/newsfirstlive-kannada/media/post_attachments/wp-content/uploads/2024/11/K-L-RAHUL-3.jpg)
ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಕೆ.ಎಲ್.ರಾಹುಲ್​.. ಪರ್ತ್​ ಟೆಸ್ಟ್​ನಲ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಆದ್ರೆ, ಕೆ.ಎಲ್.ರಾಹುಲ್​​ಗೆ ಈ ಸ್ಲಾಟ್ ಸೂಕ್ತನಾ ಎಂಬ ಪ್ರಶ್ನೆ ಕಾಡ್ತಿದೆ. ಆರಂಭಿಕನಾಗಿ ಕೆ.ಎಲ್.ರಾಹುಲ್​​ ಯಶಸ್ಸನ್ನು ಕಂಡಿದ್ದರೂ, ಕಳೆದ ಕೆಲ ವರ್ಷಗಳಿಂದ ರಾಹುಲ್​​​, ಬ್ಯಾಟಿಂಗ್ ಸ್ಲಾಟ್​​​​​​​​​ನಲ್ಲಿ ಏರಿಳಿತಗಳು ಆಗ್ತಾನೇ ಇದೆ. ಹೀಗಾಗಿ ಪರ್ತ್ ಟೆಸ್ಟ್​ನಲ್ಲಿ ಓಪನರ್ ಆಗಿ ಆಡಲು ಕಷ್ಟ ಸಾಧ್ಯ ಎನ್ನಲಾಗ್ತಿದೆ.
/newsfirstlive-kannada/media/post_attachments/wp-content/uploads/2024/11/K-L-RAHUL-1.jpg)
ಆರಂಭಿಕನಾಗಿ 75 ಇನ್ನಿಂಗ್ಸ್​ಗಳನ್ನಾಡಿರುವ ಕೆ.ಎಲ್.ರಾಹುಲ್, 34.95ರ ಬ್ಯಾಟಿಂಗ್ ಅವರೇಜ್​ನಲ್ಲಿ 2551 ರನ್​​​​​​​​ ಗಳಿಸಿದ್ದಾರೆ. 7 ಶತಕ ಸಿಡಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡಿರುವ 5 ಇನ್ನಿಂಗ್ಸ್​ನಿಂದ 17.6ರ ಅವರೇಜ್​ನಲ್ಲಿ 88 ರನ್ ಗಳಿಸಿರುವ ರಾಹುಲ್​​​​​​​​​​​​​​, 4ನೇ ಕ್ರಮಾಂಕದಲ್ಲಿ ಆಡಿದ 2 ಇನ್ನಿಂಗ್ಸ್​ಗಳಿಂದ 54ರ ಬ್ಯಾಟಿಂಗ್ ಅವರೇಜ್​ನಲ್ಲಿ 108 ರನ್ ಗಳಿಸಿದ್ದಾರೆ. ಇನ್ನು 6ನೇ ಕ್ರಮಾಂಕದಲ್ಲಿ 9 ಇನ್ನಿಂಗ್ಸ್​ಗಳಿಂದ 234 ರನ್ ಗಳಿಸಿರುವ ರಾಹುಲ್, 29.25ರ ಬ್ಯಾಟಿಂಗ್ ಅವರೇಜ್​ ಹೊಂದಿದ್ದಾರೆ. 1 ಶತಕ ಸಿಡಿಸಿದ್ದಾರೆ.
ಉಳಿದೆಲ್ಲಾ ಕ್ರಮಾಂಕಕ್ಕಿಂತ ಆರಂಭಿಕನಾಗಿ ಕೆ.ಎಲ್.ರಾಹುಲ್, ಅತಿ ಹೆಚ್ಚು ಇನ್ನಿಂಗ್ಸ್​ಗಳನ್ನೇ ಆಡಿದ್ದಾರೆ. 7 ಶತಕ ಸಿಡಿಸಿದ್ದಾರೆ. ಆದ್ರೂ, ಆಸ್ಟ್ರೇಲಿಯಾದಲ್ಲಿ ಓಪನರ್ ಆಗಿ ರಾಹುಲ್ ಸಕ್ಸಸ್ ಕಾಣಲ್ಲ ಎನ್ನಲಾಗ್ತಿದೆ.
/newsfirstlive-kannada/media/post_attachments/wp-content/uploads/2024/11/K-L-RAHUL.jpg)
ಅಸ್ಟ್ರೇಲಿಯಾದಲ್ಲಿ ಅಂದುಕೊಂಡಷ್ಟು ಸುಲಭವಿಲ್ಲ ಬ್ಯಾಟಿಂಗ್
2023ರಿಂದ ಕೇವಲ 8 ಟೆಸ್ಟ್​ ಪಂದ್ಯಗಳನ್ನಾಡಿರುವ ಕೆ.ಎಲ್.ರಾಹುಲ್​, 3 ಡಿಫರೆಂಟ್ ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ 8 ಪಂದ್ಯಗಳ ಪೈಕಿ 2 ಬಾರಿ ಓಪನರ್, 5 ಟೆಸ್ಟ್​ಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಕನ್ನಡಿಗ ಒಮ್ಮೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ದಿದ್ದಾರೆ.
