newsfirstkannada.com

VIDEO: 9 ದಿನಗಳ ಬಳಿಕ ಬಿಸಿ ಊಟ, ಮೊಬೈಲ್‌.. 41 ಕಾರ್ಮಿಕರ ಜೀವ ಉಳಿಸೋ ಕಾರ್ಯಾಚರಣೆ ಈಗ ಹೇಗಿದೆ?

Share :

21-11-2023

    9 ದಿನಗಳ ರಕ್ಷಣಾ ಕಾರ್ಯದಲ್ಲಿ ಇದು ಮೊಟ್ಟ ಮೊದಲ ಯಶಸ್ಸು

    6 ಇಂಚಿನ ಪೈಪ್‌ನಲ್ಲಿ ಖಿಚಡಿ, ದಾಲ್, ಮೂಸಂಬಿ, ಆ್ಯಪಲ್ ರವಾನೆ

    ಆಹಾರ ಪದಾರ್ಥಗಳನ್ನು ಸುರಂಗದೊಳಗೆ ಕಳುಹಿಸಿದ ರಕ್ಷಣಾ ಪಡೆ

ಉತ್ತರಖಾಂಡ್‌ನ ಸುರಂಗದಲ್ಲಿ ಸಿಲುಕಿರೋ 41 ಕಾರ್ಮಿಕರ ಜೀವ ಉಳಿಸೋ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಉತ್ತರಕಾಶಿ ಸುರಂಗ ಕಾಮಗಾರಿ ಸ್ಥಳದಲ್ಲಿ ಅತ್ಯಾಧುನಿಕ ತಜ್ಞರ ತಂಡ ಬೀಡು ಬಿಟ್ಟಿದೆ. ಸತತ 9 ದಿನಗಳ ರಕ್ಷಣಾ ಕಾರ್ಯದ ಬಳಿಕ ಇದೇ ಮೊದಲ ಬಾರಿಗೆ ಸುರಂಗದಲ್ಲಿರೋ ಕಾರ್ಮಿಕರಿಗೆ ಬಿಸಿ ಊಟ, ಆಹಾರ ಪದಾರ್ಥಗಳನ್ನು ತಲುಪಿಸಲಾಗಿದೆ.

ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ 53 ಮೀಟರ್ ಪೈಪ್‌ ಅನ್ನ ಕಾರ್ಮಿಕರು ಸಿಲುಕಿರುವ ಜಾಗಕ್ಕೆ ಕಳುಹಿಸಲಾಗಿದೆ. ಆ ಪೈಪ್‌ನಲ್ಲಿ ಮತ್ತೊಂದು 6 ಇಂಚಿನ ಪೈಪ್‌ ಹಾಕಲಾಗಿದೆ. 6 ಇಂಚಿನ ಪೈಪ್‌ನಲ್ಲಿ ಖಿಚಡಿ, ದಾಲ್, ಮೂಸಂಬಿ, ಆ್ಯಪಲ್, ಮೊಬೈಲ್, ಮೊಬೈಲ್ ಚಾರ್ಜರ್‌ಗಳನ್ನು ಕಳುಹಿಸಲಾಗಿದೆ. ನಿನ್ನೆ ರಾತ್ರಿ ಕಾರ್ಮಿಕರಿಗೆ ತಲುಪಿಸಲು ಖಿಚಡಿ, ದಾಲ್ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ಯಾಕ್ ಮಾಡುವ ದೃಶ್ಯಗಳು ಕೂಡ ಕಂಡುಬಂತು.

ಸುರಂಗ ಮಾರ್ಗ ಕುಸಿದು ಅವಶೇಷಗಳ ಮಧ್ಯೆ ಸಿಲುಕಿಕೊಂಡಿರುವ 41 ಕಾರ್ಮಿಕರನ್ನು ತಲುಪೋದಕ್ಕೆ ಹಲವಾರು ಪ್ರಯತ್ನಗಳನ್ನ ಮಾಡಲಾಗ್ತಿದೆ. 9 ದಿನಗಳ ರಕ್ಷಣಾ ಕಾರ್ಯದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಯಶಸ್ಸು ಸಿಕ್ಕಿದೆ. ಆದರೂ 3 ದಿಕ್ಕಿನಿಂದ ಸುರಂಗ ಕೊರೆಯುವ ಕಾರ್ಯ ಮುಂದುವರಿದಿದೆ. ಸುರಂಗದೊಳಗೆ 20 ಕೆಜಿ ಮತ್ತು 50 ಕೆಜಿ ತೂಕದ ಡಿಆರ್‌ಡಿಒ 2 ರೋಬೋಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಇನ್ನೊಂದ್ಕಡೆ ಪ್ರಧಾನಿ ನರೇಂದ್ರ ಮೋದಿ ಅವ್ರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: 9 ದಿನಗಳ ಬಳಿಕ ಬಿಸಿ ಊಟ, ಮೊಬೈಲ್‌.. 41 ಕಾರ್ಮಿಕರ ಜೀವ ಉಳಿಸೋ ಕಾರ್ಯಾಚರಣೆ ಈಗ ಹೇಗಿದೆ?

https://newsfirstlive.com/wp-content/uploads/2023/11/Uttarakhand-Tunnel.jpg

Load More