಾಲ್ ನಿರಾಕರಿಸಿದ್ದರಿಂದ ಇಷ್ಟೊಂದು ಹೈಡ್ರಾಮಾ ನಡೆದಿದೆ. ಬಲವಂತವಾಗಿ ಕುರ್ಚಿ ಖಾಲಿ ಮಾಡಿಸಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿನ್ಸಿಪಾಲ್ ಕುರ್ಚಿಗಾಗಿ ಕಿತ್ತಾಟ.. ಶಾಲೆಯಲ್ಲಿ ಇಬ್ಬರ ಜಗಳದ ಬಳಿಕ ನಡೆದಿದ್ದೇನು? ವಿಡಿಯೋ ವೈರಲ್‌!

https://newsfirstlive.com/wp-content/uploads/2024/07/Uttar-pradesh-Principal-Chair.jpg

Load More