ಟೀಮ್​ ಇಂಡಿಯಾ ಉಳಿದ ಆಟಗಾರರಿಗಿಂತ 2 ವಾರಗಳ ಮುನ್ನವೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದ ಕನ್ನಡಿಗ ರಾಹುಲ್​ ಆಸ್ಟ್ರೇಲಿಯಾ ಎ ಎದುರಿನ ಅನ್​ ಅಫಿಶಿಯಲ್ ಟೆಸ್ಟ್​ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ರು. ಆದ್ರೆ, ಫೇಲ್​ ಆದ್ರು. ಈ ವೈಫಲ್ಯ ಟೀಮ್ ಮ್ಯಾನೇಜ್​​​​ಮೆಂಟ್​ನ ಚಿಂತೆಗೆ ದೂಡಿದೆ. ಕೆ.ಎಲ್.ರಾಹುಲ್​ನ ಯಾವ​ ಸ್ಲಾಟ್​ನಲ್ಲಿ ಆಡಿಸೋದು ಅನ್ನೋ ಟೆನ್ಶನ್​ ಹೆಚ್ಚಿಸಿದೆ. ರಿಯಲ್​​ ಟೆಸ್ಟ್​ನಲ್ಲಿ ಆರಂಭಿಕನಾಗಿ ರಾಹುಲ್​ ಬ್ಯಾಟಿಂಗ್ ನಡೆಸುವುದು ಸುಲಭದ ವಿಚಾರ ಅಲ್ಲ. ಕೆ.ಎಲ್.ರಾಹುಲ್​ರ ಈ ಬ್ಯಾಟಿಂಗ್ ರೆಕಾರ್ಡ್​ ನೋಡಿದ್ರೆ, ಬೌನ್ಸಿ ಟ್ರ್ಯಾಕ್​​ನಲ್ಲಿ ಕೆ.ಎಲ್.ರಾಹುಲ್​​​​​​​​​​​​​​​​​​​​​ ಆರಂಭಿಕನಾಗಿ ಆಡಬೇಕಾ..? ಎಂಬ ಪ್ರಶ್ನೆಉದ್ಭವಿಸದೆ ಇರಲ್ಲ.
/newsfirstlive-kannada/media/post_attachments/wp-content/uploads/2024/11/K-L-RAHUL-2.jpg)
ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ಕೆ.ಎಲ್.ರಾಹುಲ್​, 5 ಪಂದ್ಯಗಳ 9 ಇನ್ನಿಂಗ್ಸ್​ಗಳಿಂದ ಜಸ್ಟ್​ 187 ರನ್ ಗಳಿಸಿದ್ದಾರೆ. ಅದು ಕೂಡ 20.77 ಬ್ಯಾಟಿಂಗ್ ಅವರೇಜ್ ಹೊಂದಿರುವ ಕೆ.ಎಲ್.ರಾಹುಲ್, ಒಂದೇ ಒಂದು ಶತಕ ದಾಖಲಿಸಿದ್ದಾರೆ.
ಟೀಮ್ ಮ್ಯಾನೇಜ್​ಮೆಂಟ್ ನಿರ್ಧಾರ ಏನಾಗುತ್ತೆ..?
1 ವರ್ಷದಿಂದ ಆರಂಭಿಕನಾಗಿ ಆಡದ ಕೆ.ಎಲ್.ರಾಹುಲ್​ಗೆ ಮತ್ತೆ ಇನ್ನಿಂಗ್ಸ್​ ಆರಂಭಿಸುವುದು ಸುಲಭವಲ್ಲ. ಗಿಲ್​ ಹೊರಬಿದ್ದಿರೋದ್ರಿಂದ 3ನೇ ಕ್ರಮಾಂಕದಲ್ಲಿ ಆಡ್ತಾರಾ ಅಂದ್ರೆ, ಓಪನರ್​​ ಯಾರು ಪ್ರಶ್ನೆ ಎಳಲಿದೆ. ಸದ್ಯಕ್ಕಿರೋದು ಓಪನಿಂಗ್ & 6ನೇ ಸ್ಲಾಟ್​. ಇವರೆಡರಲ್ಲಿ ಮ್ಯಾನೇಜ್​​ಮೆಂಟ್ ಕೆ.ಎಲ್.ರಾಹುಲ್​ನ ಯಾವ ಸ್ಲಾಟ್​​ನಲ್ಲಿ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇದನ್ನೂ ಓದಿ:ರಿಷಬ್ ಪಂತ್-ಬೂಮ್ರಾ ಮಧ್ಯೆ ಬಿಗ್ ವಾರ್.. ಬೌಲಿಂಗ್ ಕೋಚ್ ಮಾರ್ಕೆಲ್ ಸ್ಟನ್..!
ಅಂಕಿಅಂಶಗಳು ಏನೇ ಹೇಳಲಿ.. ಟೀಮ್ ಮ್ಯಾನೇಜ್​ಮೆಂಟ್ ನಿರ್ಧಾರ ಏನೇ ಆಗಿರಲಿ. ರಾಹುಲ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಗೋದಂತು ಪಕ್ಕಾ. ಸಿಕ್ಕ ಅವಕಾಶವನ್ನು ಕೆ.ಎಲ್.ರಾಹುಲ್ ಸದ್ಬಳಕೆ ಮಾಡಿಕೊಂಡು ಸ್ಥಾನ ಗಟ್ಟಿ ಮಾಡಿಕೊಳ್ಳಲಿ ಅನ್ನೋದೇ ಕನ್ನಡಿಗರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us