newsfirstkannada.com

ಯಾದಗಿರಿಯಲ್ಲಿ ದೇಶದ‌ ಹೆಮ್ಮೆಯ ಪ್ರತೀಕ ರಾಷ್ಟ್ರ ಲಾಂಛನಕ್ಕೆ ಅವಮಾನ; ನಾಲ್ಕೈದು ವರ್ಷಗಳಿಂದ ಬೀದಿಯಲ್ಲಿ ಅನಾಥ..!

Share :

27-08-2023

    1996ರಲ್ಲಿ ನಿರ್ಮಾಣ ಮಾಡಿದ ರಾಷ್ಟ್ರ ಲಾಂಛನ

    ಅನಾಥವಾಗಿ ಬಿದ್ದಿದೆ ರಾಷ್ಟ್ರ ಲಾಂಛನ

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು

ಯಾದಗಿರಿ ಜಿಲ್ಲೆಯ ವಡೋರಾದಲ್ಲಿ ದೇಶದ ರಾಷ್ಟ ಲಾಂಛನಕ್ಕೆ ಅವಮಾನ ಮಾಡಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೀದಿಯ ಬದಿ ದೇವಸ್ಥಾನದ ಕಟ್ಟೆ ಮೇಲೆ ರಾಷ್ಟ್ರೀಯ ಲಾಂಛನ ಅನಾಥವಾಗಿ ಬಿದ್ದಿದೆ. ಹಲವು ಸಮಯದಿಂದ ಗ್ರಾಮದಲ್ಲಿ ಇದೇ ಸ್ಥಿತಿಯಲ್ಲಿ ಲಾಂಛನ ಬಿದ್ದಿದ್ದು, ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಅಲ್ಲಿನ ದೇವಸ್ಥಾನದ ಕಟ್ಟೆ ಮೇಲೆ ಅಶೋಕ ಚಕ್ರದ ಬೃಹತ್ ಲಾಂಛನವಿದೆ. ಕಳೆದ ನಾಲ್ಕೈದು ವರ್ಷಗಳಿಂದ ರಾಷ್ಟ್ರ ಲಾಂಛನ ಬೀದಿಯಲ್ಲಿದೆ. 1996ರಲ್ಲಿ ಗ್ರಾಮದಲ್ಲಿ 50-60 ಸಾವಿರಾರು ರೂಪಾಯಿ ಖರ್ಚು ಮಾಡಿ ಇದನ್ನು ನಿರ್ಮಾಣ ಮಾಡಲಾಗಿತ್ತು. ಮುಖ್ಯದ್ವಾರಕ್ಕೆ ರಾಷ್ಟ್ರ ಲಾಂಛನ ಅಳವಡಿಸಲಾಗಿತ್ತು.

ರಾಷ್ಟ್ರ ಲಾಂಛನಕ್ಕೆ ಅವಮಾನ 

ಕಳೆದ ನಾಲ್ಕೈದು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ರಾಷ್ಟ್ರ ಲಾಂಛನ ತೆಗೆಯಲಾಗಿತ್ತು. ಅಂದಿನಿಂದ ಇಂದಿನವರೆಗೂ ರಾಷ್ಟ್ರ ಲಾಂಛನ ಅನಾಥವಾಗಿ ಬಿದ್ದಿದೆ. ಲಾಂಛನ ಸುರಕ್ಷಿತವಾಗಿಡದೇ ನಿರ್ಲಕ್ಷ್ಯ ಮಾಡಿ, ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡಲಾಗಿದೆ.

ಗ್ರಾಮಸ್ಥರ ಆಕ್ರೋಶ

ಕೊಳಚೆಯಾಗಿರುವ, ಹಂದಿಗಳು ವಾಸ ಮಾಡುವ ಜಾಗದ ಪಕ್ಕದಲ್ಲಿ ರಾಷ್ಟ್ರ ಲಾಂಛನ ಅನಾಥವಾಗಿ ಬಿದ್ದ್ದಿದೆ. ಇದನ್ನು ನೋಡಿಯು ನೋಡದಂತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಡಗೇರಾ ಗ್ರಾಮಸ್ಥರ ಹಿಡಿಶಾಪ ಹಾಕುತ್ತಿದ್ದಾರೆ. ರಾಷ್ಟ್ರ ಲಾಂಛನಕ್ಕೆ ಅಪಮಾನ ಮಾಡಿದ್ದಾರೆ, ಕೂಡಲೇ ಗೌರವ ಸೂಚಿಸುವ ಕೆಲಸ ಮಾಡಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾದಗಿರಿಯಲ್ಲಿ ದೇಶದ‌ ಹೆಮ್ಮೆಯ ಪ್ರತೀಕ ರಾಷ್ಟ್ರ ಲಾಂಛನಕ್ಕೆ ಅವಮಾನ; ನಾಲ್ಕೈದು ವರ್ಷಗಳಿಂದ ಬೀದಿಯಲ್ಲಿ ಅನಾಥ..!

https://newsfirstlive.com/wp-content/uploads/2023/08/Rastra-Lanchana.jpg

Load More